ಕರ್ನಾಟಕ

karnataka

UP Result: ಯೋಗಿ ಸರ್ಕಾರದ 11 ಮಂದಿ ಸಚಿವರಿಗೆ ಜನತೆ ಗೇಟ್ ಪಾಸ್

By

Published : Mar 11, 2022, 6:46 AM IST

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಲ್ಲಿ ಜಯ ಗಳಿಸಿದೆ. ಸಮಾಜವಾದಿ ಪಕ್ಷ ಪ್ರಬಲ ಸ್ಪರ್ಧೆಯನ್ನು ಒಡ್ಡಿದೆ. ಯೋಗಿ ಸರ್ಕಾರ ಅಧಿಕಾರ ಉಳಿಸಿಕೊಂಡರೂ, ಅಲ್ಲಿನ 11 ಸಚಿವರಿಗೆ ಜನರು ಸೋಲಿನ ರುಚಿ ತೋರಿಸಿದ್ದಾರೆ.

11 UP ministers fail to win their seats
ಪಕ್ಷ ಮರಳಿ ಅಧಿಕಾರಕ್ಕೆ ಬಂದರೂ ಯೋಗಿ ಸರ್ಕಾರದ 11 ಮಂದಿ ಸಚಿವರಿಗೆ ಜನತೆ ಗೇಟ್ ಪಾಸ್

2022ರ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್​ನಲ್ಲಿ ಹೊರತುಪಡಿಸಿ, ಉಳಿದೆಲ್ಲ ರಾಜ್ಯಗಳಲ್ಲಿ ಬಿಜೆಪಿ ಜಯಶಾಲಿಯಾಗಿದೆ. ಉತ್ತರ ಪ್ರದೇಶದಲ್ಲಿ ಕೆಲವು ಸ್ಥಾನಗಳನ್ನು ಕಳೆದುಕೊಂಡರೂ ಅದೇ ವರ್ಚಸ್ಸನ್ನು ಉಳಿಸಿಕೊಂಡಿದೆ. ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಸಫಲವಾದರೂ, ಅಲ್ಲಿನ 11 11 ಸಚಿವರು ಗೆಲ್ಲಲು ವಿಫಲರಾಗಿದ್ದಾರೆ.

ಚುನಾವಣಾ ಆಯೋಗದ ಪ್ರಕಾರ, ಒಟ್ಟು 402 ಸ್ಥಾನಗಳಲ್ಲಿ ಬಿಜೆಪಿ 255 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಯ ಮೈತ್ರಿ ಪಕ್ಷಗಳಾದ ಅಪ್ನಾ ದಳ (ಸೋನೆಲಾಲ್​) 12 ಮತ್ತು ನಿಶಾದ್ ಪಕ್ಷವು 6 ಸ್ಥಾನಗಳನ್ನು ಗಳಿಸಿದೆ. ಉಪಮುಖ್ಯಮಂತ್ರಿಯಾಗಿದ್ದ ಕೇಶವಪ್ರಸಾದ್ ಮೌರ್ಯ ಸಿರತು ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಪಲ್ಲವಿ ಪಟೇಲ್ ವಿರುದ್ಧ 7,337 ಮತಗಳಿಂದ ಸೋತಿದ್ದಾರೆ. ಪಲ್ಲವಿ ಪಟೇಲ್ ಅವರು ಸಮಾಜವಾದಿ ಪಕ್ಷದ ಮಿತ್ರ ಪಕ್ಷವಾದ ಅಪ್ನಾ ದಳದವರಾಗಿದ್ದಾರೆ.

