LIVE: ಚಳಿಗಾಲದ ಅಧಿವೇಶನ: ಕೊನೆಯ ದಿನದ ವಿಧಾನಸಭೆ ಕಲಾಪದ ನೇರಪ್ರಸಾರ - ASSEMBLY SESSION LIVE

🎬 Watch Now: Feature Video

thumbnail
ವಿಧಾನಸಭೆ ಕಲಾಪ (ETV Bharat)

By ETV Bharat Karnataka Team

Published : December 19, 2025 at 10:14 AM IST

|

Updated : December 19, 2025 at 3:22 PM IST

1 Min Read
Choose ETV Bharat

ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ 10ನೇ ಹಾಗೂ ಕೊನೆಯ ದಿನದ ಕರ್ನಾಟಕ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ವಿಧಾನಸಭೆ ಕಲಾಪದ ನೇರಪ್ರಸಾರ ಇಲ್ಲಿದೆ.  

ಗುರುವಾರ, ಬಿಜೆಪಿ ಸದಸ್ಯರ‌ ತೀವ್ರ ವಿರೋಧ ಮತ್ತು ಪ್ರತಿಭಟನೆ ನಡುವೆ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು. ವಿಧಾನಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ವಿಧೇಯಕ ಕುರಿತು ವಿವರಣೆ ನೀಡಿದರು.  

ಈ ಮಸೂದೆ ಪ್ರಕಾರ, ದ್ವೇಷ ಭಾಷಣ ಮಾಡಿದರೆ ಗರಿಷ್ಠ 7 ವರ್ಷ ಶಿಕ್ಷೆ ವಿಧಿಸುವ ನಿಯಮ‌ ರೂಪಿಸಲಾಗಿದೆ. ದ್ವೇಷ ಭಾಷಣ ಮೂಲಕ ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷೆ, ನಿವಾಸ, ಅಂಗವೈಕಲ್ಯ, ಬುಡಕಟ್ಟು ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವ ಅಥವಾ ಪ್ರಚಾರ ಮಾಡುವ ವ್ಯಕ್ತಿ ಅಥವಾ ಗುಂಪಿಗೆ ಮೂರು ವರ್ಷಗಳ ಕಾಲ ಶಿಕ್ಷೆ ವಿಧಿಸುವ ಅಂಶ ಇದೆ. ಗರಿಷ್ಠ 1 ಲಕ್ಷ ರೂ. ದಂಡದ ಜತೆಗೆ ಶಿಕ್ಷೆ ವಿಧಿಸಬಹುದು ಎಂದು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

Last Updated : December 19, 2025 at 3:22 PM IST

ABOUT THE AUTHOR

...view details