ದಾವಣಗೆರೆ: ಅಡಿಕೆ ಬೆಳೆಗಾರರ ಒಕ್ಕೂಟದಿಂದ ಎಸಿ ಕಚೇರಿ ಮುತ್ತಿಗೆ ಯತ್ನ

🎬 Watch Now: Feature Video

thumbnail
ಗುಟ್ಕಾ ನಿಷೇಧ ಹಾಗೂ ಭದ್ರಾ ಮೇಲ್ದಂಡೆಗೆ ನೀರು ಬಿಡುಗಡೆಗೆ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ದಾವಣಗೆರೆಯಲ್ಲಿ ನಡೆದ ಬೃಹತ್ ಪ್ರತಿಭಟನೆ ಹಾಗೂ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ರೈತರು. (ETV Bharat)

By ETV Bharat Karnataka Team

Published : August 28, 2026 at 7:13 PM IST

1 Min Read
Choose ETV Bharat

ದಾವಣಗೆರೆ: ಗುಟ್ಕಾ ನಿಷೇಧ ಹಾಗೂ ಭದ್ರಾ ಮೇಲ್ದಂಡೆಗೆ ನೀರು ಬಿಡುಗಡೆ ಮಾಡಲು ಹೊರಡಿಸಿರುವ ಆದೇಶಗಳನ್ನು ರಾಜ್ಯ ಸರ್ಕಾರ ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಅಡಿಕೆ ಬೆಳೆಗಾರರ ಒಕ್ಕೂಟವು ಬೃಹತ್ ಪ್ರತಿಭಟನೆ ಹಾಗೂ ಪಾದಯಾತ್ರೆ ಹಮ್ಮಿಕೊಂಡಿತ್ತು. 

ಕಳೆದ ಮೂರು ದಿನಗಳಿಂದ ಪಾದಯಾತ್ರೆ ನಡೆಯುತ್ತಿದ್ದು, ಇಂದು ಬೃಹತ್ ಪ್ರತಿಭಟನೆಯಾಗಿ ರೂಪ ತಾಳಿತು. ದಾವಣಗೆರೆ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಹಮ್ಮಿಕೊಂಡಿದ್ದ ಪಾದಯಾತ್ರೆ ನಗರದ ಜಯದೇವ ವೃತ್ತಕ್ಕೆ ಬಂದು ತಲುಪಿತು. 

ಪ್ರತಿ ತಾಲೂಕಿನಿಂದ ಆಗಮಿಸಿದ್ದ ರೈತರೆಲ್ಲರೂ ಒಂದೆಡೆ ಸೇರಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ನೇತೃತ್ವದ ಬಿಜೆಪಿ ನಾಯಕರು ಕೂಡ ರೈತರ ಪಾದಯಾತ್ರೆ ಹಾಗೂ ಪ್ರತಿಭಟನೆಗೆ ಸಾಥ್ ನೀಡಿದರು.

ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜೈಕಾರ ಕೂಗಿದ ಪ್ರತಿಭಟನಾನಿರತರು, ಹಸಿರು ಶಾಲು ಬೀಸಿ ಒಗ್ಗಟ್ಟು ಪ್ರದರ್ಶಿಸಿದರು. ಜಯದೇವ ವೃತ್ತದಿಂದ ಎಸಿ ಕಚೇರಿ ಕಡೆ ಸಾಗಿದ ಪಾದಯಾತ್ರೆಯಲ್ಲಿ ನೂರಾರು ರೈತರು ಭಾಗಿಯಾಗಿದ್ದರು.

ಎಸಿ ಕಚೇರಿ ಬಳಿ ಹೈಡ್ರಾಮ: ರೇಣುಕಾಚಾರ್ಯ ನೇತೃತ್ವದಲ್ಲಿ ಪ್ರತಿಭಟನಾನಿರತ ರೈತರು, ಎಸಿ ಕಚೇರಿ ಮುತ್ತಿಗೆಗೆ ಯತ್ನಿಸಿದರು. ಮುತ್ತಿಗೆ ತಡೆಯಲು ಪೊಲೀಸರು ಹರಸಾಹಸಪಟ್ಟರು. ವಶಕ್ಕೆ ಪಡೆದರೂ ಜಗ್ಗದ ರೈತರು, ಪೊಲೀಸ್ ವಾಹನದ ಮುಂದೆ ಕುಳಿತು ಪ್ರತಿಭಟನೆ ಮುಂದುವರಿಸಿದರು. ಎಸಿ ಕಚೇರಿಯ ಮುಂದೆ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ದಾಟಿ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಎಎಸ್ಪಿ ಪರಮೇಶ್ವರ್ ಹೆಗಡೆ, ಡಿವೈಎಸ್ಪಿಗಳಾದ ಶರಣಬಸವೇಶ್ವರ, ಬಸವರಾಜ್ ಅವರು ಪ್ರತಿಭಟನಾಕಾರರನ್ನು ತಡೆದರು.‌ ರೇಣುಕಾಚಾರ್ಯ, ಮಡಾಳ್ ಮಲ್ಲಿಕಾರ್ಜುನ್, ಚಂದ್ರಶೇಖರ್ ಪೂಜಾರ್‌ ಅವರನ್ನು ಪೊಲೀಸರು ವಶಕ್ಕೆ ಪಡೆಯಲು ಹರಸಾಹಸ ಪಡಬೇಕಾಯಿತು. ಕೊನೆಗೂ ನೂಕಾಟ, ತಳ್ಳಾಟದ ನಡುವೆ ಪ್ರತಿಭಟನಾನಿರತ ರೈತರನ್ನು ವಶಕ್ಕೆ ಪಡೆಯಲಾಯಿತು. 

ಇದನ್ನೂ ಓದಿ: ಗುಟ್ಕಾ, ಪಾನ್ ಮಸಾಲಾ ನಿಷೇಧ: ಅಡಿಕೆ ಧಾರಣೆಯಲ್ಲಿ ಕುಸಿತ, ಖರೀದಿಗೆ ಬಾರದ ವ್ಯಾಪಾರಿಗಳು, ಬೆಳೆಗಾರರಲ್ಲಿ ಹೆಚ್ಚಾದ ಆತಂಕ