ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಜಂಟಿ ಸುದ್ದಿಗೋಷ್ಟಿ: ನೇರ ಪ್ರಸಾರ - CM DCM LIVE

🎬 Watch Now: Feature Video

thumbnail
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)

By ETV Bharat Karnataka Team

Published : January 3, 2026 at 11:43 AM IST

|

Updated : January 3, 2026 at 1:05 PM IST

1 Min Read
Choose ETV Bharat

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ- 2005 (MGNREGA) ಯೋಜನೆಯ ಬದಲಾಗಿ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕ ಮಿಷನ್ (ಗ್ರಾಮೀಣ) ಕಾಯ್ದೆ 2025 (VB-G RAM G)ಅನ್ನು ಕೇಂದ್ರ ಸರ್ಕಾರ ಜಾರಿಯಾಗೊಳಿಸಿರುವ ಸಂಬಂಧ ಮುಂದಿನ ರಾಜ್ಯ ಸರ್ಕಾರದ ನಡೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಟಿ ನಡೆಸುತ್ತಿದ್ದಾರೆ.

ಗೃಹ ಕಚೇರಿ ಕೃಷ್ಣದಲ್ಲಿ ಉಭಯ ನಾಯಕರು ಜಂಟಿ ಸುದ್ದಿಗೋಷ್ಟಿ ನಡೆಸುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರದ ಈ ತೀರ್ಮಾನವನ್ನು ಸಚಿವ ಸಂಪುಟ ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಗಿದೆ. ವಿಕೇಂದ್ರಿಕರಣಕ್ಕೆ, ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡುವ, ರಚನಾತ್ಮಕ, ಸಕಾರಾತ್ಮಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ. ಹೊಸ ಕಾಯ್ದೆಯಲ್ಲಿ ಯಾವ ಪಂಚಾಯಿತಿಯಲ್ಲಿ ಯಾವ ಕೆಲಸ ಮಾಡಬೇಕು ಎಂಬುದನ್ನು ಕೇಂದ್ರ ನಿರ್ಧರಿಸುತ್ತದೆ. ಹೊಸ ಕಾನೂನು ಬಂದ ಮೇಲೆ ಎನ್ ಹೆಚ್ ನಲ್ಲಿ ಕಾಮಗಾರಿ ಮಾಡಲು ಕಾರ್ಮಿಕರು ಹೋಗಬೇಕು. ಅಂದರೆ ಇದು ಗುತ್ತಿಗೆದಾರರಿಗೆ ಅನುಕೂಲ ಮಾಡುವ ಯತ್ನವಾಗಿದೆ. ಕೆಲಸದ ಹಕ್ಕನ್ನು ಕಿತ್ತುಕೊಳ್ಳುವ ಕೆಲಸ ಮಾಡಲಾಗಿದೆ ಎಂದು ಸಚಿವ ಸಂಪುಟವು ಕೇಂದ್ರದ ಈ ತೀರ್ಮಾನವನ್ನು ತೀವ್ರವಾಗಿ ಖಂಡಿಸಿದೆ.  

ಸುದ್ದಿಗೋಷ್ಟಿಯಲ್ಲಿ ಕೇಂದ್ರದ ಜಿ ರಾಮ್ ಜಿ ಕಾಯ್ದೆಯನ್ನು ತಿರಸ್ಕರಿಸಿ, ಕರ್ನಾಟಕ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ತರುವ ಘೋಷಣೆ ಮಾಡುತ್ತಾರಾ?. ಆದರೆ, ಕೇಂದ್ರದ ಈ ಹೊಸ ಕಾಯ್ದೆಯನ್ನು ತಿರಸ್ಕರಿಸಿದರೆ, ಕೇಂದ್ರದ ಪಾಲಿನ 60% ಅನುದಾನ ಕೈ ತಪ್ಪುವ ಭೀತಿಯೂ ಇದೆ. ಜೊತೆಗೆ ರಾಜ್ಯವೇ ಪ್ರತ್ಯೇಕ ಕಾಯ್ದೆ ರೂಪಸಿದರೆ ಬೃಹತ್ ಪ್ರಮಾಣದ ಅನುದಾನ ಮೀಸಲಿಡಬೇಕಾಗುತ್ತದೆ.

Last Updated : January 3, 2026 at 1:05 PM IST

ABOUT THE AUTHOR

...view details