ದಸರಾ ಗಜಪಡೆಗೆ ಸಿಸಿಟಿವಿ ಕಣ್ಗಾವಲಿನಲ್ಲಿ ಭದ್ರತೆ: ವಿಡಿಯೋ
🎬 Watch Now: Feature Video

Published : September 1, 2026 at 6:51 PM IST
ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿರುವ ಗಜಪಡೆ ವಾಸ್ತವ್ಯ ಹೂಡಿರುವ ಕೋಡಿ ಸೋಮೇಶ್ವರ ದೇವಾಲಯದ ಶೆಡ್ಗೆ ಸಿಸಿಟಿವಿ ಹಾಕಲಾಗಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿ ಗಜಪಡೆಗೆ ಭದ್ರತೆ ನೀಡಲಾಗಿದೆ.
ದಸರಾ ಗಜಪಡೆ ಆಗಸ್ಟ್ 28 ರಂದು ಜಯಮಾರ್ತಂಡ ದ್ವಾರದ ಮೂಲಕ ಅರಮನೆ ಪ್ರವೇಶ ಮಾಡಿದ ಬಳಿಕ ಒಂಬತ್ತು ಆನಗಳ ವಾಸ್ತವ್ಯಕ್ಕೆ ಅರಮನೆ ಮುಂಭಾಗದ ಕೋಡಿ ಸೋಮೇಶ್ವರ ಆವರಣ ಹಾಗೂ ಭುವನೇಶ್ವರಿ ದೇವಾಲಯದ ಆವರಣದ ಶೆಡ್ನಲ್ಲಿ ವ್ಯವಸ್ಥೆ ಮಾಡಲಾಗಿದೆ.
ಶ್ರೀಕಂಠ, ಮಹೇಂದ್ರ, ಧನಂಜಯ, ಪ್ರಶಾಂತ, ಏಕಲವ್ಯ, ಗೋಪಿ, ಶ್ರೀರಾಮ, ಕಾವೇರಿ ಹಾಗೂ ಲಕ್ಷ್ಮಿ ಸೇರಿದಂತೆ ಒಂಬತ್ತು ಆನೆಗಳು ಹಾಗೂ ಆನೆಗಳಿಗೆ ಆಹಾರ ತಯಾರು ಮಾಡುವ ಸ್ಥಳದಲ್ಲೂ ಸಹ ಸಿಸಿಟಿವಿ ಅಳವಡಿಸಲಾಗಿದೆ. ಒಟ್ಟು 10 ಸಿಸಿಟಿವಿಗಳನ್ನು ಹಾಕಲಾಗಿದ್ದು, ಇವುಗಳ ಮೂಲಕ ದಿನದ 24 ಗಂಟೆ ಆನೆಗಳ ಚಲನವಲನ ಹಾಗೂ ಆನೆ ಬಳಿ ಯಾರು ಬರುತ್ತಾರೆ ಎಂಬ ಬಗ್ಗೆ ನಿಗಾ ವಹಿಸಲಾಗಿದೆ. ಇದರ ಜೊತೆಗೆ ಯಾರೂ ಸಹ ಆನೆಗಳ ಫೋಟೋ ತೆಗೆಯದಂತೆ ನಿರ್ಬಂಧ ವಿಧಿಸಲಾಗಿದೆ.
ಗಜಪಡೆಗೆ ಪೌಷ್ಟಿಕಾಹಾರ: ಬೆಳಗ್ಗೆ ಮತ್ತು ಸಂಜೆ ಗಜಪಡೆಯನ್ನು ಜಂಬೂಸವಾರಿ ತಾಲೀಮಿಗೆ ಕರೆದುಕೊಂಡು ಹೋಗುವಾಗ ಪ್ರತಿದಿನ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಈ ಸ್ಥಳದಲ್ಲೂ ಸಹ ಸಿಸಿಟಿವಿ ಅಳವಡಿಸಲಾಗಿದ್ದು, ಜನರು ಆನೆಗೆ ಆಹಾರ ನೀಡದಂತೆ ನಿರ್ಬಂಧ ವಿಧಿಸಲಾಗಿದೆ. ಗಜಪಡೆ ವಾಸ್ತವ್ಯ ಇರುವ ಜಾಗದಲ್ಲಿ ಪೊಲೀಸ್, ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಗಜಪಡೆಯ ರಕ್ಷಣೆಗೆ ವಿಶೇಷ ತಂಡ ದಿನದ 24 ಗಂಟೆ ಸಿಸಿಟಿವಿ ಜೊತೆ ಕಾರ್ಯ ನಿರ್ವಹಿಸಲಿದೆ.
ಇವುಗಳನ್ನೂ ನೋಡಿ: