ಕರ್ನಾಟಕ

karnataka

ಪ. ಬಂಗಾಳಕ್ಕೆ ಹೋಗಲು ಈ ರಾಜ್ಯಗಳಿಂದ ಕೋವಿಡ್ ನೆಗೆಟಿವ್​ ವರದಿ ಕಡ್ಡಾಯ!

By

Published : Apr 23, 2021, 9:49 PM IST

ಪಶ್ಚಿಮ ಬಂಗಾಳಕ್ಕೆ ಹೋಗಬೇಕಾದರೆ ಇದೀಗ ಕೆಲವೊಂದು ರಾಜ್ಯದ ಜನರಿಗೆ ಆರ್​ಟಿ - ಪಿಸಿಆರ್​ ವರದಿ ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ.

Bengal makes negative Covid
Bengal makes negative Covid

ಕೋಲ್ಕತ್ತಾ:ಮಹಾಮಾರಿ ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಕೆಲವೊಂದು ರಾಜ್ಯಗಳು ಬೇರೆ ರಾಜ್ಯಗಳಿಂದ ಬರುವ ಜನರ ಮೇಲೆ ನಿರ್ಬಂಧ ವಿಧಿಸುತ್ತಿದ್ದು, ಇದೀಗ ಪಶ್ಚಿಮ ಬಂಗಾಳ ಸರ್ಕಾರ ಕೂಡ ಅಂತಹದ್ದೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ಆರ್​​​ಟಿ-ಪಿಸಿಆರ್​ ವರದಿ ಕಡ್ಡಾಯ

ವಿಮಾನಯಾನದ ಮೂಲಕ ಪಶ್ಚಿಮ ಬಂಗಾಳಕ್ಕೆ ತೆರಳುವ ನಾಲ್ಕು ರಾಜ್ಯದ ಜನರಿಗೆ ಇದೀಗ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್​​ ಹಾಗೂ ಛತ್ತೀಸಗಢ ರಾಜ್ಯದ ಜನರಿಗೆ ಆರ್​​ಟಿ-ಪಿಸಿಆರ್​​ ವರದಿ ಕಡ್ಡಾಯ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ವಿಮಾಯಾನ ಇಲಾಖೆಗೆ ಈಗಾಗಲೇ ಮಾಹಿತಿ ಸಹ ನೀಡಿದೆ.

ವರದಿ 72 ಗಂಟೆಯೊಳಗೆ ಮಾಡಿಸಿದ್ದಾಗಿರಬೇಕು ಎಂಬ ನಿಯಮ ಹೊರಡಿಸಲಾಗಿದ್ದು, ಈ ನಿಯಮ ಇಂದಿನಿಂದಲೇ ಜಾರಿಗೊಳ್ಳಲಿದ್ದು, ಏಪ್ರಿಲ್​​ 26ರವರೆಗೆ ಚಾಲ್ತಿಯಲ್ಲಿರುತ್ತದೆ.

ಇದನ್ನೂ ಓದಿ: ಆರ್​ಟಿಪಿಸಿಆರ್ ಟೆಸ್ಟ್​ನಿಂದ ಹೊಸ ರೂಪಾಂತರ ವೈರಸ್​ ಪತ್ತೆ ಸಾಧ್ಯವಿಲ್ಲ..

ಈಗಾಗಲೇ ಮಹಾರಾಷ್ಟ್ರ, ಕರ್ನಾಟಕ, ಕೇರಳ ಹಾಗೂ ತೆಲಂಗಾಣದಿಂದ ಹೋಗುವ ಜನರಿಗೆ ಆರ್​​ಟಿ-ಪಿಸಿಆರ್​ ವರದಿ ಕಡ್ಡಾಯಗೊಳಿಸಿ ಅಲ್ಲಿನ ಸರ್ಕಾರ ಆದೇಶ ಹೊರಹಾಕಿತ್ತು. ಪಶ್ಚಿಮ ಬಂಗಾಳದಲ್ಲಿದ್ದು 12,876 ಕೋವಿಡ್​​ ಪ್ರಕರಣ ದಾಖಲಾಗಿದ್ದು, 59 ಜನರು ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 74,000 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details