ಕರ್ನಾಟಕ

karnataka

ಭಾನುವಾರದ ರಾಶಿ ಭವಿಷ್ಯ : ಪ್ರತಿಕೂಲ ಪರಿಸ್ಥಿತಿ ಎದುರಿಸಲು ತಾಳ್ಮೆ ಇರಲಿ

By

Published : Feb 19, 2023, 4:00 AM IST

ಇಂದಿನ ರಾಶಿ ಭವಿಷ್ಯ ಹೀಗಿದೆ..

Astrological prediction for today
ಭಾನುವಾರದ ರಾಶಿ ಭವಿಷ್ಯ : ಪ್ರತಿಕೂಲ ಪರಿಸ್ಥಿತಿ ಎದುರಿಸಲು ತಾಳ್ಮೆ ಇರಲಿ

ಮೇಷ:ನೀವು ಕಲ್ಪನಾಶಕ್ತಿ ಮತ್ತು ಉದ್ಯಮಶೀಲ ವ್ಯಕ್ತಿ. ಇಂದು ನಿಮ್ಮ ಕೆಲಸದಲ್ಲಿ ಯಶಸ್ವಿಯಾಗಲಿದ್ದೀರಿ. ನೀವು ಮಹತ್ವಾಕಾಂಕ್ಷೆ ಹೊಂದಿರುತ್ತೀರಿ ಆದರೆ ನೀವು ನಿರ್ವಹಿಸುವುದಕ್ಕಿಂತ ಹೆಚ್ಚು ಕೆಲಸ ತೆಗೆದುಕೊಳ್ಳದೇ ಇರುವುದು ಸೂಕ್ತ. ನಿಮ್ಮ ಸಾಮರ್ಥ್ಯಗಳ ಕುರಿತು ನೀವು ಸಕಾರಾತ್ಮಕವಾಗಿರುತ್ತೀರಿ. ಆದ್ದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿ ಮತ್ತು ದೇವರಲ್ಲಿ ವಿಶ್ವಾಸವಿರಿಸಿ.

ವೃಷಭ:ನಿಮ್ಮ ಒತ್ತಡದ ಜೀವನದಿಂದ ಬಿಡುವು ಪಡೆದು ವಿಶ್ರಾಂತಿ ಪಡೆದುಕೊಳ್ಳುವುದು ಉತ್ತಮ. ನಿಮ್ಮ ಪ್ರೀತಿಪಾತ್ರರನ್ನು ಆಹ್ವಾನಿಸಿ ಅವರೊಂದಿಗೆ ಮಹತ್ತರ ಕಾಲ ಕಳೆಯಿರಿ. ಈ ದಿನ ಭರ್ಜರಿ ಭೋಜನ ಸವಿಯುವ ನಿಮ್ಮ ಆಸೆ ಈಡೇರಲಿದೆ.

ಮಿಥುನ:ಇಂದು ನೀವು ಆತಂಕ ಮತ್ತು ಅಸೌಖ್ಯ ಅನುಭವಿಸಬಹುದು ಮತ್ತು ನೀವು ಅದನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಇರಬಹುದು. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಮಾತ್ರವೇ ನೀವು ಪ್ರೀತಿಸಿದವರ ಗೋಪ್ಯ ಪ್ರೀತಿಯನ್ನು ಪಡೆಯುತ್ತೀರಿ. ಇಲ್ಲಿಯವರೆಗೂ ಆಗಿದ್ದು ಆಗಿಹೋಯಿತು. ಹಳೆಯದನ್ನು ಹಿಂದಕ್ಕೆ ಬಿಡಿ ಮತ್ತು ವಿಶ್ವಾಸದಿಂದ ಉಜ್ವಲ ನಾಳೆಯತ್ತ ಮುನ್ನಡೆಯಿರಿ.

