ಕರ್ನಾಟಕ

karnataka

ಭಾರತದಲ್ಲಿ 5G ಯುಗಾರಂಭಕ್ಕೆ ಮುನ್ನುಡಿ: ಸ್ಪೆಕ್ಟ್ರಮ್ ಹರಾಜು ಆರಂಭ

By

Published : Jul 26, 2022, 11:09 AM IST

4ಜಿ ನಂತರ ಅತ್ಯಂತ ವೇಗದ ಇಂಟರ್ನೆಟ್ ಸಂಪರ್ಕ ನೀಡಬಲ್ಲ 5ಜಿ ನೆಟ್ವರ್ಕ್ ಆರಂಭಕ್ಕೆ ಸಿದ್ಧತೆಗಳು ಜೋರಾಗಿವೆ. ಇಂದು 5ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ನಾಲ್ಕು ಕಂಪನಿಗಳು ಕಣದಲ್ಲಿವೆ.

ಭಾರತದಲ್ಲಿ 5G ಯುಗಾರಂಭಕ್ಕೆ ಮುನ್ನುಡಿ: ಸ್ಪೆಕ್ಟ್ರಮ್ ಹರಾಜು ಆರಂಭ
Prelude to 5G Era in India: Spectrum Auction Begins

ನವದೆಹಲಿ: ಮುಂದಿನ ತಲೆಮಾರಿನ ವೇಗದ ಸಂಪರ್ಕ ತಂತ್ರಜ್ಞಾನವಾಗಿರುವ 5ಜಿ ತರಂಗಾಂತರಗಳ ಹರಾಜು ಇಂದು ನಡೆಯಲಿದ್ದು, ದೇಶದ ಟೆಲಿಕಾಂ ವಲಯಕ್ಕೆ ಈ ದಿನ ಅತ್ಯಂತ ಪ್ರಮುಖವಾಗಿದೆ. 4.3 ಲಕ್ಷ ಕೋಟಿ ರೂಪಾಯಿ ಮೊತ್ತದ 72 ಗಿಗಾಹರ್ಟ್ಜ್ ರೇಡಿಯೋ ತರಂಗಾಂತರಗಳು ಯಾರ ಒಡೆತನಕ್ಕೆ ಸೇರಲಿವೆ ಎಂಬ ಬಗ್ಗೆ ತೀವ್ರ ಕುತೂಹಲ ಕೆರಳಿದೆ.

ಈಗಾಗಲೇ ಬಿಡ್ಡಿಂಗ್ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮುಂದುವರಿಯಲಿದೆ. ಜಿಯೋ, ಭಾರ್ತಿ ಏರ್​ಟೆಲ್, ವೋಡಾಫೋನ್ ಐಡಿಯಾ ಮತ್ತು ಬಿಲಿಯನೇರ್ ಗೌತಮ್ ಅದಾನಿ ಅವರ ಅದಾನಿ ಎಂಟರ್​ ಪ್ರೈಸಸ್ ಕಂಪನಿಗಳು ಹರಾಜಿನಲ್ಲಿ ಭಾಗವಹಿಸುತ್ತಿವೆ.

5ಜಿ ತರಂಗಾಂತರ ಹರಾಜಿನ ಬಗ್ಗೆ ನೀವು ತಿಳಿಯಬೇಕಾದ 10 ಮುಖ್ಯ ಅಂಶಗಳು ಇಲ್ಲಿವೆ ನೋಡಿ:

