ನೂತನ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಮುಕ್ತಾಯ: ಸುದ್ದಿಗೋಷ್ಠಿ - NEW CABINET MEETING LIVE
🎬 Watch Now: Feature Video

Published : June 3, 2026 at 8:05 PM IST
|Updated : June 3, 2026 at 8:39 PM IST
ಬೆಂಗಳೂರು: ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಧಾನಸೌಧದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಮೊದಲ ಸಭೆಯಲ್ಲಿ ಶಾಲಾ ವಿದ್ಯಾರ್ಥಿಗಳು, ರೈತರು, ಮಹಿಳೆಯರು, 30/40 ಮೇಲ್ಪಟ್ಟ ನಿವೇಶನಗಳಿಗೆ ಒಸಿ, ಉದ್ಯೋಗ ಸಂಬಂಧ ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಈ ಕುರಿತು ಡಿಕೆಶಿ ಹೊಸ ಸಂಪುಟ ಸದಸ್ಯರ ಜೊತೆಗೂಡಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದಾರೆ.
ರಾಜ್ಯದ 34ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ನೊಣವಿನಕೆರೆ ಅಜ್ಜಯ್ಯನ ಹೆಸರಿನಲ್ಲಿ ಸಂಜೆ 4:15ರ ಸುಮಾರಿಗೆ ಪ್ರಮಾಣವಚನ ಸ್ವೀಕರಿಸಿದರು. ರೇಷ್ಮೆ ಶಲ್ಯ, ಪಂಚೆಯ ವಿಶೇಷ ಧಿರಿಸಿನಲ್ಲಿ ಅವರು ಕಂಡುಬಂದರು. ಪ್ರತಿಜ್ಞಾವಿಧಿ ವೇಳೆ ಕೈಯಲ್ಲಿ ಸಂವಿಧಾನ ಪುಸ್ತಕದ ಪ್ರತಿ ಹಿಡಿದುಕೊಂಡಿದ್ದರು.
ಡಿಸಿಎಂ ಆಗಿ ಜಿ.ಪರಮೇಶ್ವರ್ ಪ್ರಮಾಣ: ಡಾ.ಜಿ.ಪರಮೇಶ್ವರ್ ಅವರು ಡಾ.ಅಂಬೇಡ್ಕರ್ ಅವರ ಹೆಸರಿನಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಕೆ.ಹೆಚ್.ಮುನಿಯಪ್ಪ, ಕೆ.ಜೆ.ಜಾರ್ಜ್ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಯು.ಟಿ.ಖಾದರ್, ಈಶ್ವರ್ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್ ಮತ್ತು ಶರಣಪ್ರಕಾಶ್ ಪಾಟೀಲ್ ಸಂಪುಟ ಸಚಿವರಾಗಿ ಅಧಿಕಾರ ಹಾಗು ಗೌಪ್ಯತೆಯ ಶಪಥ ಕೈಗೊಂಡರು.