ಕಬ್ಬಿಗೆ ಯೋಗ್ಯ ಬೆಲೆ ಸಿಗುವವರೆಗೂ ಕಬ್ಬು ಕಡಿಯಬೇಡಿ: ಇಂದೇ ನಿರ್ಧಾರವಾಗದಿದ್ದರೆ ನಾಳೆ ರಾಜ್ಯ ಸ್ತಬ್ಧ: ರೈತ ಮುಖಂಡನ ಎಚ್ಚರಿಕೆ

🎬 Watch Now: Feature Video

thumbnail
ರೈತ ಮುಖಂಡ ಶಶಿಕಾಂತ್ ಗುರೂಜಿ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ (ETV Bharat)

By ETV Bharat Karnataka Team

Published : October 14, 2026 at 1:13 PM IST

2 Min Read
Choose ETV Bharat

​ಚಿಕ್ಕೋಡಿ: "ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಬೆಂಬಲ ಬೆಲೆ (MSP) ನಿಗದಿಪಡಿಸುವ ಭರವಸೆಯನ್ನು ಇಂದೇ ನೀಡಿದರೆ ಪ್ರತಿಭಟನೆ ವಾಪಸ್ ಪಡೆಯುತ್ತೇವೆ. ಇಲ್ಲದಿದ್ದರೆ, ನಾಳೆ ಇಡೀ ರಾಜ್ಯವನ್ನು ಸ್ತಬ್ಧಗೊಳಿಸಲಾಗುವುದು" ರೈತ ಮುಖಂಡ ಶಶಿಕಾಂತ್ ಗುರೂಜಿ ಅವರು ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಪ್ಲಾಜಾದಲ್ಲಿ ಬೃಹತ್ ಕಬ್ಬು ಬೆಳೆಗಾರರ ಹೋರಾಟದ ವೇದಿಕೆಯಲ್ಲಿ ಚಿಕ್ಕೋಡಿ ಈಟಿವಿ ಭಾರತ ಪ್ರತಿದಿನ ಶಿವರಾಜ್ ನೇಸರಗಿ ಜೊತೆ ಮಾತನಾಡುತ್ತಾ, "ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು 35 ಜನರ ರೈತ ಮುಖಂಡರ ನಿಯೋಗವನ್ನು ಮಾತುಕತೆಗೆ ಕರೆದಿದ್ದರು. ಆದರೆ, ಕ್ಯಾಬಿನೆಟ್‌ನಲ್ಲಿ ಚರ್ಚಿಸಲು, ಸಮಿತಿ ರಚಿಸಿ ಸರ್ವೇ ಮಾಡಲು 8 ದಿನ ಅಥವಾ 1 ತಿಂಗಳ ಕಾಲಾವಕಾಶ ಬೇಕು ಎಂದು ಹೇಳುವ ಮೂಲಕ ಸರಿಯಾಗಿ ಸ್ಪಂದಿಸಿಲ್ಲ. ಒಂದು ತಿಂಗಳು ಕಾಯುವಷ್ಟರಲ್ಲಿ ರೈತರು ಕಬ್ಬನ್ನು ಕಡಿದು ಕಾರ್ಖಾನೆಗೆ ಕಳುಹಿಸಿರುತ್ತಾರೆ. ಇದು ರೈತರ ಹೋರಾಟವನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಸಂಚಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಕೂಡಲೇ ಕಬ್ಬಿಗೆ ಎಂಎಸ್‌ಪಿ (MSP) ದರವನ್ನು ಘೋಷಣೆ ಮಾಡಬೇಕು. ರೈತರು ಕಾರ್ಖಾನೆಗೆ ಕಬ್ಬು ಕಳುಹಿಸಲು ಅನುವು ಮಾಡಿಕೊಡಬೇಕು ಹಾಗೂ ಹೊಸ ದರ ನಿಗದಿಯಾಗುವವರೆಗೂ ಕಾರ್ಖಾನೆ ಮಾಲೀಕರು ಹಳೆಯ ದರದಲ್ಲಿ ಅಂತಿಮ ಬಿಲ್ ಮಾಡದಂತೆ ಆದೇಶಿಸಬೇಕು" ಎಂದು ಗುರೂಜಿ ಒತ್ತಾಯಿಸಿದರು.

