ಕರ್ನಾಟಕ

karnataka

Watch... ತಮಿಳುನಾಡಲ್ಲಿ ಮುಂದುವರಿದ ಮಳೆಯಾರ್ಭಟ: 14ಕ್ಕೇರಿದ ಮೃತರ ಸಂಖ್ಯೆ

By

Published : Nov 12, 2021, 7:51 AM IST

Updated : Nov 12, 2021, 8:39 AM IST

ತಮಿಳುನಾಡಿನ ರಾಜಧಾನಿ ಚೆನ್ನೈ ಸೇರಿದಂತೆ ವಿವಿಧೆಡೆ ಭಾರಿ ಮಳೆ(tamil nadu rain)ಯಾಗುತ್ತಿದೆ. ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿದ್ದು ಹಲವೆಡೆ ಪ್ರವಾಹ ಉಂಟಾಗಿದೆ. ಮಳೆಯಿಂದ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ(death by rain) ಏರಿದೆ.

tamil nadu rain
ತಮಿಳುನಾಡು ಮಳೆಯಾರ್ಭಟ

ತಮಿಳುನಾಡು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನಾದ್ಯಂತ (Tamilnadu rain) ಕಳೆದ 5 ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ನಿನ್ನೆ (thursday rain updates) ಮತ್ತಷ್ಟು ತೀವ್ರಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಪ್ರಜ್ಞಾಹೀನ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತು ನಡೆದ ಮಹಿಳಾ ಪೊಲೀಸ್

ಸಾವಿನ ಸಂಖ್ಯೆ 14ಕ್ಕೆ ಏರಿಕೆ:

ಸಾವು ನೋವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಮಳೆಯಾರ್ಭಟಕ್ಕೆ ಪ್ರಾಣ ಕಳೆದುಕೊಂಡವರ ಸಂಖ್ಯೆ 14ಕ್ಕೆ(death by rain) ಏರಿದೆ. ನಿರಂತರ ಮಳೆ ಹಿನ್ನೆಲೆ, ಪ್ರಮುಖ ರಸ್ತೆಗಳು ಮತ್ತು ತಗ್ಗು ಪ್ರದೇಶ ಸೇರಿದಂತೆ ಹೆಚ್ಚಿನ ಪ್ರದೇಶಗಳು ಜಲಾವೃತವಾಗಿದೆ.

ಕಳೆದ 24 ಗಂಟೆಯಲ್ಲಿ ಚೆಂಗಲ್‌ ಪೇಟ್‌ ಜಿಲ್ಲೆಯ ತಮ್‌ ಬರಂನಲ್ಲಿ 23.29 ಸೆ.ಮೀ, ಚೋಲಾವರಂನಲ್ಲಿ 22 ಸೆ.ಮೀ, ಎನ್ನೋರ್‌ನಲ್ಲಿ 20.5 ಸೆ.ಮೀ. ಮತ್ತು ಚೆನ್ನೈನಲ್ಲಿ 15.8 ಸೆ.ಮೀ.ನಷ್ಟು ಮಳೆ ಸುರಿದು ಅವಾಂತರ ಸೃಷ್ಟಿಸಿದೆ.

ತಮಿಳುನಾಡು ಮಳೆಯಾರ್ಭಟ

ಪ್ರಜ್ಞಾಹೀನ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತು ನಡೆದ ಮಹಿಳಾ ಪೊಲೀಸ್​​:

ಸತತ ಮಳೆಯಲ್ಲಿ ನೆನೆದು ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯನ್ನು ಮಹಿಳಾ ಇನ್ಸ್‌ಪೆಕ್ಟರ್ (Chennai Lady Police Inspector) ಒಬ್ಬರು ಸಮಯಕ್ಕೆ ಸರಿಯಾಗಿ ರಕ್ಷಿಸಿದ್ದಾರೆ. ಹೌದು, ಕಿಲ್ಪಾಕ್ ಪ್ರದೇಶದ ಸ್ಮಶಾನವೊಂದರಲ್ಲಿ ಕೆಲಸ ಮಾಡುವ ಉದಯ ಎಂಬ ವ್ಯಕ್ತಿ ಸ್ಮಶಾನ ಜಲಾವೃತವಾದ ಕಾರಣ ಅಲ್ಲಿಯೇ ಉಳಿದುಕೊಂಡಿದ್ದನು. ನಿರಂತರವಾಗಿ ಸುರಿಯುತ್ತಿರುವ ಮಳೆಯಲ್ಲಿ ನೆನೆದು ಪ್ರಜ್ಞಾಹೀನವಾಗಿ ಅಲ್ಲಿಯೇ ಬಿದ್ದಿದ್ದ. ಇದನ್ನು ಕಂಡ ಸ್ಥಳೀಯರು ಆತ ಸತ್ತು ಬಿದ್ದಿದ್ದಾನೆಂದು ಭಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:Photos: ಜಡಿಮಳೆಗೆ ತಮಿಳುನಾಡು ಅಯೋಮಯ: ಪಟ್ಟಣದಲ್ಲಿ ದೋಣಿಗಳ ಸಂಚಾರ

ಸ್ಥಳಕ್ಕೆ ಬಂದ ಟಿಪಿ ಛತ್ರಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಜೇಶ್ವರಿ ಅವರು ಪರಿಶೀಲಿಸಿದಾಗ ಆತ ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಆತನನ್ನು ತಮ್ಮ ಭುಜದ ಮೇಲೆ ಹೊತ್ತು ಆಟೋ ಹತ್ತಿಸಿ, ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಒಟ್ಟಾರೆ 2015 ರ ಬಳಿಕ ಚೆನ್ನೈನಲ್ಲಿ ಸುರಿದ ಮಹಾ ಮಳೆಮಳೆಗೆ ಜನರು ಹೈರಾಣಾಗಿದ್ದಾರೆ.

Last Updated : Nov 12, 2021, 8:39 AM IST

ABOUT THE AUTHOR

...view details