ಕರ್ನಾಟಕ

karnataka

ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಮೂವರು ಮಹಿಳೆಯರು... ಹೊಸ ಇತಿಹಾಸ ಸೃಷ್ಟಿ

By ETV Bharat Karnataka Team

Published : Dec 5, 2023, 7:09 AM IST

three women elected to Assembly: ಇದೇ ಮೊದಲ ಬಾರಿಗೆ ಮೂವರು ಮಹಿಳೆಯರು ವಿಜೋರಾಂ ವಿಧಾನ ಸಭೆ ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದಾರೆ.

Mizoram scripts history as three women elected to Assembly for first time
ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಮೂವರು ಮಹಿಳೆಯರು... ಹೊಸ ಇತಿಹಾಸ ಸೃಷ್ಟಿ

ಐಜ್ವಾಲ್:ಮಿಜೋರಾಂ ಚುನಾವಣೆ ಈ ಬಾರಿ ಹೊಸ ಇತಿಹಾಸ ಬರೆದಿದೆ. ಮೊದಲ ಬಾರಿಗೆ 40 ಸದಸ್ಯರ ವಿಧಾನಸಭೆಗೆ ಮೂವರು ಮಹಿಳಾ ಅಭ್ಯರ್ಥಿಗಳು ಆಯ್ಕೆ ಆಗುವ ಮೂಲಕ ಗಮನ ಸೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಮೂವರು ಮಹಿಳೆಯರು ವಿಧಾನಸಭೆ ಪ್ರವೇಶಿಸಿದ್ದಾರೆ.

ಝೋರಾಮ್ ಪೀಪಲ್ಸ್ ಮೂವ್‌ಮೆಂಟ್ (ZMP) ಅಭ್ಯರ್ಥಿ ಲಾಲ್ರಿನ್‌ಪುಯಿ ಅವರು ಲುಂಗ್ಲೀ ಈಸ್ಟ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಇನ್ನೊಂದು ಕಡೆ ದೂರದರ್ಶನ ನಿರೂಪಕಿ ಬ್ಯಾರಿಲ್ ವನ್ನೆಹ್‌ಸಂಗಿ, ಐಜಾವಿ ದಕ್ಷಿಣ-3 ಸ್ಥಾನದಿಂದ ಆಯ್ಕೆ ಆಗುವ ಮೂಲಕ ಶಾಸಕಿ ಆಗಿ ಚುನಾಯಿತರಾಗಿದ್ದಾರೆ. ಮಿಜೋ ನ್ಯಾಷನಲ್ ಫ್ರಂಟ್ (MNF) ನ ಪ್ರವೋ ಚಕ್ಮಾ ಅವರು ಪಶ್ಚಿಮ ಟ್ಯೂಪುಯಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಲಾಲ್‌ರಿನ್‌ಪುಯಿ ಮತ್ತು ಚಕ್ಮಾ ಅವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ವಿಜಯದ ನಗೆ ಬೀರಿದ್ದಾರೆ. ಬ್ಯಾರಿಲ್ ವನ್ನೈಹ್‌ಸಂಗಿ, MNF ಎದುರಾಳಿಯನ್ನು ಸೋಲಿಸಿ ವಿಧಾನಸಭೆ ಮೆಟ್ಟಿಲೇರಿದ್ದಾರೆ.

ಕ್ರಿಶ್ಚಿಯನ್ ಪ್ರಾಬಲ್ಯದ ಮಿಜೋ ಸಮುದಾಯ ಸಾಂಪ್ರದಾಯಿಕವಾಗಿ ಪಿತೃಪ್ರಧಾನ ಸಂಸ್ಕೃತಿ ಅನುಸರಿಸುತ್ತಿದೆ. ಮಿಜೋರಾಂನ ಪ್ರಮುಖ ರಾಜಕೀಯ ಪಕ್ಷಗಳು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮಹಿಳಾ ಅಭ್ಯರ್ಥಿಗಳನ್ನು ನಾಮನಿರ್ದೇಶನವನ್ನು ಹೆಚ್ಚಾಗಿ ಮಾಡುವುದಿಲ್ಲ. ನವೆಂಬರ್ 7 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 16 ಮಹಿಳೆಯರು ಸೇರಿದಂತೆ 174 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ, 2018ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ 18 ಮಹಿಳೆಯರು ಸೇರಿದಂತೆ ಒಟ್ಟು 209 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

2013ರ ವಿಧಾನಸಭಾ ಚುನಾವಣೆಯಲ್ಲಿ ಆರು ಮಹಿಳಯರು ಸೇರಿದಂತೆ 136 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. 2013 ಅಥವಾ 2018 ರ ಚುನಾವಣೆಯಲ್ಲಿ ಯಾವುದೇ ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿರಲಿಲ್ಲ. ಆದರೆ ಈ ಬಾರಿ ಮೂವರು ಮಹಿಳಾ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದಾರೆ. ನವೆಂಬರ್ 7 ರಂದು ನಡೆದ ಚುನಾವಣೆಯಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ 81.25ರಷ್ಟು ಮಹಿಳಾ ಮತದಾರರು, ಶೇ 80.04ರಷ್ಟು ಪುರುಷರು ಮತದಾನ ಮಾಡಿದ್ದಾರೆ.

ಮಿಜೋರಾಂನ ಚುನಾವಣಾ ಇತಿಹಾಸದಲ್ಲಿ ಪುರಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ಮಿಜೋರಾಂನ ಇತ್ತೀಚಿನ ಮತದಾರರ ಪಟ್ಟಿಯಲ್ಲಿ ಒಟ್ಟು 8,57,063 ಮತದಾರರಲ್ಲಿ ಮಹಿಳೆಯರು 51.22 ಪ್ರತಿಶತಕ್ಕಿಂತ ಹೆಚ್ಚಿದ್ದಾರೆ. ಮಿಜೋರಾಂನ ಹನ್ನೊಂದು ಜಿಲ್ಲೆಗಳಲ್ಲಿ, ಅಲ್ಪಸಂಖ್ಯಾತ ಸಮುದಾಯದ ಮಮಿತ್ ಜಿಲ್ಲೆಯಲ್ಲಿ ಮಾತ್ರ ಪುರುಷ ಮತದಾರರ ಸಂಖ್ಯೆ ಹೆಚ್ಚಾಗಿದೆ, ಉಳಿದಂತೆ ಎಲ್ಲ ಕಡೆ ಮಹಿಳಾ ಮತದಾರರೇ ಹೆಚ್ಚಿದ್ದಾರೆ. (ಐಎಎನ್‌ಎಸ್)

ಇದನ್ನು ಓದಿ:ತೆಲಂಗಾಣ ಸಿಎಂ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಅಧಿಕಾರ ಎಐಸಿಸಿ ಅಧ್ಯಕ್ಷ ಖರ್ಗೆ ಹೆಗಲಿಗೆ

ABOUT THE AUTHOR

...view details