ಕರ್ನಾಟಕ

karnataka

ಶಾರುಖ್ ಖಾನ್ ಐಷಾರಾಮಿ 'ಮನ್ನತ್' ಬಂಗಲೆಗೆ ನುಗ್ಗಿದ ಇಬ್ಬರು ಪೊಲೀಸ್​ ವಶಕ್ಕೆ

By

Published : Mar 3, 2023, 8:04 AM IST

Updated : Mar 3, 2023, 8:47 AM IST

ಶಾರುಖ್ ಖಾನ್ ಅವರ 'ಮನ್ನತ್' ಬಂಗಲೆಗೆ ಇಬ್ಬರು ವ್ಯಕ್ತಿಗಳು ನುಗ್ಗಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Shah Rukh Khans bungalow
ಶಾರುಕ್ ಖಾನ್ 'ಮನ್ನತ್' ಬಂಗಲೆ

ಮುಂಬೈ (ಮಹಾರಾಷ್ಟ್ರ):ಮುಂಬೈನಲ್ಲಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಮನ್ನತ್‌ ಬಂಗಲೆ‌ಗೆ ಗುರುವಾರ ಬೆಳಗ್ಗೆ ಇಬ್ಬರು ಯುವಕರು ನುಗ್ಗಿದ್ದಾರೆ. ಯುವಕರು 20 ರಿಂದ 22 ವರ್ಷದೊಳಗಿನವರೆಂದು ತಿಳಿದುಬಂದಿದೆ. ಇವರು ಶಾರುಖ್ ಐಷಾರಾಮಿ ನಿವಾಸದ ಆವರಣಕ್ಕೆ ಹೊರಗೋಡೆಯಿಂದ ಪ್ರವೇಶಿಸಿದ್ದರು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸ್ ವಿಚಾರಣೆಯ ಸಮಯದಲ್ಲಿ, ಈ ಯುವಕರು ತಾವು ಗುಜರಾತ್‌ನಿಂದ ಬಂದಿರುವುದಾಗಿ ಮತ್ತು 'ಪಠಾಣ್' ಸ್ಟಾರ್ ಭೇಟಿಯಾಗಲು ಬಯಸಿದ್ದೆವು ಎಂದು ಹೇಳಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಅತಿಕ್ರಮ ಪ್ರವೇಶ ಮತ್ತು ಇತರ ಸಂಬಂಧಿತ ಅಪರಾಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಶಾರುಖ್ ಖಾನ್ ಅಭಿನಯದ ಹೊಸ ಸಿನಿಮಾ ಪಠಾಣ್​ ಕ್ರೇಜ್​ ಕಡಿಮೆ ಆಗಿಲ್ಲ. ಶಾರುಖ್​ ಜತೆಗೆ ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ ನಟಿಸಿರುವ ಈ ಚಿತ್ರ ಅಭಿಮಾನಿಗಳನ್ನು ತಲುಪುವಲ್ಲಿ ಯಶಸ್ವಿಯಾಗಿದೆ. 27 ದಿನಗಳಲ್ಲಿ ಜಗತ್ತಿನಾದ್ಯಂತ ಒಂದು ಸಾವಿರ ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ. ಅಷ್ಟೇ ಅಲ್ಲ, ಸಾವಿರ ಕೋಟಿ ರೂ ವ್ಯವಹಾರ ನಡೆಸಿರುವ ಶಾರುಖ್ ಖಾನ್ ಅಭಿನಯದ ಮೊದಲ ಸಿನಿಮಾ 'ಪಠಾಣ್​'.

ಇದನ್ನೂ ಓದಿ:ಸಾವಿರ ಕೋಟಿ ಕ್ಲಬ್ ಸೇರಿದ ಪಠಾಣ್​: ಸೆಲೆಬ್ರೇಷನ್​​ ವಿಡಿಯೋ ಶೇರ್ ಮಾಡಿದ ಚಿತ್ರತಂಡ​​

ಗೌರಿ ಖಾನ್​ ವಿರುದ್ಧ ಎಫ್​ಐಆರ್:ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ವಿರುದ್ಧ ಪೊಲೀಸರು ಇತ್ತೀಚೆಗೆ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೌರಿ ಖಾನ್​ ರಾಯಭಾರತ್ವ ವಹಿಸಿದ್ದ ತುಳಸಿಯಾನಿ ಕಂಪನಿಯು ವ್ಯಕ್ತಿಯೊಬ್ಬರಿಗೆ ನಿಗದಿತ ಸಮಯದಲ್ಲಿ ಫ್ಲ್ಯಾಟ್​ ನೀಡದ ಹಿನ್ನೆಲೆಯಲ್ಲಿ ಗ್ರಾಹಕರು ಗೌರಿ ಮತ್ತು ಕಂಪನಿಯ ನಿರ್ದೇಶಕರ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ:ಶಾರೂಖ್​ ಖಾನ್​ ಪತ್ನಿ ಗೌರಿ ಖಾನ್​ ವಿರುದ್ಧ ಎಫ್​ಐಆರ್​​​ ದಾಖಲು

Last Updated : Mar 3, 2023, 8:47 AM IST

ABOUT THE AUTHOR

...view details