ಕರ್ನಾಟಕ

karnataka

ದೇಶದ 'ಅತಿ ಹೆಚ್ಚು ತೆರಿಗೆ ಪಾವತಿದಾರ'ನೆಂಬ ಕೀರ್ತಿಗೆ ಭಾಜನರಾದ ನಟ ಅಕ್ಷಯ್ ಕುಮಾರ್

By

Published : Jul 25, 2022, 7:05 AM IST

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ದೇಶದ ಅತಿ ಹೆಚ್ಚು ತೆರಿಗೆ ಪಾವತಿದಾರ ಎಂಬ ಕೀರ್ತಿಗೆ ಭಾಜನರಾಗಿದ್ದು, ಆದಾಯ ತೆರಿಗೆ ಇಲಾಖೆಯು 'ಸಮ್ಮಾನ್ ಪತ್ರ' ನೀಡಿ ಗೌರವಿಸಿದೆ.

Akshay Kumar
ಅಕ್ಷಯ್ ಕುಮಾರ್

ಮುಂಬೈ: ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆಗಳಲ್ಲಿ ಒಬ್ಬರಾದ ನಟ ಅಕ್ಷಯ್ ಕುಮಾರ್ ಅವರನ್ನು ಆದಾಯ ತೆರಿಗೆ ಇಲಾಖೆಯು ಪ್ರಶಂಸಿಸಿ ದೇಶದ 'ಅತಿ ಹೆಚ್ಚು ತೆರಿಗೆ ಪಾವತಿದಾರ' ಎಂದು ಗೌರವಿಸಿದೆ. ಬಾಲಿವುಡ್ ಕಿಲಾಡಿಗೆ ಇಲಾಖೆಯು ಸಮ್ಮಾನ್​ ಪತ್ರ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಆದಾಯ ತೆರಿಗೆ ಇಲಾಖೆ ನೀಡಿದ 'ಸಮ್ಮಾನ್ ಪತ್ರ'

ಈ ಬಾರಿ ಅಕ್ಕಿ 29.5 ಕೋಟಿ ತೆರಿಗೆ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಸದ್ಯಕ್ಕೆ ನಟ ಟಿನು ದೇಸಾಯಿ ಅವರ ಮುಂಬರುವ ಚಿತ್ರದ ಶೂಟಿಂಗ್​​ಗಾಗಿ ಯುಕೆಯಲ್ಲಿದ್ದಾರೆ. ಹೀಗಾಗಿ, ಸಮ್ಮಾನ್ ಪತ್ರವನ್ನು ಅವರ ತಂಡ ಸ್ವೀಕರಿಸಿದೆ ಎಂದು ಹೇಳಲಾಗಿದೆ.

ಕಳೆದ 5 ವರ್ಷಗಳಲ್ಲಿ ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರರ ಪೈಕಿ ಅಕ್ಷಯ್‌ಗೆ ಈ ಗೌರವವನ್ನು ನೀಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರ ಎಂಬ ಕೀರ್ತಿಗೆ ಇವರು ಭಾಜನರಾಗಿದ್ದರು.

'ಸಮ್ಮಾನ್ ಪತ್ರ'ಕ್ಕೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಕಮೆಂಟ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. "ಆದಾಯ ತೆರಿಗೆ ಇಲಾಖೆಯು ಸೂಪರ್‌ಸ್ಟಾರ್ ಅಕ್ಷಯ್‌ಕುಮಾರ್‌ಗೆ ಸಮ್ಮಾನ್ ಪತ್ರ ನೀಡಿ ಗೌರವಿಸಿದೆ. ಕಳೆದ 5 ವರ್ಷಗಳಿಂದ ಉಳಿದ ಉದ್ಯಮಕ್ಕಿಂತ ಹೆಚ್ಚಿನ ಆದಾಯ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಅವರನ್ನು ಕೆನಡಿಯನ್ ಎಂದು ಕರೆಯುವ ದ್ವೇಷಿಗಳು ಮೊದಲು ಇದನ್ನು ನೋಡಬೇಕು" ಎಂದು ಚಾಟಿ ಬೀಸಿದ್ದಾರೆ.

ಆಗಸ್ಟ್ 11 ರಂದು ಬಿಡುಗಡೆಯಾಗಲಿರುವ 'ರಕ್ಷಾ ಬಂಧನ್​' ಸಿನಿಮಾದಲ್ಲಿ ಅಕ್ಷಯ್ ಭೂಮಿ ಪೆಡ್ನೇಕರ್ ಜೊತೆ ಪರದೆ ಹಂಚಿಕೊಂಡಿದ್ದಾರೆ. ಆನಂದ್ ಎಲ್‌.ರೈ ಅವರು 'ರಕ್ಷಾ ಬಂಧನ್' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಕಲರ್ ಯೆಲ್ಲೋ ಪ್ರೊಡಕ್ಷನ್ಸ್, ಝೀ ಸ್ಟುಡಿಯೋಸ್, ಅಲ್ಕಾ ಹಿರಾನಂದಾನಿ ಕೇಪ್ ಆಫ್ ಗುಡ್ ಫಿಲ್ಮ್ಸ್ ಸಹಯೋಗದಲ್ಲಿ ಸಿನಿಮಾ ಮೂಡಿ ಬಂದಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲೇ ದೆಹಲಿಯಲ್ಲಿ ಚಿತ್ರೀಕರಣ ಮುಕ್ತಾಯವಾಗಿದ್ದು, ನಾಲ್ವರು ತಂಗಿಯರ ಅಣ್ಣನಾಗಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ.

ಅಕ್ಷಯ್​ ನಟನೆಯ ಮತ್ತೊಂದು ಚಿತ್ರ 'ಸೆಲ್ಫಿ' ಫೆಬ್ರವರಿ 24, 2023 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಇಮ್ರಾನ್ ಹಶ್ಮಿ, ಡಯಾನಾ ಪೆಂಟಿ ಮತ್ತು ನುಶ್ರತ್ ಭರುಚ್ಚಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇದನ್ನೂ ಓದಿ:ಇಲ್ಲಿಯವರೆಗಿನ ನನ್ನ ಸಿನಿಮಾಗಳಲ್ಲಿ 'ರಕ್ಷಾ ಬಂಧನ' ಅತ್ಯುತ್ತಮ ಚಿತ್ರ: ಅಕ್ಷಯ್ ಕುಮಾರ್

ABOUT THE AUTHOR

...view details