ಮೈಸೂರು: ಮಾಜಿ ಶಾಸಕನ ತಂದೆಯ ಜಮೀನಿನಲ್ಲಿ ಹುಲಿ ಸೆರೆ; ಜನರನ್ನು ಕಂಡು ಘರ್ಜನೆ - TIGRESS CAPTURED IN KUDLUR

🎬 Watch Now: Feature Video

thumbnail
ಹುಲಿ ಸೆರೆ (ETV Bharat)

By ETV Bharat Karnataka Team

Published : June 10, 2026 at 6:30 PM IST

1 Min Read
Choose ETV Bharat

ಮೈಸೂರು: ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಅವರ ತಂದೆಯ ಜಮೀನಿನಲ್ಲಿ ನಾಲ್ಕು ವರ್ಷದ ಹೆಣ್ಣು ಹುಲಿಯನ್ನು ಅರಣ್ಯ ಇಲಾಖೆ ಬುಧವಾರ ಸೆರೆ ಹಿಡಿದಿದೆ.

ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕೂಡ್ಲೂರು ಗ್ರಾಮದಲ್ಲಿರುವ ಹೆಚ್.ಪಿ.ಮಂಜುನಾಥ್ ಅವರ ತಂದೆ ಹೆಚ್.ಎನ್.ಪ್ರೇಮ್‌ಕುಮಾರ್ ಅವರ ಜಮೀನಿನಲ್ಲಿ ಇಟ್ಟಿದ್ದ ಬೋನಿನಲ್ಲಿ ಹೆಣ್ಣು ಹುಲಿ ಸೆರೆಯಾಗಿದೆ.

ಈ ಗ್ರಾಮದ ಜಮೀನುಗಳ ಸುತ್ತಮುತ್ತಲ ಆಗಾಗ ಹುಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಕೆಲ ದಿನಗಳ ಹಿಂದೆ ಅರಣ್ಯ ಇಲಾಖೆಯವರು ಕೂಡ್ಲೂರು ಗ್ರಾಮದ ಜಮೀನಿನಲ್ಲಿ ಬೋನ್ ಇರಿಸಿದ್ದರು. ಆಹಾರ ಅರಸಿ ಬಂದ ಹುಲಿ ಬೋನಿಗೆ ಬಿದ್ದಿದೆ. ಸೆರೆ ಸಿಕ್ಕಿರುವ ಹುಲಿಯನ್ನು ಬಂಡೀಪುರ ಅಥವಾ ನಾಗರಹೊಳೆ ಅಭಯಾರಣ್ಯಕ್ಕೆ ಬಿಡಲು ಅರಣ್ಯ ಇಲಾಖೆ ನಿರ್ಧರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ಕೆಲ ತಿಂಗಳ ಹಿಂದೆ, ಸರಗೂರು ತಾಲೂಕಿನ ಹಾದನೂರು ಗ್ರಾಮದ ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಹುಲಿಯನ್ನು ಸೆರೆ ಹಿಡಿದು ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿತ್ತು.

ಕೆಲ ದಿನಗಳಿಂದ ಹುಲಿಯು ಕಾಡಂಚಿನ ಜಮೀನಿನಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ದಾಳಿ ನಡೆಸಿ ಬಲಿ ತೆಗೆದುಕೊಳ್ಳುತ್ತಿದ್ದರಿಂದ ಜನ ಭಯಭೀತರಾಗಿದ್ದರು. ಈವರೆಗೆ ಹುಲಿ ಸುಮಾರು 15ಕ್ಕೂ ಹೆಚ್ಚು ಜಾನುವಾರುಗಳನ್ನು ತಿಂದು ತೇಗಿತ್ತು. ಅಲ್ಲದೆ, ಶುಂಠಿ ಕೆಲಸಕ್ಕೆ ಕೂಲಿ ಕಾರ್ಮಿಕರು ಹೋಗುತ್ತಿದ್ದಾಗ ಅವರಿಗೆ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಇದಾದ ಬಳಿಕ ಗ್ರಾಮಸ್ಥರು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದಿದ್ದರು.

ಇದನ್ನೂ ಓದಿ: 3 ರಾಜ್ಯಗಳಲ್ಲಿ 300 ಕಿಲೋಮೀಟರ್ ಸುತ್ತಿ ಗಮನ ಸೆಳೆದ 'ಜೀನತ್' ಹೆಣ್ಣುಹುಲಿಗೆ 4 ಮರಿಗಳು ಜನನ