ಶ್ವಾನದ ಅಂತ್ಯಕ್ರಿಯೆ: ಮೃತ ಮರಿಯ ಅಂತಿಮ ಯಾತ್ರೆಯಲ್ಲಿ ಕೊನೆವರೆಗೂ ಜತೆಯಾಗಿದ್ದ ತಾಯಿ - PUPPY FUNERAL

🎬 Watch Now: Feature Video

thumbnail
ಮೃತ ಮರಿಯ ಅಂತಿಮ ಯಾತ್ರೆಯಲ್ಲಿ ಕೊನೆವರೆಗೂ ಜತೆಯಾಗಿದ್ದ ತಾಯಿ (ETV Bharat)

By ETV Bharat Karnataka Team

Published : June 13, 2026 at 5:19 PM IST

1 Min Read
Choose ETV Bharat

ಬಾಗಲಕೋಟೆ: ಮನುಷ್ಯರಿಗೆ ಹೇಗೆ ತಾಯಿಯ ವಾತ್ಸಲ್ಯ, ಪ್ರೀತಿ, ಬೆಸುಗೆ, ಬಾಂಧವ್ಯ ಇರುತ್ತದೆಯೋ ಹಾಗೆಯೇ ಪ್ರಾಣಿಗಳಿಗೂ ಇರುತ್ತದೆ ಎಂಬುದಕ್ಕೆ ಈ ಮನ ಕಲಕುವ ದೃಶ್ಯವೇ ಸಾಕ್ಷಿಯಾಗಿದೆ.

ಶ್ವಾನವೊಂದು ಅನಾರೋಗ್ಯದಿಂದ ಮೃತಪಟ್ಟಿತ್ತು. ಈ ಶ್ವಾನವನ್ನು ಅಂತಿಮ ಸಂಸ್ಕಾರ ಮಾಡಲು ಪ್ರಾಣಿ‌ ಪ್ರೇಮಿ, ಸಾಮಾಜಿಕ ಚಿಂತಕ ಹಾಗೂ ಚಲನಚಿತ್ರ ನಿರ್ದೇಶಕರಾದ ಘನಶ್ಯಾಮ ಭಾಂಡೆಗೆ ತೆಗೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಮೃತ ಶ್ವಾನದ ತಾಯಿ ಶ್ವಾನ ಆ ವಾಹನದ ಹಿಂದೆಯೇ ಹೋಗಿದೆ. ಸ್ಕೂಟಿಯಲ್ಲಿ ಮೃತದೇಹವನ್ನು ಸಾಗಿಸಲಾಯಿತು. ಅದರಲ್ಲೇ ಸತ್ತ ತನ್ನ ಮರಿಯನ್ನು ನೆಕ್ಕಿ ನೆಕ್ಕುವ ಮೂಲಕ ತನ್ನ ಮೂಕ ರೋಧನೆಯನ್ನು ವ್ಯಕ್ತಪಡಿಸಿತು.

ನಂತರ ನವನಗರ ಚಂದನ ಟಾಕೀಸ್ ಬಳಿ ಜೆಸಿಬಿಯಿಂದ ಗುಂಡಿ ತೆಗೆದು ಮೃತ ಶ್ವಾನದ ಅಂತಿಮ ಸಂಸ್ಕಾರ ನಡೆಸಲಾಯಿತು. ಈ ವೇಳೆ ತಾಯಿ ಶ್ವಾನಕ್ಕೆ ಮನುಷ್ಯರಂತೆ ತನ್ನ ದುಃಖವನ್ನು ತೋರ್ಪಪಡಿಸಲು ಸಾಧ್ಯವಾಗದೇ ಮೂಕ ರೋಧನೆ ಮೂಲಕ ತನ್ನ ಭಾವನೆಯನ್ನು ವ್ಯಕ್ತಪಡಿಸಿತು. ಮೃತದೇಹವನ್ನು ಮುಚ್ಚಿದ ನಂತರವೂ ಶ್ವಾನ ಆ ಮಣ್ಣಿನ ಮೇಲೆ ಕುಳಿತುಕೊಂಡಿತು. ಈ ದೃಶ್ಯ ನೋಡಿದರೆ ಎಂಥವರ ಕರುಳು ಕೂಡ ಚುರ್ ಎನ್ನುತ್ತದೆ. ಈ ಘಟನೆ ಪ್ರಾಣಿಗಳೂ ಸಹ ಯಾವ ರೀತಿ ಭಾವನಾತ್ಮಕವಾಗಿ ತನ್ನವರನ್ನು ಕಳೆದುಕೊಂಡರೆ ನೋವನ್ನು ತೋಡಿಕೊಳ್ಳುತ್ತವೆ ಎಂಬುದಕ್ಕೆ ನಿದರ್ಶನವಾಗಿದೆ. 

ಇದನ್ನೂ ಓದಿ:  ಬೇಟೆಯಾಡಲು ಮನೆ ಆವರಣಕ್ಕೆ ನುಗ್ಗಿದ ಚಿರತೆ, ನಾಯಿ ಕೂಗಾಟಕ್ಕೆ ಹೆದರಿ ಪರಾರಿ: ಸಿಸಿಟಿವಿ ದೃಶ್ಯ

ABOUT THE AUTHOR

Karnataka holds a perpetual importance due to its distinctive political dynamics. ETV Bharat Karnataka’s commitment is demonstrated by the presence of a specialised bureau and a team of journalists focused on amplifying the state's voice on a national scale. Its coverage encompasses not only comprehensive updates on current events but also endeavours to bring out exceptional narratives from around the state, country and from the rest of the world....view details