ಕರ್ನಾಟಕ

karnataka

ಪಬ್​ಜಿ ಚಟಕ್ಕೆ ದಾಸನಾಗಿದ್ದ ವಿದ್ಯಾರ್ಥಿ ನೇಣಿಗೆ ಶರಣು.. ಬೆತ್ತಲಾಗಿದ್ದ ಮಗನ ಶವ ಕಂಡು ಬೆಚ್ಚಿಬಿದ್ದ ಕುಟುಂಬಸ್ಥರು!

By

Published : Mar 30, 2022, 10:48 AM IST

ಇಂದೋರ್‌ನಲ್ಲಿ ಆತ್ಮಹತ್ಯೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಇತ್ತಿಚೇಗೆ ಆನ್​ಲೈನ್​ ಗೇಮ್​ ಪಬ್​ಜಿ ಆಟದ ಚಟ ಹೊಂದಿದ್ದ 12ನೇ ತರಗತಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿದೆ.

Student hanged in Indore  student addicted to pubg hanged himself  pubg online game  indore crime news  side effects of pubg game  ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ  ಪಬ್​ಜೀಗೆ ಆಟಕ್ಕೆ ಬಾನಿಸನಾಗಿದ್ದ ವಿದ್ಯಾರ್ಥಿ ಆತ್ಮಹತ್ಯಗೆ ಶರಣು  ಮಧ್ಯಪ್ರದೇಶದಲ್ಲಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು  ಆನ್​ಲೈನ್​ ಗೇಮ್​ ಪಬ್​ಜೀಗೆ ಬಾಲಕ ಬಲಿ  ಇಂದೋರ್​ ಅಪರಾಧ ಸುದ್ದಿ
ಪ್ರಕರಣದ ತನಿಖಾಧಿಕಾರಿ ಹೇಳಿಕೆ

ಇಂದೋರ್: PUBG ಗೇಮ್ ಆಡುವ ದುರಾಸೆಯಲ್ಲಿ ಚಿಕ್ಕ ಮಕ್ಕಳು ಸೇರಿದಂತೆ ಯುವಕರು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಕಣ್ಮುಂದೆ ಬರುತ್ತಲೇ ಇವೆ. ಆದರೂ ಸಹ ಇಂತಹ ಪ್ರಕರಣಗಳು ತಡೆಯಲು ಪೊಲೀಸರು ಎಷ್ಟೇ ಪ್ರಯತ್ನ ನಡೆಸಿದ್ರೂ ಪ್ರಯೋಜನೆ ಆಗುತ್ತಿಲ್ಲ. ಏಕೆಂದರೆ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಕೋಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ವಲ್ಲಭನಗರದಲ್ಲಿ ನಡೆದಿದೆ.

ಪ್ರಕರಣದ ತನಿಖಾಧಿಕಾರಿ ಹೇಳಿಕೆ

ಪಬ್​ಜಿ ಚಟ:ಈ ಬಾಲಕ PUBG ಗೇಮ್‌ಗೆ ಅಡಿಕ್ಟ್ ಆಗಿದ್ದ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕನ ಮೃತದೇಹ ಮರಣೋತ್ತರ ಪರೀಕೆಗೆ ರವಾನಿಸಿದ್ದಾರೆ. ಸಂಬಂಧಿಕರ ಹೇಳಿಕೆ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಓದಿ:ಅನ್ನ ನೀಡುವ ರೈತರಿಗೆ ಕಿರುಕುಳ ನಿಲ್ಲಿಸಿ ಭತ್ತ ಖರೀದಿಸಿ: ತೆಲುಗಿನಲ್ಲೇ ರಾಹುಲ್‌ ಗಾಂಧಿ ಟ್ವೀಟ್‌

ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ: ತುಕೋಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ವಲ್ಲಭ ನಗರದಲ್ಲಿ ವಾಸಿಸುತ್ತಿದ್ದ 18 ವರ್ಷದ ವಿವೇಕ್ 12 ನೇ ತರಗತಿಯ ವಿದ್ಯಾರ್ಥಿ. ಕುಟುಂಬ ಸದಸ್ಯರ ಅನುಪಸ್ಥಿತಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಮನೆಗೆ ಬಂದು ನೋಡಿದಾಗ ಬೆತ್ತಲೆ ಆಕಾರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದೆ. ಈ ಕುರಿತು ಕುಟುಂಬಸ್ಥರು ತುಕೋಗಂಜ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು.

ಮೊಬೈಲ್ ವಶ:ವಿವೇಕ್​ಗೆ PUBG ಗೇಮ್ ಆಡುವ ಚಟ ಇತ್ತು. ಹಲವು ಬಾರಿ ಪಬ್‌ಜಿ ಆಟ ಆಡುವುದನ್ನು ನಿಷೇಧಿಸಲಾಗಿತ್ತು. ಅವನು ಯಾರ ಮಾತನ್ನೂ ಕೇಳಲಿಲ್ಲ. ಬಹುಶಃ ಈ ಆಟದಿಂದಾಗಿ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಬಂಧಿಕರ ಹೇಳಿಕೆ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರ ಮೊಬೈಲ್ ಕೂಡ ಜಪ್ತಿ ಮಾಡಲಾಗಿದ್ದು, ತನಿಖೆ ಕೈಗೊಂಡಿದ್ದಾರೆ. ಇಂದೋರ್‌ನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ.

ABOUT THE AUTHOR

...view details