ನವದೆಹಲಿ:ಜನವರಿ 3ರಿಂದ ದೇಶದಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈಗಾಗಲೇ 3.5 ಕೋಟಿಗೂ ಅಧಿಕ ಮಕ್ಕಳಿಗೆ ಮೊದಲನೇ ಡೋಸ್ ನೀಡಲಾಗಿದೆ.
'ಮಕ್ಕಳಿಗೆ ಕೋವ್ಯಾಕ್ಸಿನ್ ಬಿಟ್ಟು ಬೇರೆ ಲಸಿಕೆ ನೀಡಬೇಡಿ': ಆರೋಗ್ಯ ಕಾರ್ಯಕರ್ತರಿಗೆ ಭಾರತ್ ಬಯೋಟೆಕ್ ಮನವಿ
ಮಕ್ಕಳಿಗೆ ಕೋವ್ಯಾಕ್ಸಿನ್ ಬಿಟ್ಟು ಬೇರೆ ಲಸಿಕೆ ನೀಡುತ್ತಿರುವ ವರದಿಗಳು ಬರುತ್ತಿರುವ ಕಾರಣ ಇದೀಗ ಆರೋಗ್ಯ ಕಾರ್ಯಕರ್ತರ ಬಳಿ ಭಾರತ್ ಬಯೋಟೆಕ್ ವಿಶೇಷ ಮನವಿ ಮಾಡಿಕೊಂಡಿದೆ.
Healthcare workers COVAXIN for Childreen
ಇದರ ಬೆನ್ನಲ್ಲೇ ಕೋವ್ಯಾಕ್ಸಿನ್ ಲಸಿಕೆ ಹೊರತುಪಡಿಸಿ ಬೇರೆ ಲಸಿಕೆ ನೀಡಿರುವ ಬಗ್ಗೆ ಅನೇಕ ದೂರುಗಳು ಬಂದಿವೆ. ಇದೇ ಕಾರಣಕ್ಕಾಗಿ ಭಾರತ್ ಬಯೋಟೆಕ್ ಆರೋಗ್ಯ ಕಾರ್ಯಕರ್ತರಲ್ಲಿ ವಿಶೇಷ ಮನವಿ ಮಾಡುತ್ತಿದೆ.
ದೇಶದಲ್ಲಿ ಆರೋಗ್ಯ ಕಾರ್ಯಕರ್ತರು ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆ ಬಿಟ್ಟು ಬೇರೆ ಯಾವುದೇ ಲಸಿಕೆಯನ್ನು ಮಕ್ಕಳಿಗೆ ನೀಡಬಾರದು. 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಮಾತ್ರ ನೀಡುವಂತೆ ಸಂಸ್ಥೆ ತಿಳಿಸಿದೆ.