ಕರ್ನಾಟಕ

karnataka

ನೀರು ಪಾಲಾದ ನಾಲ್ವರು ವಿದ್ಯಾರ್ಥಿಗಳು: ಮೂವರ ಮೃತದೇಹ ಪತ್ತೆ, ಓರ್ವನಿಗಾಗಿ ಮುಂದುವರಿದ ಶೋಧ

By

Published : Nov 26, 2021, 11:03 AM IST

ಮಹಾ ನದಿ, Mahanadi
ಮಹಾ ನದಿ ()

ಮಹಾ ನದಿ ನದಿಯಲ್ಲಿ ಈಜಲು ಹೋಗಿ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕಟಕ್​ನಲ್ಲಿ ನಡೆದಿದೆ.

ಕಟಕ್: ಮಹಾ ನದಿ ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ನಾಲ್ಕು ಶಾಲಾ ವಿದ್ಯಾರ್ಥಿಗಳ ಪೈಕಿ ಮೂವರ ಮೃತದೇಹವನ್ನು ಹೊರ ತೆಗೆಯಲಾಗಿದ್ದು, ಇನ್ನೂ ಓರ್ವನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ .

ಮೃತ ನಾಲ್ಕು ವಿದ್ಯಾರ್ಥಿಗಳು ನ್ಯೂಬಜಾರ್‌ನ ಪೊಟಾಪೋಖಾರಿ ಪ್ರದೇಶದವರಾಗಿದ್ದು, 8 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಗುರುವಾರ ಮಧ್ಯಾಹ್ನ 2 ಗಂಟೆಗೆ ಸೈಕಲ್ ಮೇಲೆ ಮನೆಯಿಂದ ಹೊರಟಿದ್ದ ಬಾಲಕರು ಸ್ನಾನಕ್ಕೆ ಎಂದು ನದಿಗೆ ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಧಾರವಾಡದ SDM ಮೆಡಿಕಲ್ ಕಾಲೇಜಿನ 116 ವಿದ್ಯಾರ್ಥಿಗಳಿಗೆ ಕೊರೊನಾ: ಒಟ್ಟು ಸೋಂಕಿತರ ಸಂಖ್ಯೆ 182ಕ್ಕೆ ಏರಿಕೆ

ನದಿಯ ದಡದಲ್ಲಿ ಮಕ್ಕಳ ಸೈಕಲ್‌, ಶೂ ಮತ್ತು ಬಟ್ಟೆಗಳು ಬಿದ್ದಿರುವುದನ್ನು ಗಮನಿಸಿದ ಎಂದು ಕುಟುಂಬಸ್ಥರು ಒಡಿಆರ್‌ಎಫ್ ತಂಡಕ್ಕೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ರಕ್ಷಣಾ ಸಿಬ್ಬಂದಿ, ಮೂವರ ಮೃತದೇಹಗಳನ್ನು ಹೊರ ತೆಗೆದಿದ್ದು, ಕಟಕ್ ಎಸ್‌ಸಿಬಿ ವೈದ್ಯಕೀಯ ಕಾಲೇಜಿಗೆ ಕಳುಹಿಸಿದ್ದಾರೆ. ಇನ್ನೂ ಓರ್ವ ವಿದ್ಯಾರ್ಥಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಇದನ್ನೂ ಓದಿ:ಮಹಿಳಾ ಸಿಬ್ಬಂದಿಯೊಂದಿಗೆ ನೋಡಲ್ ಅಧಿಕಾರಿ ಚೆಲ್ಲಾಟ ಆರೋಪ: ಫೋಟೋ, ವಿಡಿಯೋ ವೈರಲ್

ABOUT THE AUTHOR

...view details