ಕಲರ್...ಕಲರ್: ಬಣ್ಣದೋಕುಳಿಯಲ್ಲಿ ಮಿಂದೆದ್ದ ಶಿವಮೊಗ್ಗದ ಜನತೆ - HOLI 2026

🎬 Watch Now: Feature Video

thumbnail
ಬಣ್ಣದೋಕುಳಿಯಲ್ಲಿ ಮಿಂದೆದ್ದ ಶಿವಮೊಗ್ಗದ ಜನತೆ (ETV Bharat)

By ETV Bharat Karnataka Team

Published : March 4, 2026 at 2:19 PM IST

1 Min Read
Choose ETV Bharat

ಶಿವಮೊಗ್ಗ: ನಗರದಲ್ಲಿ ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. 

ಹುಣ್ಣಿಮೆಯ ಮರು ದಿನವಾದ ಇಂದು ಮುಂಜಾನೆಯಿಂದಲೇ ಮಕ್ಕಳು, ಯುವಕ-ಯುವತಿಯರು ಸೇರಿದಂತೆ ಎಲ್ಲ ವಯೋಮಾನದವರು ಬಣ್ಣ ಹಚ್ಚಿಕೊಂಡು ಹಬ್ಬದಲ್ಲಿ ಮಿಂದೆದ್ದರು.

ಮತ್ತೊಂದೆಡೆ, ದುರ್ಗಿಗುಡಿಯ ಶ್ರೀ ದುರ್ಗಮ್ಮ‌ ಮತ್ತು ಮಾರಿಯಮ್ಮ ದೇವಿ ರಥೋತ್ಸವ ನಡೆದಿದ್ದು, ಬಳಿಕ ಯುವಕರು ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡರು.

ನಗರದ ಟಿ.ಶೀನಪ್ಪ ಶೆಟ್ಟಿ ವೃತ್ತದಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ಡಿಜೆ ಮೂಲಕ ಹೋಳಿ ಹಬ್ಬ ಆಯೋಜಿಸಿತ್ತು. ಇಲ್ಲಿ ಯುವಕ, ಯುವತಿಯರಿಗೆ ಪ್ರತ್ಯೇಕವಾಗಿ ಡ್ಯಾನ್ಸ್ ಮಾಡಲು ಅವಕಾಶ ನೀಡಲಾಗಿತ್ತು. ಡಿಜೆ ಸಾಂಗ್ ಜೊತೆ ರೈನ್ ಡ್ಯಾನ್ಸ್ ಕೂಡ ಆಯೋಜಿಸಲಾಗಿತ್ತು. ಮಕ್ಕಳು, ಯುವಕರು, ಮಹಿಳೆಯರು ಪರಸ್ಪರ ಬಣ್ಣ ಎರಚಿಕೊಂಡು ಖುಷಿಪಟ್ಟರು. 

ಗಾಂಧಿ ಬಜಾರ್​ನಲ್ಲಿ ಕಾಮಣ್ಣನನ್ನು ಪ್ರತಿಷ್ಠಾ‌ಪನೆ ಮಾಡಲಾಗಿದ್ದು, ಬೆಳಗ್ಗೆ ಕಾಮಣ್ಣನ ದಹನ ನಡೆಯಿತು. ನಗರದೆಲ್ಲೆಡೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ: ಬಣ್ಣದೋಕುಳಿಯಲ್ಲಿ ಮಿಂದೆದ್ದ ಬೆಳಗಾವಿ: ಕುಣಿದು ಕುಪ್ಪಳಿಸಿದ ಯುವಕ-ಯುವತಿಯರು

ABOUT THE AUTHOR

...view details