ಕರ್ನಾಟಕ

karnataka

ನಾಲ್ಕು ವರ್ಷ ಪೂರೈಸಿದ 'ಅಗ್ನಿವೀರ'ರಿಗೆ ಇಸ್ರೋದಲ್ಲಿ ಉದ್ಯೋಗ: ಡಾ.ಸೋಮನಾಥ್

By

Published : Jul 10, 2022, 12:57 PM IST

'ಅಗ್ನಿಪಥ್ ಯೋಜನೆ'ಯಡಿ 4 ವರ್ಷ ಸೇವೆ ಸಲ್ಲಿಸಿದವರಿಗೆ ಇಸ್ರೋ ಉದ್ಯೋಗ ನೀಡಲಿದೆ ಎಂದು ಇಸ್ರೋ ಅಧ್ಯಕ್ಷ ಡಾ.ಸೋಮನಾಥ್ ತಿಳಿಸಿದರು.

ISRO Chairman Somanath
ಇಸ್ರೋ ಅಧ್ಯಕ್ಷ ಡಾ.ಸೋಮನಾಥ್

ಕೊಯಮತ್ತೂರು (ತಮಿಳುನಾಡು): ಅಗ್ನಿಪಥ ಯೋಜನೆಯಲ್ಲಿ ನಾಲ್ಕು ವರ್ಷ ಪೂರೈಸಿದವರಿಗೆ ಇಸ್ರೋದಲ್ಲಿ ಉದ್ಯೋಗ ನೀಡಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಹಾಗೂ ಭಾರತ ಸರ್ಕಾರದ ಬಾಹ್ಯಾಕಾಶ ವಿಭಾಗದ ಕಾರ್ಯದರ್ಶಿ ಡಾ.ಸೋಮನಾಥ್ ಹೇಳಿದ್ದಾರೆ. ಇಲ್ಲಿನ ಕಾರುಣ್ಯ ವಿಶ್ವವಿದ್ಯಾಲಯದ 26ನೇ ಘಟಿಕೋತ್ಸವದಲ್ಲಿ ಭಾಗಿಯಾದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.


ಉಪಗ್ರಹ ಹೊಂದಲು ಖಾಸಗಿಯವರಿಗೆ ಅವಕಾಶ: ಬಾಹ್ಯಾಕಾಶ ಕ್ಷೇತ್ರವನ್ನು ಸುಧಾರಿಸಲು ಸರ್ಕಾರ ಬಯಸಿದೆ. ಈ ನಿಟ್ಟಿನಲ್ಲಿ ಬಾಹ್ಯಾಕಾಶ ನೀತಿ 2022 ಅನ್ನು ರೂಪಿಸಲಾಗಿದೆ. ಇದರಲ್ಲಿ ಉಪಗ್ರಹಗಳನ್ನು ಹೊಂದಲು ಮತ್ತು ನಿರ್ವಹಿಸಲು ನಾವು ಖಾಸಗಿ ಘಟಕಗಳಿಗೆ ಅವಕಾಶ ನೀಡುತ್ತೇವೆ. ಪ್ರಸ್ತುತ, ಇಮೇಜಿಂಗ್ ಉಪಗ್ರಹಗಳು ಇಸ್ರೋ ಮತ್ತು ಡಿಫೆನ್ಸ್‌ನ ಒಡೆತನದಲ್ಲಿದೆ. ಆದರೆ ಈಗ ಖಾಸಗಿ ಸಂಸ್ಥೆಗಳು ಸಹ ಮಾಲೀಕತ್ವವನ್ನು ಹೊಂದಬಹುದು ಎಂದರು.

ಖಾಸಗಿ ಸಂಸ್ಥೆಗಳು ರಾಕೆಟ್‌ಗಳನ್ನು ಹೊಂದಬಹುದು, ಅಭಿವೃದ್ಧಿಪಡಿಸಬಹುದು ಮತ್ತು ಉಡಾವಣೆ ಮಾಡಬಹುದು. ಅವರು ಲಾಂಚ್ ಪ್ಯಾಡ್ ಸಹ ನಿರ್ಮಿಸಬಹುದು. ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮಾರ್ಗಗಳನ್ನು ಸೃಷ್ಟಿಸುವುದು ನಮ್ಮ ಗುರಿ ಎಂದು ಅವರು ಸ್ಪಷ್ಟಪಡಿಸಿದರು.

ನಾವು ಇತ್ತೀಚೆಗೆ ಅಭಿವೃದ್ಧಿಪಡಿಸಿದ ಸಣ್ಣ ಉಪಗ್ರಹ ಉಡಾವಣಾ ವಾಹನವನ್ನು (ಎಸ್‌ಎಸ್‌ಎಲ್‌ವಿ) ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಆಗಸ್ಟ್ ಆರಂಭದಲ್ಲಿ ಉಡಾವಣೆ ಮಾಡುತ್ತೇವೆ. ಗಗನ್ ಕಾರ್ಯಕ್ರಮಕ್ಕಾಗಿ ಪರೀಕ್ಷೆ ಮತ್ತು ಪ್ರಯೋಗಗಳು ನಡೆಯುತ್ತಿವೆ. ತಮಿಳುನಾಡು ಸರ್ಕಾರ ಟುಟಿಕೋರಿನ್ ಜಿಲ್ಲೆಯ ಕುಲಶೇಖರಪಟ್ಟಣಂನಲ್ಲಿ ರಾಕೆಟ್ ಉಡಾವಣಾ ಕೇಂದ್ರ ಸ್ಥಾಪಿಸಲು 2,000 ಎಕರೆ ಭೂಮಿ ಒದಗಿಸಿದೆ. ಎರಡು ವರ್ಷಗಳಲ್ಲಿ ಆ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಡಾ.ಸೋಮನಾಥ್‌ ಮಾಹಿತಿ ನೀಡಿದರು.

ಇದನ್ನೂ ಓದಿ:ಅಗ್ನಿಪಥ್ ಯೋಜನೆಯಡಿ ವಾಯುಪಡೆಗೆ ದಾಖಲೆಯ 7.5 ಲಕ್ಷ ಅರ್ಜಿ ಸಲ್ಲಿಕೆ!

ABOUT THE AUTHOR

...view details