ಮತ್ತೋರ್ವ ಸಚಿವರಾಗಿದ್ದ ಸುರೇಶ್ ರಾಣಾ ಅವರು ಶಾಮ್ಲಿ ಜಿಲ್ಲೆಯ ಠಾಣಾ ಭವನ ವಿಧಾನಸಭಾ ಕ್ಷೇತ್ರದಲ್ಲಿ ಆರ್‌ಎಲ್‌ಡಿಯ ಅಶ್ರಫ್ ಅಲಿ ಖಾನ್ ವಿರುದ್ಧ 10,000 ಮತಗಳಿಂದ ಸೋತಿದ್ದಾರೆ. ಬರೇಲಿ ಜಿಲ್ಲೆಯ ಬಹೇರಿ ಕ್ಷೇತ್ರದಲ್ಲಿ ಕಂದಾಯ ಸಚಿವ ಛತ್ರಪಾಲ್ ಸಿಂಗ್ ಗಂಗ್ವಾರ್ ಸಮಾಜವಾದಿ ಪಕ್ಷದ ಅತೌರ್ ರೆಹಮಾನ್ ವಿರುದ್ಧ 3,355 ಮತಗಳಿಂದ ಮಣಿಸಲ್ಪಟ್ಟಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಅಲಿಯಾಸ್ ಮೋತಿ ಸಿಂಗ್ಅವರು ಪ್ರತಾಪ್‌ಗಢದ ಪಟ್ಟಿ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಸಮಾಜವಾದಿ ಪಕ್ಷದ ರಾಮ್ ಸಿಂಗ್ ವಿರುದ್ಧ 22,051 ಮತಗಳಿಂದ ಸೋತಿದ್ದಾರೆ. ಲೋಕೋಪಯೋಗಿ ಇಲಾಖೆಯ ಸಚಿವ ಚಂದ್ರಿಕಾ ಪ್ರಸಾದ್ ಉಪಾಧ್ಯಾಯ ಅವರು ಚಿತ್ರಕೂಟ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಸಮಾಜವಾದಿ ಪಕ್ಷದ ಅನಿಲ್ ಕುಮಾರ್ ವಿರುದ್ಧ 20,876 ಮತಗಳಿಂದ ಸೋತಿದ್ದಾರೆ.

ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ 37 ವರ್ಷಕ್ಕೇರಿದ ಕಾಂಗ್ರೆಸ್​ ವನವಾಸ

ಸಚಿವ ಆನಂದ್ ಸ್ವರೂಪ್ ಶುಕ್ಲಾಅವರು ಬಲ್ಲಿಯಾ ಜಿಲ್ಲೆಯ ಬರಿಯಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಜೈಪ್ರಕಾಶ್ ಅಂಚಲ್ ವಿರುದ್ಧ 12,951 ಮತಗಳಿಂದ ಸೋತಿದ್ದಾರೆ. ಆನಂದ್​ ಸ್ವರೂಪ್​ ಶುಕ್ಲಾ ಅವರು ಕಳೆದ ಬಾರಿ ಬಲ್ಲಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕ್ರೀಡಾ ಸಚಿವ ಉಪೇಂದ್ರ ತಿವಾರಿ ಅವರು ಬಲ್ಲಿಯಾದಲ್ಲಿ ಫೆಫ್ನಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಸಂಗ್ರಾಮ್ ಸಿಂಗ್ ವಿರುದ್ಧ 19,354 ಮತಗಳಿಂದ ಸೋತಿದ್ದಾರೆ.

ಫತೇಪುರ್ ಜಿಲ್ಲೆಯ ಹುಸೇನ್​ಗಂಜ್ ಕ್ಷೇತ್ರದಲ್ಲಿಸಚಿವ ರಣವೇಂದ್ರ ಸಿಂಗ್ ಧುನ್ನಿ ಅವರನ್ನು ಸಮಾಜವಾದಿ ಪಕ್ಷದ ಉಷಾ ಮೌರ್ಯ ಅವರು 25,181 ಮತಗಳಿಂದ ಸೋಲಿಸಿದ್ದಾರೆ. ಔರೈಯಾ ಜಿಲ್ಲೆಯ ದಿಬಿಯಾಪುರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಪ್ರದೀಪ್ ಕುಮಾರ್ ಯಾದವ್ ವಿರುದ್ಧ ಸ್ಪರ್ಧಿಸಿದ್ದ ಸಚಿವ ಲಖನ್ ಸಿಂಗ್ ರಜಪೂತ್ ಅವರು ಕೇವಲ 473 ಮತಗಳಿಂದ ಸೋತಿದ್ದಾರೆ.

ಶಿಕ್ಷಣ ಸಚಿವ ಸತೀಶ್ ಚಂದ್ರ ದ್ವಿವೇದಿಅವರನ್ನು ಎಸ್‌ಪಿ ಅಭ್ಯರ್ಥಿ ಮತ್ತು ವಿಧಾನಸಭೆಯ ಮಾಜಿ ಸ್ಪೀಕರ್ ಮಾತಾ ಪ್ರಸಾದ್ ಪಾಂಡೆ ಅವರು ಸಿದ್ಧಾರ್ಥನಗರದ ಇಟ್ವಾ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸಿದ್ದಾರೆ. ಸಹಕಾರ ಸಚಿವ ಸಂಗೀತಾ ಬಲ್ವಂತ್ ಅವರನ್ನು ಸಮಾಜವಾದಿ ಪಕ್ಷದ ಜೈ ಕಿಶನ್ ಅವರು ಗಾಜಿಪುರ ಕ್ಷೇತ್ರದಲ್ಲಿ 1,692 ಮತಗಳಿಂದ ಸೋಲಿಸಿದರು.

ABOUT THE AUTHOR

...view details