ಕರ್ಕಾಟಕ:ನಿಮ್ಮ ಮನಸ್ಥಿತಿ ಅಥವಾ ಮನಸ್ಸು ಅವಿಶ್ರಾಂತ ಮತ್ತು ಕೆರಳಿಸುವಂತಿರುತ್ತದೆ. ಪ್ರತಿಕೂಲ ಪರಿಸ್ಥಿತಿಗಳು ನಿಮ್ಮ ಮನೆಬಾಗಿಲು ತಟ್ಟುತ್ತವೆ, ಆದ್ದರಿಂದ ತಾಳ್ಮೆ ಇರಲಿ ಮತ್ತು ಅವುಗಳನ್ನು ಧೈರ್ಯದಿಂದ ಎದುರಿಸಿರಿ. ಈ ಧೈರ್ಯ ನಿಮ್ಮನ್ನು ಅಗೋಚರವಾದ ಯಶಸ್ಸಿನತ್ತ ಮುನ್ನಡೆಸುತ್ತದೆ. ಮುಂಗೋಪದ ಮನೋಭಾವದ ಮನಸ್ಸುಗಳು ಪ್ರತಿಕೂಲತೆಯನ್ನು ಎದುರಿಸಲು ಕಷ್ಟಪಡಬಹುದು.

ಸಿಂಹ:ಇಂದು ನೀವು ಅಸಾಧಾರಣ ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ದೃಢ ನಿರ್ಧಾರ ಕೈಗೊಳ್ಳಲು ಶಕ್ತರಾಗುತ್ತೀರಿ. ಇಂದು ನಿಮ್ಮ ಕೆಲಸಗಳನ್ನು ಪೂರೈಸುವಲ್ಲಿ ಯಾವುದೇ ಕಷ್ಟಗಳನ್ನು ಕಾಣುವುದಿಲ್ಲ ಮತ್ತು ಯಶಸ್ಸು ಸಾಧಿಸುತ್ತೀರಿ.

ಕನ್ಯಾ: ವೈಯಕ್ತಿಕ ವ್ಯವಹಾರಗಳು ವೃತ್ತಿಪರತೆಯನ್ನು ಮಸುಕಾಗಿಸುತ್ತವೆ. ಇಂದು ನೇರವಾಗಿ ನಿಮ್ಮ ಸಮಸ್ಯೆಗಳನ್ನು ಎದುರಿಸುವ ಮೂಲಕ ಅವುಗಳನ್ನು ದೂರ ತಳ್ಳಿರಿ. ಸಂಜೆ ವೇಳೆಗೆ ವಿಶ್ರಾಂತಿ ಪಡೆದು ಆನಂದಿಸಿ.

ತುಲಾ: ನಿಮ್ಮ ಕೆಲಸದ ಕ್ಷೇತ್ರದಲ್ಲಿ ನಿಮ್ಮ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಿ ಜನರನ್ನು ಪ್ರಭಾವಿತಗೊಳಿಸುತ್ತೀರಿ. ನೀವು ಕಲೆ ಮತ್ತು ಕಲಾತ್ಮಕ ವಿಷಯಗಳಲ್ಲಿ ಆಸಕ್ತಿ ಹೊಂದುತ್ತೀರಿ. ಮತ್ತು ನೀವು ಇಂದು ಹೊಸ ಕಲಾಕೃತಿ ಕೊಳ್ಳಲಿದ್ದೀರಿ.

ವೃಶ್ಚಿಕ:ಇಂದು ನೀವು ಸಾಕಷ್ಟು ಕೆಲಸದ ಒತ್ತಡದಿಂದ ದಣಿಯುತ್ತೀರಿ. ದಿನದ ಅಂತ್ಯಕ್ಕೆ, ಯೋಗ, ಧ್ಯಾನ ಅಥವಾ ಲಘು ಸಂಗೀತದಂತಹ ಒತ್ತಡ ನಿವಾರಿಸುವ ಚಟುವಟಿಕೆಗಳನ್ನು ಮಾಡಿರಿ.

