ಕರ್ನಾಟಕ

karnataka

'ಇಂದ್ರ -2021': ರಷ್ಯಾಕ್ಕೆ ತೆರಳಲಿರುವ ಭಾರತೀಯ ಸೇನೆಯ 250 ಸಿಬ್ಬಂದಿ

By

Published : May 26, 2021, 1:45 PM IST

ಇಂದ್ರ -2021 ಜಂಟಿ ರಷ್ಯಾ-ಭಾರತೀಯ ಮಿಲಿಟರಿ ಕಸರತ್ತು ಈ ವರ್ಷದ ಆಗಸ್ಟ್ 1ರಿಂದ 15ರವರಗೆ ವೋಲ್ಗೊಗ್ರಾಡ್ ಪ್ರದೇಶದ ದಕ್ಷಿಣ ಮಿಲಿಟರಿ ಜಿಲ್ಲೆಯ ಪ್ರುಡ್‌ಬಾಯ್ ತರಬೇತಿ ಮೈದಾನದಲ್ಲಿ ನಡೆಯಲಿದೆ. ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ನೌಕಾ ಅಭ್ಯಾಸವಾಗಿ 2003ರಲ್ಲಿ 'ಅಭ್ಯಾಸ ಇಂದ್ರ' ಪ್ರಾರಂಭವಾಯಿತು.

ರಷ್ಯಾಕ್ಕೆ ತೆರಳಲಿರುವ 250 ಭಾರತೀಯ ಮಿಲಿಟರಿ ಸಿಬ್ಬಂದಿ
ರಷ್ಯಾಕ್ಕೆ ತೆರಳಲಿರುವ 250 ಭಾರತೀಯ ಮಿಲಿಟರಿ ಸಿಬ್ಬಂದಿ

ನವದೆಹಲಿ: ರಷ್ಯಾದ ಮಿಲಿಟರಿಯೊಂದಿಗೆ ಯುದ್ಧತಂತ್ರದ ದ್ವಿಪಕ್ಷೀಯ ‘ಇಂದ್ರ-2021’ ಅಭ್ಯಾಸಕ್ಕಾಗಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯು ಸೇನೆಯ ಸುಮಾರು 250 ಸಿಬ್ಬಂದಿ ಆಗಸ್ಟ್ 1ರಿಂದ 15ರವರೆಗೆ ಅಭ್ಯಾಸಕ್ಕಾಗಿ ರಷ್ಯಾಕ್ಕೆ ತೆರಳಲಿದ್ದಾರೆ. ನಂತರ ಭಾರತ ಮತ್ತು ಪಾಕಿಸ್ತಾನ ಸೇನೆಗಳು ಜಂಟಿಯಾಗಿ ಭಾಗವಹಿಸುವ ಮತ್ತೊಂದು ಅಭ್ಯಾಸ ನಡೆಯಲಿದೆ.

"ಅವರು ಬಳಸುವ ಮಿಲಿಟರಿ ಯಂತ್ರಾಂಶ ಸೇರಿದಂತೆ ಭಾರತೀಯ ಪಡೆಗಳು ಹೇಗೆ ಮತ್ತು ಯಾವಾಗ ಹೊರಡುತ್ತವೆ ಎಂಬುದರ ಬಗ್ಗೆ ನಿಖರವಾದ ವಿವರಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ" ಎಂದು ಭಾರತದ ಮಿಲಿಟರಿ ಮೂಲಗಳು ಈಟಿವಿ ಭಾರತ್‌ಗೆ ತಿಳಿಸಿವೆ.

ಇಂದ್ರ-2021 ಜಂಟಿ ರಷ್ಯಾ-ಭಾರತೀಯ ಮಿಲಿಟರಿ ಕಸರತ್ತು ಈ ವರ್ಷದ ಆಗಸ್ಟ್ 1ರಿಂದ 15ರವರಗೆ ವೋಲ್ಗೊಗ್ರಾಡ್ ಪ್ರದೇಶದ ದಕ್ಷಿಣ ಮಿಲಿಟರಿ ಜಿಲ್ಲೆಯ ಪ್ರುಡ್‌ಬಾಯ್ ತರಬೇತಿ ಮೈದಾನದಲ್ಲಿ ನಡೆಯಲಿದೆ. ಈ ಡ್ರಿಲ್‌ಗಳಲ್ಲಿ ಭಾರತದ ಸಶಸ್ತ್ರ ಪಡೆಗಳ ಸುಮಾರು 250 ಸೈನಿಕರು ಮತ್ತು ದಕ್ಷಿಣ ಮಿಲಿಟರಿ ಡಿಸ್ಟ್ರಿಕ್ಟ್ ಸುಮಾರು 250 ಸಿಬ್ಬಂದಿ ಭಾಗವಹಿಸಲಿದ್ದಾರೆ ಎಂದು ದಕ್ಷಿಣ ಮಿಲಿಟರಿ ಡಿಸ್ಟ್ರಿಕ್ಟ್ ಮಾಧ್ಯಮ ಕಚೇರಿ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

ವೋಲ್ಗೊಗ್ರಾಡ್​ನಲ್ಲಿ ನಡೆದ ಅಂತಾರಾಷ್ಟ್ರೀಯ ರಷ್ಯಾ-ಭಾರತೀಯ ಯುದ್ಧತಂತ್ರದ ಇಂದ್ರ-2021 ಯೋಜನೆ ಮತ್ತು ಸಿದ್ಧತೆ ಕುರಿತು ಉಭಯ ದೇಶಗಳ ನಡುವೆ ಮಂಗಳವಾರ ನಡೆದ ಸಭೆಯ ನಂತರ ದಿನಾಂಕಗಳನ್ನು ಅಂತಿಮಗೊಳಿಸಲಾಯಿತು.

ಉಭಯ ದೇಶಗಳ ನಿಯೋಗದ ಸದಸ್ಯರು ದಿನಾಂಕ, ವ್ಯಾಯಾಮದ ಯೋಜನೆ ಮತ್ತು ಸನ್ನಿವೇಶ, ಪಡೆಗಳು ಮತ್ತು ಸಾಧನಗಳ ಸಂಯೋಜನೆ, ರಾಜ್ಯ ಗಡಿಯನ್ನು ದಾಟುವ ವಿಧಾನ ಮತ್ತು ಲಾಜಿಸ್ಟಿಕ್ಸ್ ಸಂಘಟನೆಯನ್ನು ಅನುಮೋದಿಸಿದರು.

ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ನೌಕಾ ಕಸರತ್ತಾಗಿ 2003ರಲ್ಲಿ 'ಅಭ್ಯಾಸ ಇಂದ್ರ' ಪ್ರಾರಂಭವಾಯಿತು. ಪ್ರಮುಖ ಮಿಲಿಟರಿ ಯಂತ್ರಾಂಶ ಮತ್ತು ಸಲಕರಣೆಗಳ ಜಂಟಿ ಉತ್ಪಾದನೆ, ಸಹ-ಉತ್ಪಾದನೆ ಮತ್ತು ಸಹ-ಅಭಿವೃದ್ಧಿಯ ಮೂಲಕ ರಕ್ಷಣಾ ಸಹಕಾರವನ್ನು "ನವೀಕರಿಸಲು ಮತ್ತು ತೀವ್ರಗೊಳಿಸಲು" ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರಷ್ಯಾ ಭೇಟಿಯ ಪರಿಣಾಮವಾಗಿ ವ್ಯಾಪ್ತಿಯಲ್ಲಿ ವಿಸ್ತರಣೆಯಾಗಿದೆ.

ABOUT THE AUTHOR

...view details