ಕರ್ನಾಟಕ

karnataka

ಮೊದಲ ಹಂತದ ಮತದಾನ ಬಳಿಕ ಚುರುಕುಗೊಂಡ ಐಟಿ ಇಲಾಖೆ

By

Published : Dec 2, 2022, 7:11 PM IST

ಸರಿಸುಮಾರು 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಐಟಿ ತಂಡಗಳಿಂದ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಇನ್ನು ಸುಮಾರು 40 ಸ್ಥಳಗಳಲ್ಲಿ ಐಟಿ ದಾಳಿ ನಡೆಸುತ್ತಿವೆ. ಈ ಐಟಿ ರೈಡಿನಿಂದಾಗಿ ಲೆಕ್ಕಕ್ಕೆ ಸಿಗದ ದೊಡ್ಡ ಮೊತ್ತದ ವಹಿವಾಟು ಹಾಗೂ ತೆರಿಗೆ ವಂಚನೆಯಲ್ಲಿ ಭ್ರಷ್ಟರು ಸಿಕ್ಕಿಹಾಕಿಕೊಳ್ಳುವ ಸಂಭವವಿದೆ.

After the first phase of voting, the IT department has become active
ಮೊದಲ ಹಂತದ ಮತದಾನ ಬಳಿಕ ಚುರುಕುಗೊಂಡ ಐಟಿ ಇಲಾಖೆ

ಸೂರತ್: ಗುಜರಾತ್ ವಿಧಾನಸಭೆ ಚುನಾವಣೆ 2022 ರ ಮೊದಲ ಹಂತದ ಮತದಾನ ನಡೆಯುತ್ತಿದ್ದಂತೆ, ಆದಾಯ ತೆರಿಗೆ ಡಿಡಿಐ ವಿಭಾಗ ಚುರಕಾಗಿ ತನ್ನ ಕಾರ್ಯ ನಿರ್ವಹಿಸಲು ಶುರು ಮಾಡಿದೆ. ಭೂ ಉದ್ಯಮದ ಸಂಪರ್ಕ ಹೊಂದಿರುವ ನಗರ ಬಿಲ್ಡರ್ ನರೇಶ್ ಶಾ ಅಲಿಯಾಸ್​ ವಿಡಿಯೋ, ಅರವಿಂದ್ ಬಿಚ್ಚುನ ಅವರ ಧನೇರ ಡೈಮಂಡ್, ಭಾವನಾ ಜೇಮ್ಸ್ ಮತ್ತು ರಮೇಶ್ ಚೋಗತ್ ಅವರನ್ನೇ ಗುರಿಯಾಗಿಸಿಕೊಂಡು ಇಂದು ಮುಂಜಾನೆಯಿಂದ ದಾಳಿ ನಡೆಸಿವೆ.

ಐಟಿ ಇಲಾಖೆಯಿಂದ ದಾಳಿ ಕಾರ್ಯಾಚರಣೆ: ಸೂರತ್ ಸುತ್ತಮುತ್ತಲಿನ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ನಗರದ ಲೇವಾ -ದೇವಿ ವ್ಯವಹಾರಿತರು ಅಥವಾ ತೆರಿಗೆ ವಂಚಕರನ್ನು ಹುಡುಕಲು ಆದಾಯ ತೆರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳೀಯ ಬಿಲ್ಡರ್‌ಗಳು ಮತ್ತು ವಜ್ರ ತಯಾರಕರ ಮೇಲೆ ಐಟಿ ಇಲಾಖೆ ಈಗಾಗಲೇ ದಾಳಿ ನಡೆಸಿದೆ.

ಸರಿಸುಮಾರು 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಐಟಿ ತಂಡಗಳಿಂದ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಇನ್ನು ಸುಮಾರು 40 ಸ್ಥಳಗಳಲ್ಲಿ ಐಟಿ ದಾಳಿ ನಡೆಸುತ್ತಿವೆ. ಈ ಐಟಿ ರೈಡಿನಿಂದಾಗಿ ಲೆಕ್ಕಕ್ಕೆ ಸಿಗದ ದೊಡ್ಡ ಮೊತ್ತದ ವಹಿವಾಟು ಹಾಗೂ ತೆರಿಗೆ ವಂಚನೆಯಲ್ಲಿ ಭ್ರಷ್ಟರು ಸಿಕ್ಕಿಹಾಕಿಕೊಳ್ಳುವ ಸಂಭವವಿದೆ.

ಇಷ್ಟಲ್ಲದೇ, 100 ಕ್ಕೂ ಹೆಚ್ಚು ಪೊಲೀಸರು ಮತ್ತು ಸಿಬ್ಬಂದಿ ಕೂಡ ಐಟಿ ತನಿಖೆಗೆ ಒಳಪಟ್ಟಿದ್ದು, ಈ ದಾಳಿಯ ಬಿಸಿ ಮುಂಬೈ ಮತ್ತು ಸೂರತ್‌ಗೂ ವ್ಯಾಪಿಸಿದೆ. ಸೂರತ್‌ನ ಪ್ರಸಿದ್ಧ ವಜ್ರ ಮಾರಾಟ ಕಂಪನಿ ಧನೇರಾ ಗ್ರೂಪ್‌ಗೆ ಐಟಿ ತನ್ನ ದಾಳಿ ನಡೆಸಿದೆ. ವಜ್ರದ ಗ್ಯಾಂಗ್‌ನ ಸದಸ್ಯರಾಗಿರುವ ಭೂ ಉದ್ಯಮಿಗಳಿಗು ಸಾಕಷ್ಟು ತನಿಖೆಯಾಗುವ ಸಾಧ್ಯತೆ ಇದೆ. ಒಟ್ಟು ಸೂರತ್ ಮತ್ತು ಮುಂಬೈ ಸೇರಿದಂತೆ 35 ಸ್ಥಳಗಳು ಐಟಿ ವಿಚಾರಣೆಗೆ ಒಳಪಟ್ಟಿವೆ.

ಇದನ್ನೂ ಓದಿ:ವಂಚಕ ಸುಕೇಶ್ ಪ್ರಕರಣ: ಇಡಿ ಮುಂದೆ ಹಾಜರಾದ ನಟಿ ನೋರಾ ಫತೇಹಿ

ABOUT THE AUTHOR

...view details