ಹಾವೇರಿ : ತಹಶಿಲ್ದಾರ್​ ಕಚೇರಿ ಒಳಗೆ ಮೆಕ್ಕೆಜೋಳದ ಚೀಲವಿಟ್ಟು ಪ್ರತಿಭಟಿಸಿದ ರೈತರು - FARMERS PROTEST

🎬 Watch Now: Feature Video

thumbnail
ತಹಶಿಲ್ದಾರರ ಕಚೇರಿ ಒಳಗೆ ಮೆಕ್ಕೆಜೋಳದ ಚೀಲವಿಟ್ಟು ಪ್ರತಿಭಟಿಸಿದ ರೈತರು (ETV Bharat)

By ETV Bharat Karnataka Team

Published : December 27, 2025 at 1:15 PM IST

1 Min Read
Choose ETV Bharat

ಹಾವೇರಿ : ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ಬೆಳೆ ‌ಖರೀದಿ‌ ಮಾಡದ ಹಿನ್ನಲೆ ರೈತರು ತಹಶಿಲ್ದಾರ್​ ಕಚೇರಿ ಒಳಗೆ ಮೆಕ್ಕೆಜೋಳದ ಚೀಲ ತಂದು ಹಾಕಿ, ಪ್ರತಿಭಟನೆ ಮಾಡಿದ ಘಟನೆ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದೆ.

ಬ್ಯಾಡಗಿ ತಹಶಿಲ್ದಾರರ ಕಚೇರಿಯ ಒಳಗೆ ಮೆಕ್ಕೆಜೋಳದ ಚೀಲ ಇಟ್ಟಿದ್ದಲ್ಲದೆ, ಕಚೇರಿ ಮುಂದೆ ರೈತರು ಪ್ರತಿಭಟನೆ 
ನಡೆಸಿದರು. 

ಖರೀದಿ ಕೇಂದ್ರದ ಮೂಲಕ ಈಗಾಗಲೇ 6000 ಕ್ವಿಂಟಾಲ್ ಮೆಕ್ಕೆಜೋಳ ಖರೀದಿ ಮಾಡಲಾಗಿದೆ. ನೋಂದಣಿ ಮಾಡಿದ ನೂರಾರು ರೈತರು ಇದ್ದಾರೆ. ರೈತರು ಎಲ್ಲಿಗೆ ಹೋಗಬೇಕು? ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 

5000 ಕ್ವಿಂಟಾಲ್ ಮೆಕ್ಕೆಜೋಳ ಇನ್ನೂ ಇದೆ. ಆದರೆ, 8 ದಿನಗಳಿಂದ ಟ್ರ್ಯಾಕ್ಟರ್​​ನ್ನು ಖರೀದಿ ಕೇಂದ್ರದ ಮುಂದೆ ನಿಲ್ಲಿಸಿದರೂ ಮೆಕ್ಕೆಜೋಳ ಖರೀದಿ ಮಾಡುತ್ತಿಲ್ಲ. ಈ ರೀತಿಯಾದರೆ ಟ್ರ್ಯಾಕ್ಟರ್ ಬಾಡಿಗೆ ಯಾರು ಕೊಡುತ್ತಾರೆ? ಎಂದು ರೈತರು ಪ್ರಶ್ನಿಸಿದರು. 

ಕೆಲ ಖರೀದಿ ಕೇಂದ್ರಗಳಲ್ಲಿ 50 ಕ್ವಿಂಟಾಲ್ ಬದಲು 20 ಕ್ವಿಂಟಾಲ್ ಖರೀದಿ ನಡೆದಿದೆ. ನಾಲ್ಕು ದಿನಗಳಿಂದ ಖರೀದಿ ಸ್ಥಗಿತವಾಗಿದೆ. ನಮ್ಮ ಮೆಕ್ಕೆಜೋಳದ ಚೀಲಗಳಿಗೆ ತಹಶಿಲ್ದಾರ್ ಕಚೇರಿಯಲ್ಲಿ ರಕ್ಷಣೆ ಕೊಡಿ ಎಂದು ರೈತರು ಆಗ್ರಹಿಸಿದರು.

ಸೋಮವಾರದೊಳಗೆ ಮೆಕ್ಕೆಜೋಳ ಖರೀದಿಯ ಎಲ್ಲ ಸಮಸ್ಯೆಗಳು ಬಗೆಹರಿಯಬೇಕು. ಇಲ್ಲದಿದ್ದರೆ ಜಿಲ್ಲೆಯ‌ ಎಲ್ಲ ತಹಶಿಲ್ದಾರ್ ಕಚೇರಿಗಳು, ಜಿಲ್ಲಾಧಿಕಾರಿ ಕಚೇರಿ ಮುಂದೆ ಮೆಕ್ಕೆಜೋಳದ ಚೀಲ ಇಟ್ಟು ಪ್ರತಿಭಟನೆ ಮಾಡುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದರು. ತಹಶಿಲ್ದಾರರು ಕಚೇರಿಯಲ್ಲಿ ಮೆಕ್ಕೆಜೋಳ ಇಟ್ಟುಕೊಂಡು ಚೀಟಿ ನೀಡಲಿ ಎಂದು ಒತ್ತಾಯಿಸಿದರು. 

ಇದನ್ನೂ ಓದಿ : 50 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ಸರ್ಕಾರ ಆದೇಶ: ರೈತರ ಸಂತಸ, ಹೆದ್ದಾರಿ ತಡೆ ವಾಪಸ್

ABOUT THE AUTHOR

...view details