ಧನು: ನಿಮ್ಮ ಪ್ರೀತಿ ಚಲನೆಯಲ್ಲಿರುವಂತೆ ಕಾಣುತ್ತಿದೆ. ನೀವು ಪ್ರಣಯದ ಅಥವಾ ತಾರೆಗಳ ಪ್ರಭಾವದಲ್ಲಿದ್ದೀರಿ ಮತ್ತು ಆದ್ದರಿಂದ ನೀವು ಇತರರನ್ನು ಸೆಳೆಯಬಹುದು. ಆದರೆ ಈ ವಿಚಾರದಲ್ಲಿ ನೀವು ಬಹಳ ಜಾಗರೂಕರಾಗಿರಬೇಕು.

ಮಕರ:ನೀವು ಹೆಚ್ಚುಕಾಲ ಅತಿಯಾದ ಭಾರದ ಕಾರ್ಯದೊತ್ತಡ ಸಹಿಸಲು ಸಾಧ್ಯವಿಲ್ಲ. ಅತ್ಯಂತ ಜಾಣ್ಮೆಯಿಂದ ನಿಮ್ಮ ಕೆಲಸಗಳನ್ನು ಪೂರೈಸುತ್ತೀರಿ ಮತ್ತು ನಿಧಾನವಾಗಿಯಾದರೂ ಸ್ಥಿರವಾಗಿ ನಿಮ್ಮ ಭಾರವನ್ನು ಭುಜಗಳಿಂದ ಕೆಳಗೆ ಇಳಿಸುತ್ತೀರಿ. ತಪ್ಪುಗಳಾಗುವ ಸಾಧ್ಯತೆಯನ್ನು ಕಡಿಮೆ ಮಾಡಲು ಎಚ್ಚರ ಮತ್ತು ಲಕ್ಷ್ಯ ನೀಡಿರಿ.

ಕುಂಭ:ಇಂದು ನೀವು ಸರಿಯಾಗಿ ಗುರಿ ಇಟ್ಟು ಹೊಡೆಯುತ್ತೀರಿ. ಅತ್ಯಂತ ಸಣ್ಣದರಿಂದ ದೊಡ್ಡದರವರೆಗೆ, ನಿಮ್ಮ ಎಲ್ಲಾ ಯೋಜನೆಗಳೂ ವಾಸ್ತವಗೊಳ್ಳುತ್ತವೆ. ನಿಮ್ಮ ದಾರಿಯಲ್ಲಿ ಕೆಲ ಅಡೆತಡೆಗಳಿದ್ದರೆ ನಿರಾಶೆಗೊಳ್ಳಬೇಡಿ. ಸವಾಲುಗಳನ್ನು ಎದುರಿಸಲು ಸಂಪೂರ್ಣ ಸನ್ನದ್ಧರಾಗಿದ್ದೀರಿ ಮತ್ತು ವಿಜಯೋತ್ಸಾಹದಿಂದ ಹೊರಬರುತ್ತೀರಿ.

ಮೀನ:ನಿಮ್ಮ ಗ್ರಹಗಳ ಜೋಡಣೆ ಪೂರಕವಾಗಿಲ್ಲ, ನೀವು ಇಂದು ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸುವುದು ಉತ್ತಮವಲ್ಲ. ಇಂದು ಯಾವುದೇ ಯೋಜನೆಯಿಂದ ಪಡೆಯುವ ಅನುಕೂಲಗಳು ಅದರೊಂದಿಗೆ ಒಳಗೊಂಡಿರುವ ರಿಸ್ಕ್ ಗಳಿಂದಾಗಿ ಸಮರ್ಥನೀಯವಲ್ಲ. ವ್ಯಾಪಾರದಲ್ಲಿರುವ ಜನರು ತಮ್ಮ ಎಲ್ಲಾ ವ್ಯವಹಾರಗಳಲ್ಲೂ ಹೆಚ್ಚು ಜಾಗರೂಕರಾಗಿರಬೇಕು. ವೈಯಕ್ತಿಕ ಜೀವನ ದೇವರ ಕೃಪೆಯಿಂದ ಶಾಂತಿಯುತವಾಗಿರುತ್ತದೆ.

ABOUT THE AUTHOR

...view details