ಕರ್ನಾಟಕ

karnataka

ಆಟೋ ನಿಲ್ಲಿಸದೇ ಸಬ್‌ಇನ್ಸ್​ಪೆಕ್ಟರ್​ಗೆ ಡಿಕ್ಕಿ ಹೊಡೆದ ಚಾಲಕ: ಸಿಸಿಟಿವಿ ದೃಶ್ಯ

By

Published : Apr 5, 2022, 2:26 PM IST

ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿ ತೊಡಗಿದ್ದ ಪೊಲೀಸ್‌ ಸಬ್​ ಇನ್ಸ್​ಪೆಕ್ಟರ್​ಗೆ ಆಟೋ ಗುದ್ದಿಸಿರುವ ಚಾಲಕ ಬಳಿಕ ಸ್ಥಳದಿಂದ ಪರಾರಿಯಾಗಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

Auto driver hit to Police sub Inspector in Tamil Nadu, Chennai Crime news, Police sub Inspector accident in Tamil Nadu, Tamil Nadu news, ಪೊಲೀಸ್ ಸಬ್​ ಇನ್ಸ್​ಪೆಕ್ಟರ್​ಗೆ ಡಿಕ್ಕಿ ಹೊಡೆದ ಆಟೋ ಚಾಲಕ, ಚೆನ್ನೈ ಅಪರಾಧ ಸುದ್ದಿ, ತಮಿಳುನಾಡಿನಲ್ಲಿ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ಗೆ ಅಪಘಾತ, ತಮಿಳುನಾಡು ಸುದ್ದಿ,
ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಚೆನ್ನೈ:ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಬ್​ ಇನ್ಸ್​ಪೆಕ್ಟರ್​ಗೆ ಆಟೋ ಗುದ್ದಿಸಿ ಚಾಲಕ ಪರಾರಿಯಾಗಿರುವ ಘಟನೆ ನಂದಂಬಾಕ್ಕಂನಲ್ಲಿ ನಡೆದಿದೆ. ಪರಿಣಾಮ, ಸಬ್​ ಇನ್ಸ್​ಪೆಕ್ಟರ್​ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಸಬ್​ ಇನ್ಸ್​ಪೆಕ್ಟರ್​ ಬೋನ್​ರಾಜ್ ನಂದಂಬಾಕ್ಕಂ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಪ್ರಿಲ್​ 3 ರಂದು ರಾತ್ರಿ ನಂದಂಬಾಕ್ಕಂ ರಸ್ತೆಯಲ್ಲಿ ಸಿಬ್ಬಂದಿ ಜೊತೆ ವಾಹನ ತಪಾಸಣೆಯಲ್ಲಿ ತೊಡಗಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಬರುತ್ತಿದ್ದ ಆಟೋ ರಿಕ್ಷಾ ನಿಲ್ಲಿಸುವಂತೆ ಬೋನ್‌ರಾಜ್‌ ಚಾಲಕನಿಗೆ ಸೂಚಿಸಿದ್ದಾರೆ. ಆದ್ರೆ ಚಾಲಕ ವಾಹನವನ್ನು ನಿಲ್ಲಿಸದೇ ಸಬ್‌ ಇನ್ಸ್‌ಪೆಕ್ಟರ್‌ ಮೇಲೆ ಗುದ್ದಿಸಿ ಪರಾರಿಯಾಗಿದ್ದಾನೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ:ರಕ್ಷಕನು ಇವನೇ.. ಬೆಂಕಿಯಲ್ಲಿ ಸಾಹಸ.. ಹಸುಗೂಸನ್ನು ರಕ್ಷಿಸಿದ ಕಾನ್ಸ್​ಟೇಬಲ್!

ABOUT THE AUTHOR

...view details