ಕರ್ನಾಟಕ

karnataka

ಟಿಬಿ ಲಸಿಕೆ ಹೊರ ತರುವ ಚಿಂತನೆಯಲ್ಲಿ ಭಾರತ್​​ ಬಯೋಟೆಕ್

By

Published : Feb 24, 2022, 8:48 PM IST

Bharat Biotech working on TB vaccine.. ಭಾರತ್ ಬಯೋಟೆಕ್ ಕ್ಷಯರೋಗದ ವಿರುದ್ಧ ಲಸಿಕೆಯನ್ನು ಹೊರತರುವ ಬಗ್ಗೆ ಚಿಂತನೆ ನಡೆಸಿದೆ. ಈ ಸಂಬಂಧ ಶೀಘ್ರದಲ್ಲೇ ಸಂಸ್ಥೆಯು ತಂತ್ರಜ್ಞಾನಕ್ಕಾಗಿ ಮತ್ತೊಂದು ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದೆ. ಈ ಕುರಿತಂತೆ ಭಾರತ್ ಬಯೋಟೆಕ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲ ಮಾಹಿತಿ ನೀಡಿದ್ದಾರೆ.

Bharat Biotech working on TB vaccine
ಟಿಬಿ ಲಸಿಕೆ ಹೊರ ತರುವ ಚಿಂತನೆಯಲ್ಲಿ ಭಾರತ್​​ ಬಯೋಟೆಕ್

ನವದೆಹಲಿ :ಕೋವಿಡ್ ವಿರುದ್ಧ ಕೋವಾಕ್ಸಿನ್ ಲಸಿಕಾ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಕ್ಷಯರೋಗದ ವಿರುದ್ಧ ಲಸಿಕೆಯನ್ನು ಹೊರತರುವ ಚಿಂತನೆ ನಡೆಸಿದೆ. ಈ ಹಿನ್ನೆಲೆ ಶೀಘ್ರದಲ್ಲೇ ಸಂಸ್ಥೆಯು ತಂತ್ರಜ್ಞಾನಕ್ಕಾಗಿ ಮತ್ತೊಂದು ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದೆ.

ಪ್ರಧಾನಿ ನರೇಂದ್ರ ಮೋದಿಯವರು 2025ರ ಒಳಗೆ ಕ್ಷಯರೋಗ ನಿರ್ಮೂಲನೆಗಾಗಿ ಕಾರ್ಯಸೂಚಿಯನ್ನು ರೂಪಿಸಿದ್ದಾರೆ. ನಾವು ಅದೇ ದಿಕ್ಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಆದರೆ ನಮ್ಮಲ್ಲಿ ಟಿಬಿ ಲಸಿಕಾ ತಯಾರಿಕಾ ತಂತ್ರಜ್ಞಾನ ಇಲ್ಲದಿರುವುದರಿಂದ ಬೇರೆಯವರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುತ್ತಿದ್ದೇವೆ. ಆ ವಿಷಯದ ಬಗ್ಗೆ ನಾವು ಶೀಘ್ರದಲ್ಲೇ ಘೋಷಿಸುತ್ತೇವೆ ಎಂದು ಭಾರತ್ ಬಯೋಟೆಕ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲ ಹೇಳಿದ್ದಾರೆ.

ಬಯೋಏಷ್ಯಾ 2022 ರ ಭಾಗವಾಗಿ ಪ್ಯಾನೆಲ್ ಚರ್ಚೆಯಲ್ಲಿ ಮಾತನಾಡಿದ ಅವರು, ಭಾರತ್ ಬಯೋಟೆಕ್ ಒಪ್ಪಂದಕ್ಕೆ ಸಹಿ ಹಾಕುವ ಸಂಸ್ಥೆಯ ವಿವರಗಳನ್ನು ನೀಡದೆ ಎಲ್ಲಾ ಟಿಬಿ (TB) ಲಸಿಕೆಗಳು ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗದಲ್ಲಿವೆ ಎಂದು ಮಾಹಿತಿ ನೀಡಿದರು.

ಕಳೆದ ತಿಂಗಳು ಭಾರತ್ ಬಯೋಟೆಕ್​ ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ಬಿಬಿವಿ 154ಗಾಗಿ 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮೋದನೆಯನ್ನು ಪಡೆದುಕೊಂಡಿತ್ತು.

ಇದನ್ನೂ ಓದಿ: ಅಭಿಮತ: ರಷ್ಯಾದ ಸೈನ್ಯ ಶಕ್ತಿಯೆದುರು ನಿಲ್ಲುವುದೇ ಉಕ್ರೇನ್?

TAGGED:

ABOUT THE AUTHOR

...view details