ಮೇಲ್ಛಾವಣಿಯಿಂದ ಕೆಳಗೆ ಬಿದ್ದ ಹಾವು: ಆತಂಕದಲ್ಲಿ ಮಕ್ಕಳ ‌ಸಹಿತ ಹೊರ ಓಡಿದ ಮನೆ ಮಂದಿ

🎬 Watch Now: Feature Video

thumbnail
ಹಾವು ರಕ್ಷಣೆ ಮಾಡಿದ ಉರಗ ತಜ್ಞ ಸ್ನೇಕ್ ಬಸವರಾಜ್ (ETV Bharat)

By ETV Bharat Karnataka Team

Published : October 14, 2026 at 9:00 PM IST

1 Min Read
Choose ETV Bharat

ದಾವಣಗೆರೆ: ಮನೆಯ ಮೇಲ್ಛಾವಣಿಯಲ್ಲಿ ಕೂಳಿತಿದ್ದ ಐದು ಅಡಿ ಉದ್ದದ ಹಾವು ಏಕಾಏಕಿ ಕೆಳಗಿ ಬಿದ್ದಿದ್ದು, ಹಾವು ಬೀಳುತ್ತಿದ್ದಂತೆ ಮನೆಯ ಮಂದಿ ಆತಂಕದಿಂದ ‌ಮಕ್ಕಳ ‌ಸಹಿತ ಹೊರ ನಡೆದಿರುವ ಘಟನೆ ನಗರದ ಹಳೇ ಕುಂದುವಾಡದಲ್ಲಿ ನಡೆದಿದೆ.

ರೈತ ಶಿವಪ್ಪ ಎಂಬುವರ ಮನೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಕೆಳಗೆ ಬಿದ್ದ ಹಾವು ದನದ ಕೊಟ್ಟಿಗೆ ಸೇರಿತ್ತು. ತಕ್ಷಣ ಮನೆಯ ಸದಸ್ಯರು ಉರಗ ತಜ್ಞ ಸ್ನೇಕ್ ಬಸವರಾಜ್​ ಅವರಿಗೆ ದೂರವಾಣಿ ಕರೆ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಬಸವರಾಜ್​ ಅವರು ಹಾವನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ, ರಕ್ಷಿಸಿದ ಹಾವನ್ನು ಕಂಚಿಕೆರೆ ಗುಡ್ಡದ ಬಳಿಯ ಕುರುಚಲು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.‌ 

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಕ್ ಬಸವರಾಜ್ ಅವರು, "ಕಂದುವಾಡದಲ್ಲಿ ಕೊಟ್ಟಿಗೆ ಮನೆಯಲ್ಲಿ ಕುಳಿತಿದ್ದ ಐದು ಅಡಿ ಉದ್ದದ ಕೇರೆ ಹಾವನ್ನು ರಕ್ಷಿಸಲಾಗಿದೆ. ರಕ್ಷಣೆ ಬಳಿಕ ಆ ಹಾವನ್ನು ಹರಪನಹಳ್ಳಿ ತಾಲೂಕಿನ ಕಂಚಿಕೆರೆ ಗುಡ್ಡದ ಬಳಿಯ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು" ಎಂದು ತಿಳಿಸಿದರು.

ಇದನ್ನೂ ಓದಿ: 14 ಅಡಿ ಹೆಬ್ಬಾವು ಪ್ರತ್ಯಕ್ಷ: ಮಧ್ಯರಾತ್ರಿ ಸ್ಥಳಕ್ಕೆ ಧಾವಿಸಿ ಸುರಕ್ಷಿತವಾಗಿ ರಕ್ಷಿಸಿದ ಸ್ನೇಕ್ ಶ್ರೀನಿವಾಸ್