ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕುಟುಂಬ ಸಮೇತ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ - WATCH VIDEO - ACTOR RISHAB SHETTY
🎬 Watch Now: Feature Video

Published : February 28, 2026 at 4:00 PM IST
ಮಂಗಳೂರು: ಕಾಂತಾರ ಚಿತ್ರದ ಮೂಲಕ ದೇಶವ್ಯಾಪಿ ಖ್ಯಾತಿ ಪಡೆದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕುಟುಂಬ ಸಮೇತ ಮಂಗಳೂರಿನ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಶುಕ್ರವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.
ನಗರದ ಪ್ರಸಿದ್ಧ ಕ್ಷೇತ್ರ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕದ್ರಿ ಮಂಜುನಾಥ ದೇವಸ್ಥಾನದಲ್ಲೂ ದೇವರ ದರ್ಶನ ಮಾಡಿ ಕುಟುಂಬದೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದಲ್ಲಿ ಪೂಜೆ ವೇಳೆ ಭಕ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿಯವರ ಪತ್ನಿ ಪ್ರಗತಿ ಶೆಟ್ಟಿ, ಪುತ್ರ ಹಾಗೂ ಕುಟುಂಬ ಸದಸ್ಯರು ಜೊತೆಯಾಗಿದ್ದರು. ದೇವರ ದರ್ಶನದ ನಂತರ ದೇವಾಲಯದ ಆವರಣದಲ್ಲಿ ಅಭಿಮಾನಿಗಳು ರಿಷಬ್ ಶೆಟ್ಟಿಯವರೊಂದಿಗೆ ಫೋಟೋ ಹಾಗೂ ಸೆಲ್ಪಿ ತೆಗೆಸಿಕೊಳ್ಳಲು ಮುಂದಾದರು. ಅಭಿಮಾನಿಗಳ ಮನವಿ ಮೇರೆಗೆ ಅವರು ಸಹ ಸ್ನೇಹಪೂರ್ವಕವಾಗಿ ಪ್ರತಿಕ್ರಿಯಿಸಿದರು.
ಕಾಂತಾರ ಚಿತ್ರದ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿಯವರ ಜನಪ್ರಿಯತೆ ಮತ್ತಷ್ಟು ಏರಿಕೆಯಾಗಿದ್ದು, ಅವರು ಭೇಟಿ ನೀಡಿದ ಸ್ಥಳಗಳಲ್ಲಿ ಭಕ್ತರು ಹಾಗೂ ಅಭಿಮಾನಿಗಳ ಸಂಭ್ರಮ ಕಂಡುಬಂತು. ದೇವಸ್ಥಾನ ಆಡಳಿತ ಮಂಡಳಿಯವರು ರಿಷಬ್ ಶೆಟ್ಟಿಗೆ ಆತ್ಮೀಯ ಸ್ವಾಗತ ಕೋರಿದರು.
ಇದನ್ನೂ ಓದಿ: ಇದು ವಿಧಿ ಬರೆದ ಕಥೆ ಅಲ್ಲ, ನನಗೆ ನಾನೇ ಬರೆದುಕೊಂಡ ಸಾಧಾರಣ ಕಥೆ: ನಟ ನೀನಾಸಂ ಸತೀಶ್