  • ಈ ಹರಾಜಿನಿಂದ ದೂರಸಂಪರ್ಕ ಇಲಾಖೆಯು 70 ಸಾವಿರ ದಿಂದ 1 ಲಕ್ಷ ಕೋಟಿ ರೂಪಾಯಿ ಆದಾಯ ನಿರೀಕ್ಷೆ ಮಾಡಿದೆ. ರೇಡಿಯೋ ತರಂಗಾಂತರಗಳಿಗೆ ಎಷ್ಟು ಬೇಡಿಕೆ ಬರುತ್ತದೆ ಎಂಬುದರ ಮೇಲೆ ಎಷ್ಟು ದಿನ ಹರಾಜು ನಡೆಯಲಿದೆ ಎಂಬುದು ನಿರ್ಧಾರವಾಗಲಿದೆ.
  • ಹರಾಜು ಪ್ರಕ್ರಿಯೆಯು ಕಡಿಮೆ ತರಂಗಾಂತರದ (600 MHz, 700 MHz, 800 MHz, 900 MHz, 1800 MHz, 2100 MHz, 2300 MHz), ಮಧ್ಯಮ (3300 MHz) ಮತ್ತು ಉನ್ನತ ಮಟ್ಟದ (26 GHz) ಫ್ರಿಕ್ವೆನ್ಸಿ ಬ್ಯಾಂಡ್​ಗಳಿಗೆ ನಡೆಯಲಿದೆ..
  • ಹರಾಜಿನಲ್ಲಿ ಮುಕೇಶ್ ಅಂಬಾನಿ ಅವರ ರಿಲಯನ್ಸ್​ ಜಿಯೋ ಅತಿ ಹೆಚ್ಚು ದುಡ್ಡು ಸುರಿಯಬಹುದು ಎಂದು ನಿರೀಕ್ಷಿಸಲಾಗಿದೆ. ಇದರ ನಂತರ ಭಾರ್ತಿ ಏರ್ಟೆಲ್ ಬರಬಹುದು. ಇನ್ನು ವೋಡಾಫೋನ್ ಐಡಿಯಾ ಮತ್ತು ಅದಾನಿ ಕಂಪನಿಗಳು ಸೀಮಿತ ಮಟ್ಟದಲ್ಲಿ ದುಡ್ಡು ಸುರಿಯಬಹುದು ಎಂಬ ಲೆಕ್ಕಾಚಾರಗಳಿವೆ. ಜಿಯೋ 14 ಸಾವಿರ ಕೋಟಿ ರೂಪಾಯಿ ಮುಂಗಡ ಠೇವಣಿ (ಇಎಂಡಿ) ಜಮಾ ಮಾಡಿದ್ದರೆ, ಅದಾನಿ ಕೇವಲ 100 ಕೋಟಿ ರೂಪಾಯಿ ಜಮಾ ಮಾಡಿದೆ. ಮುಂಗಡ ಠೇವಣಿಯನ್ನು ನೋಡಿದರೆ ಯಾರು ಎಷ್ಟು ತರಂಗಾಂತರಗಳ ಮೇಲೆ ಕಣ್ಣಿಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ.
  • ನಾಲ್ಕೂ ಕಂಪನಿಗಳ ಒಟ್ಟು ಇಎಂಡಿ ಮೊತ್ತ 21,800 ಕೋಟಿ ರೂಪಾಯಿಗಳಾಗಿದ್ದು, 2021ರ ಹರಾಜಿನ ಸಮಯದಲ್ಲಿ ಇದು ಕೇವಲ 13.475 ಕೋಟಿ ರೂಪಾಯಿ ಆಗಿತ್ತು.
  • ಜುಲೈ 18 ರಂದು ಇಲಾಖೆಯು ಬಿಡುಗಡೆ ಮಾಡಿದ ಪ್ರಿ-ಕ್ವಾಲಿಫೈಡ್ ಬಿಡ್ಡರ್‌ಗಳ ಪಟ್ಟಿಯ ಪ್ರಕಾರ, ರಿಲಯನ್ಸ್ ಜಿಯೋ ₹ 14,000 ಕೋಟಿಗಳ ಇಎಮ್‌ಡಿಯನ್ನು ಸಲ್ಲಿಸಿದೆ. ಇದು ಸ್ಪೆಕ್ಟ್ರಮ್‌ಗಾಗಿ ಕಣದಲ್ಲಿರುವ ನಾಲ್ಕು ಕಂಪನಿಗಳ ಪೈಕಿ ಅತ್ಯಧಿಕ ಮೊತ್ತವಾಗಿದೆ. ಅದಾನಿ ಡೇಟಾ ನೆಟ್‌ವರ್ಕ್ ಇಎಂಡಿ ಮೊತ್ತವು ₹100 ಕೋಟಿಯಷ್ಟಿದೆ.
