ಶಿವಮೊಗ್ಗ: ಬೈಕ್ ಅಪಘಾತದಲ್ಲಿ ಖಾಸಗಿ ಟಿವಿ ವರದಿಗಾರ ಸಾವು - BIKE ACCIDENT

🎬 Watch Now: Feature Video

thumbnail
ಬೈಕ್ ಅಪಘಾತದಲ್ಲಿ ಖಾಸಗಿ ಟಿವಿ ವರದಿಗಾರ ಸಾವು (ETV Bharat)

By ETV Bharat Karnataka Team

Published : March 9, 2026 at 4:20 PM IST

1 Min Read
Choose ETV Bharat

ಶಿವಮೊಗ್ಗ: ಬೈಕ್ ಅಪಘಾತದಲ್ಲಿ ಜಿಲ್ಲೆಯ ಖಾಸಗಿ ಟಿವಿ ವಾಹಿನಿಯ ವರದಿಗಾರ ಅನಿಲ್ ನಾಯ್ಕ್(44) ಎಂಬವರು ಸಾವನ್ನಪ್ಪಿದ್ದಾರೆ. ಅನಿಲ್ ಅವರು ಪತ್ನಿ, ಇಬ್ಬರು ಗಂಡು ಹಾಗೂ ಓರ್ವ ಹೆಣ್ಣು ಮಗುವನ್ನು ಅಗಲಿದ್ದಾರೆ. ಅನಿಲ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ಖಾಸಗಿ ಟಿವಿ ಕ್ಯಾಮರಾಮೆನ್ ಆಗಿ ಕೆಲಸ ಮಾಡಿದ್ದರು. 

ಬೈಕ್ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ: ನಿನ್ನೆ ರಾತ್ರಿ 10:20ರ ಸುಮಾರಿಗೆ ಶಿವಮೊಗ್ಗದ ಬೆಂಕಿನಗರದಿಂದ ವಿನೋಬನಗರದ 60 ಅಡಿ ರಸ್ತೆಗೆ ಬರುವಾಗ ಎದುರಿಗೆ ಬಂದ ಬೈಕ್​ಗೆ ಡಿಕ್ಕಿ ಹೊಡೆದಿದ್ದಾರೆ. ಹೀಗಾಗಿ, ತಕ್ಷಣ ಬೈಕ್​ನಿಂದ ಬಿದ್ದಿದ್ದಾರೆ. ಇದರಿಂದಾಗಿ ಅವರಿಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ. ನಂತರ ಅವರು ಮೇಲೆ ಎದ್ದೇ ಇಲ್ಲ.  

ತಕ್ಷಣವೇ ಎಚ್ಚೆತ್ತ ಸ್ಥಳೀಯರು 108 ವಾಹನದಲ್ಲಿ ನಗರದ ಮ್ಯಾಕ್ಸ್ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದಾರೆ. ಇಂದು ಚಿಕಿತ್ಸೆ ಫಲಕಾರಿಯಾಗದೆ ಅನಿಲ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅಪಘಾತದ ದೃಶ್ಯ ಭಯಪಡುವಂತಿದೆ. ಈ ಕುರಿತು ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾಯಚೂರಲ್ಲಿ ಭೀಕರ ಅಪಘಾತ: ಮೂವರು ಯುವಕರು ಸಾವು

ABOUT THE AUTHOR

...view details