ಮೈಸೂರು: ಅಡುಗೆ ಕೋಣೆಯ ಡಬ್ಬಗಳ ಹಿಂದಿತ್ತು ಹಾರುವ ಹಾವು - FLYING SNAKE
🎬 Watch Now: Feature Video

Published : March 1, 2026 at 8:59 AM IST
ಮೈಸೂರು: ನಗರದ ಮನೆಯೊಂದರ ಅಡುಗೆ ಕೋಣೆಯಲ್ಲಿ ಸೇರಿಕೊಂಡಿದ್ದ, ಹಾರುವ ಹಾವನ್ನು ಉರಗ ರಕ್ಷಕ ಸ್ನೇಕ್ ಶ್ಯಾಮ್ ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ವಿಜಯನಗರ ಮೊದಲನೇ ಹಂತದ ನಿವೃತ್ತ ನೌಕರ ಗಂಗಾಧರಪ್ಪ ಅವರ ಅಡುಗೆ ಮನೆಯ ದಿನಸಿ ಡಬ್ಬದ ಹಿಂಭಾಗ ಶುಕ್ರವಾರ ಹಾವು ಕಾಣಿಸಿಕೊಂಡಿತ್ತು. ತಕ್ಷಣ ಮನೆ ಮಾಲೀಕರು ಉರಗ ರಕ್ಷಕ ಸ್ನೇಕ್ ಶ್ಯಾಮ್ಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಸ್ನೇಕ್ ಶಾಮ್ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.
ಮಂಗಳೂರು ಭಾಗದಲ್ಲಿ ಹೆಚ್ಚಾಗಿ ಕಾಣುವ ಹಾವು: ಇದು ಅಪರೂಪದ ಹಾರುವ ಹಾವಾಗಿದ್ದು, ವಿಷ ಇರುವುದಿಲ್ಲ. ಹೆಚ್ಚಾಗಿ ಮಂಗಳೂರು ಭಾಗದಲ್ಲಿ ಕಂಡುಬರುತ್ತದೆ. ಮೈಸೂರು ಭಾಗದಲ್ಲಿ ಕಂಡಿರುವುದು ಅಪರೂಪ ಎಂದು ಉರಗ ರಕ್ಷಕ ಹೇಳಿದ್ದಾರೆ. ಬೇಸಿಗೆ ಆರಂಭವಾಗಿರುವುದರಿಂದ ಬಿಸಿಲಿನ ತಾಪ ತಾಳಲಾರದೆ ಹಾವುಗಳು ತಣ್ಣನೆಯ ಜಾಗವನ್ನು ಹುಡುಕಿಕೊಂಡು ಬರುತ್ತವೆ. ಕೆರೆ-ಕಟ್ಟೆಗಳ ಸಮೀಪ, ಕಾಡಂಚಿನ, ನಗರ ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸ್ನೇಕ್ ಶ್ಯಾಮ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ರಾಂಚಿಯ ಜನವಸತಿ ಪ್ರದೇಶಕ್ಕೆ ನುಗ್ಗಿದ ಕಾಡಾನೆ: ವಿಡಿಯೋ