ETV Bharat / sports

ಪಾಂಡ್ಯ, ಪಿಯೂಷ್​ ಬಿಗಿದಾಳಿ: ಮುಂಬೈಗೆ 174 ರನ್​ಗಳ ಸಾಧಾರಣ ಗುರಿ ನೀಡಿದ ಹೈದರಾಬಾದ್​ - MI vs SRH

author img

By ETV Bharat Karnataka Team

Published : May 6, 2024, 7:40 PM IST

Updated : May 6, 2024, 10:07 PM IST

ವಿಕೆಟ್​ ಪಡೆದ ಖುಷಿಯಲ್ಲಿ ಮುಂಬೈ ಆಟಗಾರರು
ವಿಕೆಟ್​ ಪಡೆದ ಖುಷಿಯಲ್ಲಿ ಮುಂಬೈ ಆಟಗಾರರು (Source: IPL X handle)

ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಮುಂಬೈ ಇಂಡಿಯನ್ಸ್​ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ.

ಮುಂಬೈ: ಐಪಿಎಲ್​​ನ ಪ್ಲೇ ಆಫ್​ ರೇಸ್​ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್​ ವಾಂಖೆಡೆಯಲ್ಲಿ ನಡೆಯುತ್ತಿರುವ ಸನ್​ರೈಸರ್ಸ್​ ಹೈದರಾಬಾದ್​ ಅನ್ನು 173 ರನ್​ಗಳಿಗೆ ಕಟ್ಟಿಹಾಕಿ ಮೇಲುಗೈ ಸಾಧಿಸಿದೆ.

ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ನಾಯಕ ಹಾರ್ದಿಕ್​ ಪಾಂಡ್ಯರ ನಿರ್ಧಾರ ಸರಿ ಎಂಬಂತೆ ಆಡಿದ ಮುಂಬೈ ಬೌಲರ್ಸ್​, ಈ ಸೀಸನ್​ನಲ್ಲಿ ಬಿರುಸಿನ ಬ್ಯಾಟಿಂಗ್​ ಮಾಡುತ್ತಿರುವ ಆರಂಭಿಕ ಜೋಡಿಯಾದ ಅಭಿಷೇಕ್​ ಶರ್ಮಾ ಮತ್ತ ಟ್ರಾವಿಸ್​ ಹೆಡ್​ರನ್ನು 56 ರನ್​ಗಳಿಗೆ ಬೇರ್ಪಡಿಸಿದರು. ಅಭಿಷೇಕ್​ 11, ಟ್ರಾವಿಸ್​ ಹೆಡ್​ 48 ರನ್​ಗಳಿಸಿದರು.

ಐಡೆನ್​​ ಮಾರ್ಕ್ರಮ್​ ಬದಲಿಗೆ ಅವಕಾಶ ಪಡೆದ ಮಯಾಂಕ್​ ಅಗರ್​ವಾಲ್​ 5 ರನ್​ಗೆ ಸುಸ್ತಾದರು. ನಿತೀಶ್​ ರೆಡ್ಡಿ 20, ಮಧ್ಯಮ ಕ್ರಮಾಂಕದ ದೈತ್ಯ ಹೆನ್ರಿಕ್​ ಕ್ಲಾಸಿನ್​ 2, ಮಾಕ್ರೋ ಜಾನ್​​ಸನ್​ 17, ಶಹಬಾಜ್​ ಅಹ್ಮದ್​ 10, ಅಬ್ದುಲ್​ ಸಮದ್​ 3 ರನ್​ಗೆ ವಿಕೆಟ್​ ನೀಡಿದರು. ಬ್ಯಾಟರ್​ಗಳು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾದ ಕಾರಣ ತಂಡ 136 ರನ್​ಗೆ 8 ವಿಕೆಟ್​ ಕಳೆದುಕೊಂಡಿತು.

ಸಿಡಿದ ನಾಯಕ ಕಮಿನ್ಸ್​: ಒಬ್ಬರ ಹಿಂದೆ ಒಬ್ಬರು ಔಟಾಗುತ್ತಿದ್ದಾಗ ಬ್ಯಾಟಿಂಗ್​ಗೆ ಇಳಿದ ನಾಯಕ ಪ್ಯಾಟ್​ ಕಮಿನ್ಸ್​ 2 ಬೌಂಡರಿ, 2 ಸಿಕ್ಸರ್​ ಸಿಡಿಸಿ 17 ಎಸೆತಗಳಲ್ಲಿ ಔಟಾಗದೆ 35 ರನ್​ ಚಚ್ಚಿದರು. ಇದರಿಂದ ತಂಡ ನಿಗದಿತ ಓವರ್​ಗಳಲ್ಲಿ 173/8 ಗಳಿಸಿತು.

ಬೌಲಿಂಗ್​ ಸಕ್ಸಸ್​: ಔಷಚಾರಿಕ ಪಂದ್ಯಗಳನ್ನು ಆಡುತ್ತಿರುವ ಮುಂಬೈ ಇಂಡಿಯನ್ಸ್​ನ ಬೌಲಿಂಗ್​ ಪಡೆ ಈ ಪಂದ್ಯದಲ್ಲಿ ಮಿಂಚಿತು. ವಿಶ್ವಕಪ್​ನ ಸಿದ್ಧತೆಯಲ್ಲಿರುವ ಹಾರ್ದಿಕ್​ ಪಾಂಡ್ಯ 3, ಹಿರಿಯ ಸ್ಪಿನ್ನರ್​ ಪಿಯೂಷ್​ ಚಾವ್ಲಾ 3 ವಿಕೆಟ್​ ಪಡೆದರು. ಅನ್ಸುಲ್​ ಕೋಂಬಜ್​, ಜಸ್ಪ್ರೀತ್​ ಬುಮ್ರಾ ತಲಾ 1 ವಿಕೆಟ್​ ಕಿತ್ತರು.

ತಂಡಗಳು ಇಂತಿವೆ: ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಮಯಾಂಕ್ ಅಗರ್​ವಾಲ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮಾರ್ಕೊ ಜಾನ್ಸೆನ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಟಿ ನಟರಾಜನ್.

ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್, ರೋಹಿತ್ ಶರ್ಮಾ, ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಅನ್ಶುಲ್ ಕಾಂಬೋಜ್, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ.

ಇದನ್ನೂ ಓದಿ: ಚೆನ್ನೈ ಸೂಪರ್‌ಕಿಂಗ್ಸ್‌ಗೆ ಆಘಾತ! ಶ್ರೀಲಂಕಾಗೆ ತೆರಳಿದ ವೇಗದ ಬೌಲರ್‌ ಮಥೀಶ​​ ​ಪತಿರಾನ - Pathirana

Last Updated :May 6, 2024, 10:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.