"ತಮಿಳುನಾಡು ಮುಖ್ಯಮಂತ್ರಿಗಳು ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ 700 ರೂ. ನೀಡುತ್ತಿದ್ದಾರೆ. ಅದೇ ರೀತಿ ಕರ್ನಾಟಕ ಸರ್ಕಾರವು ನಮ್ಮ ಬೆಳೆಗಾರರ ನೆರವಿಗೆ ಧಾವಿಸಿ 1 ಟನ್‌ಗೆ 1000 ರೂ. ನೀಡಬೇಕು. ಶಾಸಕ ಲಕ್ಷ್ಮಣ ಸವದಿ ಅವರು ಮಧ್ಯಪ್ರವೇಶಿಸಿ, ರಾಜ್ಯ ಸರ್ಕಾರದಿಂದ ಈ ಹಣ ಕೊಡಿಸಿದರೆ ರೈತರ ಪುಣ್ಯ ಅವರಿಗೂ ಸಲ್ಲುತ್ತದೆ" ಎಂದು ಗುರೂಜಿ ಮನವಿ ಮಾಡಿದರು.

"ಪ್ರಲ್ಹಾದ್ ಜೋಶಿ ಅವರು ಉತ್ತರ ಕರ್ನಾಟಕದವರು. ಮನಸ್ಸು ಮಾಡಿದರೆ, ಗೃಹ ಸಚಿವ ಅಮಿತ್ ಶಾ, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಜೊತೆ ಒಂದೇ ದಿನದಲ್ಲಿ ಕ್ಯಾಬಿನೆಟ್ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬಹುದು. ಕಳೆದ 7 ತಿಂಗಳಿಂದ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಮತ್ತೆ 1 ತಿಂಗಳು ಸಮಯ ಕೇಳುತ್ತಿರುವುದು ಕೇವಲ ಕಾಲಹರಣದ ತಂತ್ರ. ಇವತ್ತು ಸಂಜೆಯೊಳಗೆ ಸಚಿವರು ಬೇಡಿಕೆ ಈಡೇರಿಸುವ ಭರವಸೆ ನೀಡಿದರೆ ಹೋರಾಟವನ್ನು ಹಿಂಪಡೆಯುತ್ತೇವೆ" ಎಂದು ಸ್ಪಷ್ಟಪಡಿಸಿದರು.

"ಸರ್ಕಾರ ರೈತರ ಬೇಡಿಕೆಗಳಿಗೆ ಇಂದೇ ಸ್ಪಂದಿಸದಿದ್ದರೆ, ಸಂಜೆ 5 ಗಂಟೆಗೆ ರಾಜ್ಯದ ಎಲ್ಲ ರೈತ ಮುಖಂಡರು ಸೇರಿ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುತ್ತೇವೆ. ರಾತ್ರಿಯೇ ಕರೆ ಕೊಟ್ಟು ನಾಳೆ ಇಡೀ ರಾಜ್ಯವನ್ನು ಸ್ತಬ್ಧ (ಬಂದ್) ಮಾಡಲಾಗುವುದು. 2-3 ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ 10-15 ಲಕ್ಷ ರೈತರು ಒಗ್ಗೂಡಿ ತೀವ್ರ ಸ್ವರೂಪದ ಹೋರಾಟ ನಡೆಸಲಿದ್ದಾರೆ" ಎಂದು ಶಶಿಕಾಂತ್ ಗುರೂಜಿ ಎಚ್ಚರಿಸಿದರು.

ಕರ್ನಾಟಕ ಹಾಗೂ ಮಹಾರಾಷ್ಟ್ರದ ಕಬ್ಬು ಬೆಳೆಗಾರರಿಗೆ ಕೈಮುಗಿದು ವಿನಂತಿಸಿದ ಗುರೂಜಿ, ಈ ವರ್ಷ ಕಬ್ಬಿಗೆ ಸೂಕ್ತ ಬೆಲೆ ನಿಗದಿಯಾಗುವವರೆಗೂ ಯಾರೊಬ್ಬರೂ ಕಬ್ಬನ್ನು ಕಡಿಯಬಾರದು ಎಂದು ಕರೆ ನೀಡಿದರು.

ಇದನ್ನೂ ಓದಿ: ಧಾರವಾಡ: 2ನೇ ದಿನವೂ ಕಬ್ಬು ಬೆಳೆಗಾರರಿಂದ ರಾಷ್ಟ್ರೀಯ ಹೆದ್ದಾರಿ ಬಂದ್; ಅಹೋರಾತ್ರಿ ಧರಣಿ