  • ಈ ತಿಂಗಳ ಆರಂಭದಲ್ಲಿ ಬಿಲಿಯನೇರ್ ಗೌತಮ್ ಅದಾನಿ ಅವರ ಗುಂಪು ಸ್ಪೆಕ್ಟ್ರಮ್ ಖರೀದಿಯ ಹರಾಜಿನಲ್ಲಿ ಪಾಲ್ಗೊಳ್ಳುವಿಕೆಯನ್ನು ದೃಢಪಡಿಸಿತ್ತು. ಅದಾನಿ ಗ್ರೂಪ್ ತನ್ನ ವಿಮಾನ ನಿಲ್ದಾಣಗಳ ಆಂತರಿಕ ಬಳಕೆಗಾಗಿ ಸ್ಪೆಕ್ಟ್ರಮ್ ಬಳಸುವ ಉದ್ದೇಶ ಹೊಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಗ್ರಾಹಕ ಮೊಬೈಲ್ ಸೇವಾ ಕ್ಷೇತ್ರಕ್ಕೆ ತಾನು ಬರುತ್ತಿಲ್ಲ ಎಂದು ಕಂಪನಿ ತಿಳಿಸಿದೆ.
  • ಈ ಹರಾಜಿನಲ್ಲಿ ಸುನಿಲ್ ಮಿತ್ತಲ್ ನೇತೃತ್ವದ ಭಾರ್ತಿ ಏರ್‌ಟೆಲ್ ತನ್ನ ಬಿಡ್ಡಿಂಗ್ ಅನ್ನು 5G ಸ್ಪೆಕ್ಟ್ರಮ್‌ಗೆ ಸೀಮಿತಗೊಳಿಸುವ ಸಾಧ್ಯತೆಯಿದೆ - 3.5GHz ಬ್ಯಾಂಡ್‌ನಲ್ಲಿ 100MHz ಮತ್ತು 26GHz ಬ್ಯಾಂಡ್‌ನಲ್ಲಿ 500MHz; ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಂತಹ ವಲಯಗಳಲ್ಲಿ 900MHz ಮತ್ತು 1800MHz ಬ್ಯಾಂಡ್‌ಗಳಲ್ಲಿ ಆಯ್ದ ಸ್ಪೆಕ್ಟ್ರಮ್ ಗಳನ್ನು ಏರ್​ಟೆಲ್ ಖರೀದಿಸಬಹುದು ಎಂದು ಮೂಲಗಳು ತಿಳಿಸಿವೆ.
  • ಟೆಲಿಕಾಂ ಕಂಪನಿಗಳು ತಾವು ಸಲ್ಲಿಸಿದ ಇಎಮ್‌ಡಿ ಮೊತ್ತಕ್ಕಿಂತ 7-8 ಪಟ್ಟು ಮೌಲ್ಯದ ರೇಡಿಯೊವೇವ್‌ಗಳನ್ನು ಖರೀದಿಸುವ ಅವಕಾಶವಿರುತ್ತದೆ.
  • ಈಗಿನ ಹರಾಜಿನಲ್ಲಿ ಸ್ಪೆಕ್ಟ್ರಮ್ ಖರೀದಿಸುವ ಕಂಪನಿಗಳು ಆರಂಭಿಕವಾಗಿ ಯಾವುದೇ ಹಣ ನೀಡದೆ, ಮುಂದೆ 20 ಸಮಾನ ಕಂತುಗಳಲ್ಲಿ ಹರಾಜು ಮೊತ್ತವನ್ನು ಪಾವತಿಸುವ ಅವಕಾಶ ನೀಡಲಾಗಿದೆ. ಈಗಾಗಲೇ 5ಜಿ ನೆಟ್ವರ್ಕ್ ನಲ್ಲಿ ಮುಂದಿರುವ ದಕ್ಷಿಣ ಕೋರಿಯಾ ಮತ್ತು ಚೀನಾ ದೇಶಗಳನ್ನು ಹಿಂದಿಕ್ಕಲು ಭಾರತ ಸರ್ಕಾರ ಇಂಥದೊಂದು ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.
  • ಪ್ರಿ-ಕ್ವಾಲಿಫೈಡ್ ಬಿಡ್ಡರ್‌ಗಳ ಪಟ್ಟಿಯ ಪ್ರಕಾರ ರಿಲಯನ್ಸ್ ಜಿಯೋ 14 ಸಾವಿರ ಕೋಟಿ ರೂಪಾಯಿಗಳ ಇಎಮ್‌ಡಿಯನ್ನು ಸಲ್ಲಿಸಿದೆ. ಇದು ಸ್ಪೆಕ್ಟ್ರಮ್‌ಗಾಗಿ ಸಲ್ಲಿಸಲಾದ ಅತ್ಯಧಿಕ ಇಎಂಡಿ ಆಗಿದೆ.

ABOUT THE AUTHOR

...view details