ಹೋಳಿ ರಂಗಿನಲ್ಲಿ ಹೊಳೆದ ಹಂಪಿ- ವಿಡಿಯೋ - HOLI CELEBRATION

🎬 Watch Now: Feature Video

thumbnail
ಹಂಪಿಯಲ್ಲಿ ಸಡಗರದ ಹೋಳಿ (ETV Bharat)

By ETV Bharat Karnataka Team

Published : March 4, 2026 at 3:00 PM IST

1 Min Read
Choose ETV Bharat

ಬಳ್ಳಾರಿ/ವಿಜಯನಗರ: ವಿಶ್ವಪ್ರಸಿದ್ಧ ಐತಿಹಾಸಿಕ ತಾಣ ಹಂಪಿಯಲ್ಲಿ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ದೇಶ, ವಿದೇಶದ ಪ್ರವಾಸಿಗರು ಹಬ್ಬದಲ್ಲಿ ಭಾಗಿಯಾದರು. ಕಲರ್​ ಕಲರ್​ ಬಣ್ಣಗಳನ್ನು ಎರಚಿಕೊಂಡು ಯುವ ಸಮೂಹ ಹುಚ್ಚೆದ್ದು ಕುಣಿದ ದೃಶ್ಯ ಗಮನ ಸೆಳೆಯಿತು. 

ಸ್ನೇಹಿತರು, ಕುಟುಂಬಸ್ಥರು ಪರಸ್ಪರ ಬಣ್ಣ ಹಚ್ಚಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಹಂಪಿಯ ವಾತಾವರಣವೇ ಹೋಳಿ ರಂಗಿನಿಂದ ಮಿಂಚಿತು. ಈ ಬಾರಿಯ ಹೋಳಿ ಹಬ್ಬ ಉತ್ಸಾಹ, ಬಣ್ಣ ಮತ್ತು ನೃತ್ಯಗಳ ಮೂಲಕ ಸ್ಮರಣೀಯವಾಗಿ ಮೂಡಿಬಂತು.

ಇದಕ್ಕೂ ಮುನ್ನ, ಬಳ್ಳಾರಿ ನಗರದಲ್ಲಿ ತಡರಾತ್ರಿ ಕಾಮದಹನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ವಿವಿಧ ಪ್ರದೇಶಗಳಲ್ಲಿ ಯುವಕರು ಸೇರಿಕೊಂಡು ಸಂಪ್ರದಾಯಬದ್ಧವಾಗಿ ಕಾಮದಹನ ನೆರವೇರಿಸಿದರು. 

ಕಾಮ ದಹನದ ನಂತರ ಬಣ್ಣಗಳ ಆಟ ಶುರುವಾಯಿತು. ಮಕ್ಕಳು, ಯುವಕರು, ಮಹಿಳೆಯರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. ಡಿಜೆ ಸೌಂಡ್‌ಗೆ ಯುವಕರು ನೃತ್ಯ ಮಾಡಿ ಹಬ್ಬದ ಉತ್ಸಾಹ ಹೆಚ್ಚಿಸಿದರು. ಪೊಲೀಸ್ ಇಲಾಖೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

ಇದನ್ನೂ ಓದಿ: ಬಣ್ಣದೋಕುಳಿಯಲ್ಲಿ ಮಿಂದೆದ್ದ ಬೆಳಗಾವಿ: ಕುಣಿದು ಕುಪ್ಪಳಿಸಿದ ಯುವಕ-ಯುವತಿಯರು

ABOUT THE AUTHOR

...view details