ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ನಿಯೋಜನೆ, ಹರಕೆ ತೀರಿಸಿದ ಅಭಿಮಾನಿಗಳು: ವಿಡಿಯೋ - DKS FANS

🎬 Watch Now: Feature Video

thumbnail
ಚಾಮುಂಡಿ ತಾಯಿಯ ತೇರನ್ನು ಎಳೆಯುವ ಮೂಲಕ ಡಿ. ಕೆ. ಶಿವಕುಮಾರ್ ಅಭಿಮಾನಿಗಳು ಹರಕೆ ತೀರಿಸಿದರು (ETV Bharat)

By ETV Bharat Karnataka Team

Published : June 1, 2026 at 2:00 PM IST

1 Min Read
Choose ETV Bharat

ಮೈಸೂರು : ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೀಗಾಗಿ, ಅವರ ಅಭಿಮಾನಿಗಳು ಭಾನುವಾರ ಚಾಮುಂಡಿ ತಾಯಿಯ ತೇರನ್ನು ಎಳೆಯುವ ಮೂಲಕ ತಮ್ಮ ಹರಕೆ ತೀರಿಸಿದ್ದಾರೆ. 

ಡಿ.ಕೆ.ಶಿವಕುಮಾರ್ ಅವರ ಹೆಂಡತಿ ಉಷಾ ಅವರ ತಂದೆ ಮನೆಯು ಮೈಸೂರು ನಗರದ ಇಟ್ಟಿಗೆ ಗೂಡಿನಲ್ಲಿ ಇದೆ. ಡಿ.ಕೆ ಶಿವಕುಮಾರ್ ಸಹ ಚಾಮುಂಡಿ ತಾಯಿಯ ಪರಮ ಭಕ್ತರು. ಇವರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಪೂಜೆ ಸಲ್ಲಿಸುವುದು ವಾಡಿಕೆ. ಈ ಹಿಂದೆ ಡಿ. ಕೆ. ಶಿವಕುಮಾರ್ ಚಾಮುಂಡಿ ಬೆಟ್ಟಕ್ಕೆ ತೆರಳಿ ಬೆಳ್ಳಿಯ ಆನೆಗಳನ್ನು ನೀಡಿದ್ದರು. 

ಚಾಮುಂಡಿ ತಾಯಿಯ ತೇರು ಸೇವೆ ‍: ಡಿಕೆಶಿ ಮುಖ್ಯಮಂತ್ರಿಯಾಗಿ ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಮೈಸೂರಿನ ಡಿ. ಕೆ. ಅಭಿಮಾನಿಗಳು ಭಾನುವಾರ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ತೇರಿನಲ್ಲಿ ಇಟ್ಟು ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ 101 ತೆಂಗಿ‌ನ ಕಾಯಿ ಒಡೆದು, ಡಿಕೆಶಿ ಅವರ ಭಾವಚಿತ್ರ ಹಿಡಿದು ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಈ ವೇಳೆ, 2028ಕ್ಕೂ ಡಿ. ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ ಎಂದು ಘೋಷಣೆ ಕೂಗಿದ್ದಾರೆ.

ಇದನ್ನೂ ಓದಿ : ದೆಹಲಿಗೆ ತೆರಳಿದ ನಿಯೋಜಿತ ಸಿಎಂ ಡಿಕೆಶಿ ಮತ್ತು ನಿರ್ಗಮಿತ ಸಿಎಂ ಸಿದ್ದರಾಮಯ್ಯ: ಹೈಕಮಾಂಡ್​ ನಾಯಕರ ಭೇಟಿ, ಸಂಪುಟ ರಚನೆ ಬಗ್ಗೆ ಚರ್ಚೆ!

ABOUT THE AUTHOR

Karnataka holds a perpetual importance due to its distinctive political dynamics. ETV Bharat Karnataka’s commitment is demonstrated by the presence of a specialised bureau and a team of journalists focused on amplifying the state's voice on a national scale. Its coverage encompasses not only comprehensive updates on current events but also endeavours to bring out exceptional narratives from around the state, country and from the rest of the world....view details