ಆನೇಕಲ್ ಉಪವಿಭಾಗದಿಂದ ರೌಡಿಗಳ ಪರೇಡ್: ಖಡಕ್ ಎಚ್ಚರಿಕೆ ನೀಡಿದ ಡಿವೈಎಸ್ಪಿ - ROWDY
🎬 Watch Now: Feature Video

Published : June 12, 2026 at 5:36 PM IST
ಆನೇಕಲ್(ಬೆಂಗಳೂರು): ಆನೇಕಲ್ ಪೊಲೀಸ್ ಉಪವಿಭಾಗದಿಂದ ಇಂದು ರೌಡಿಗಳ ಪೆರೇಡ್ ನಡೆಸಿದ ಎಎಸ್ಪಿ ಲಕ್ಷ್ಮಿನಾರಾಯಣ್ ಅವರು ರೌಡಿಗಳಿಗೆ ನೀತಿ ಪಾಠ ಹೇಳಿದರು.
ಆನೇಕಲ್ ಪಟ್ಟಣದ ಹಳೇ ಮಾಧ್ಯಮಿಕ ಪಾಠಶಾಲಾ ಮೈದಾನದಲ್ಲಿ ಪೆರೇಡ್ ನಡೆದಿದ್ದು ಆನೇಕಲ್, ಅತ್ತಿಬೆಲೆ, ಸೂರ್ಯನಗರ, ಜಿಗಣಿ, ಬನ್ನೇರುಘಟ್ಟ, ಸರ್ಜಾಪುರ ರೌಡಿಗಳು ಪರೇಡ್ನಲ್ಲಿ ಹಾಜರಿದ್ದರು. ಆರೂ ಠಾಣೆಗಳ 480ರಲ್ಲಿ 200ಕ್ಕೂ ಹೆಚ್ಚು ರೌಡಿಗಳ ಭಾಗವಹಿಸಿದ್ದರು.
ಡಿವೈಎಸ್ಪಿ ಗೋಪಾಲ್ ನಾಯಕ್ ಅವರು ರೌಡಿಗಳ ವೈಯಕ್ತಿಕ ವಿಚಾರಣೆ ನಡೆಸಿದರು. ಆರು ಠಾಣೆಗಳ ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ರೌಡಿ ಪೆರೇಡ್ ನಡೆಯಿತು.
ಸಾಮಾಜಿಕ ಜಾಲತಾಣಗಳಲ್ಲಿ ರೌಡಿಗಳ ಎಲಿವೇಷನ್ ರೀಲ್ಸ್ಗಳ ಮೇಲೆ ಪೊಲೀಸ್ ನಿಗಾ ವಹಿಸಲಾಗುವುದು. ಜೊತೆಗೆ ರೌಡಿಗಳ ಹುಟ್ಟುಹಬ್ಬ ಹಾಗೂ ಇತರೆ ಘಟನೆಗಳ ರೀಲ್ಸ್ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ರೌಡಿಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಂಚಿಕೊಳ್ಳುವ ಕುರಿತು ಡಿವೈಎಸ್ಪಿ ಕಡಕ್ ಎಚ್ಚರಿಕೆ ನೀಡಿದರು.
ಪ್ರತಿ ರೌಡಿಯ ಚಲನವಲನ, ಪ್ರಕರಣಗಳ ವಿವರಗಳನ್ನು ಪಡೆದ ಡಿವೈಎಸ್ಪಿ, ಸರಿಯಾಗಿ, ಶಿಸ್ತಿನಿಂದ ಬಾಳಿದರೆ ರೌಡಿ ಶೀಟರ್ ಪಟ್ಟಿಯಿಂದ ಮುಕ್ತಗೊಳಿಸುವ ಭರವಸೆ ನೀಡಿದರು. ಸಕ್ರಿಯರಿಲ್ಲದ ರೌಡಿ ಆಸಾಮಿಗಳ ವಿವರ ಪಡೆದು ಖುಲಾಸೆಗೊಳಿಸುವಂತೆ ತಿಳಿಸಿದರು.
ಇದನ್ನೂ ನೋಡಿ: ಸ್ವಸ್ಥ ಸಮಾಜಕ್ಕೆ ಸಹಕರಿಸಿ, ಉತ್ತಮ ಬದುಕು ಕಟ್ಟಿಕೊಳ್ಳಿ, ಇಲ್ಲವಾದಲ್ಲಿ ಗೂಂಡಾ ಕಾಯಿದೆ: ಎಸ್ಪಿ ಎಚ್ಚರಿಕೆ