ಕರ್ನಾಟಕ

karnataka

ಪೂಂಚ್ ಜಿಲ್ಲೆಯಲ್ಲಿ ಮೂವರು ನಾಗರಿಕರ ಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಸೇನೆ ಆದೇಶ

By ETV Bharat Karnataka Team

Published : Dec 25, 2023, 1:14 PM IST

Army orders court of inquiry: ಸುರನ್‌ಕೋಟೆ ಪೂಂಚ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕರು ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಅಲ್ಲದೇ, ಮೂವರು ಗಾಯಗೊಂಡಿದ್ದರು. ಈ ಘಟನಾ ಸ್ಥಳದ ಸಮೀಪದಲ್ಲೇ ಮೂವರು ನಾಗರಿಕರ ಮೃತದೇಹಗಳು ಅನುಮಾನಾಸ್ಪದವಾಗಿ ಪತ್ತೆಯಾಗಿದ್ದವು. ಈ ಕುರಿತು ಭಾರತೀಯ ಸೇನೆಯು ಕೋರ್ಟ್​​​ ಆಫ್​ ಇನ್​​​​​ಕ್ವಾಯರಿಗೆ ಆದೇಶಿಸಿದೆ.

Army orders court of inquiry
ಪೂಂಚ್ ಜಿಲ್ಲೆಯಲ್ಲಿ ಮೂವರು ನಾಗರಿಕರ ಹತ್ಯೆ ಪ್ರಕರಣ: ನ್ಯಾಯಾಲಯದ ತನಿಖೆಗೆ ಸೇನೆ ಆದೇಶ

ಜಮ್ಮು (ಜಮ್ಮು ಮತ್ತು ಕಾಶ್ಮೀರ):ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸುರನ್‌ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಧೇರಾ ಕಿ ಗಲಿ ಮತ್ತು ಬುಫ್ಲಿಯಾಜ್ ನಡುವಿನ ಧಾತ್ಯಾರ್ ಮೋರ್‌ನಲ್ಲಿ ಗುರುವಾರ (ಡಿ.21ರಂದು) ಭಯೋತ್ಪಾದಕರು ಎರಡು ಸೇನಾ ವಾಹನಗಳ ಮೇಲೆ ಹೊಂಚು ಹಾಕಿ ದಾಳಿ ನಡೆಸಿದ್ದರು. ನಾಲ್ವರು ಯೋಧರು ಹುತಾತ್ಮರಾಗಿದ್ದರು. ಅಲ್ಲದೇ, ಮೂವರು ಗಾಯಗೊಂಡಿದ್ದರು. ದಾಳಿ ನಡೆದಿದ್ದ ಸ್ಥಳದ ಹತ್ತಿರ ಶುಕ್ರವಾರ (ಡಿ.22 ರಂದು) ಅನುಮಾನಾಸ್ಪವಾಗಿ ಮೂವರು ಸಾರ್ವಜನಿಕರ ಶವಗಳು ಪತ್ತೆಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಯು ನ್ಯಾಯಾಂಗ ತನಿಖೆ ಆದೇಶ ನೀಡಿದೆ.

ಪೂಂಚ್ ಜಿಲ್ಲೆಯ ಬುಫ್ಲಿಯಾಜ್‌ನ ಟೋಪಾ ಪೀರ್ ಗ್ರಾಮದ ನಿವಾಸಿಗಳಾದ ಸಫೀರ್ ಹುಸೇನ್ (43), ಮೊಹಮ್ಮದ್ ಶೋಕೆಟ್ (27) ಮತ್ತು ಶಬೀರ್ ಅಹ್ಮದ್ (32) ಎಂಬ ಮೂವರು ನಾಗರಿಕರು ಮೃತಪಟ್ಟಿದ್ದರು. ಶುಕ್ರವಾರ (ಡಿಸೆಂಬರ್ 22 ರಂದು) ಸೇನೆಯು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಡೇರಾ ಕಿ ಗಲಿಯಲ್ಲಿ ಸೇನೆಯ ಮೇಲೆ ನಾಲ್ವರು ಸೈನಿಕರು ಸಾವನ್ನಪ್ಪಿದರು. ಮೂವರು ನಾಗರಿಕರು ನಿಗೂಢ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ. ಇವರಿಗೆ ಸೈನಿಕರು ಚಿತ್ರಹಿಂಸೆ ನೀಡಿ ಸಾಯಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದು, ಪೂಂಚ್ ಡೆಪ್ಯುಟಿ ಕಮಿಷನರ್ ಚೌಧರಿ ಮೊಹಮ್ಮದ್ ಯಾಸಿನ್ ಮತ್ತು ಹಿರಿಯ ಪೊಲೀಸ್ ಅಧೀಕ್ಷಕ ವಿನಯ್ ಕುಮಾರ್ ಅವರು ಬುಫ್ಲಿಯಾಜ್ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದರು.

ಅಂತರ್ಜಾಲ ಸೇವೆ ಸ್ಥಗಿತ: ಭಯೋತ್ಪಾದಕರ ಪತ್ತೆಗಾಗಿ ದಟ್ಟ ಅರಣ್ಯದಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಅಲ್ಲದೆ, ಪೂಂಚ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ವದಂತಿ ಹರಡುವಿಕೆ ತಡೆಗೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.

ಮೂರರಿಂದ ನಾಲ್ವರು ಶಸ್ತ್ರಸಜ್ಜಿತ ಭಯೋತ್ಪಾದಕರು ಗುರುವಾರ (ಡಿ.21ರಂದು) ಮಧ್ಯಾಹ್ನ ಸೇನೆಯ ಜಿಪ್​ ಹಾಗೂ ಟ್ರಕ್ ಮೇಲೆ ಗುಂಡಿನ ದಾಳಿ ಮಾಡಿದ್ದರು. ಘಟನೆಯಲ್ಲಿ ನಾಲ್ವರು ಸೈನಿಕರನ್ನು ಹುತಾತ್ಮರಾಗಿದ್ದರು. ದಾಳಿಯ ಬಳಿಕ, ಭಯೋತ್ಪಾದಕರು ಇಬ್ಬರು ಸೈನಿಕರ ಪಾರ್ಥಿವ ಶರೀರವನ್ನು ವಿರೂಪಗೊಳಿಸಿದ್ದಲ್ಲದೇ, ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗಿದ್ದರು ಎಂದು ವರದಿಯಾಗಿದೆ. ಲೆಫ್ಟಿನೆಂಟ್ ಜನರಲ್ ಸಂದೀಪ್​ ಜೈನ್ ಅವರು ಸ್ಥಳಕ್ಕೆ ಭೇಟಿ ನೀಡಿ, ಸೇನೆ ಮತ್ತು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ:ಅಯ್ಯೋ ವಿಧಿಯೇ, ಪ್ರತ್ಯೇಕ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿ ಆರು ಜನ ಸಾವು

ABOUT THE AUTHOR

...view details