ರಂಗೋಲಿಯಲ್ಲಿ ಮೂಡಿದ ಸೂಟ್​ಕೇಸ್ ಹಿಡಿದಿರುವ ಸಿಎಂ ಸಿದ್ದರಾಮಯ್ಯ ಭಾವಚಿತ್ರ : ವಿಡಿಯೋ - SIDDARAMAIAH PORTRAIT

🎬 Watch Now: Feature Video

thumbnail
ಕಲಾವಿದರು ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿದ್ದಾರೆ (ETV Bharat)

By ETV Bharat Karnataka Team

Published : March 5, 2026 at 6:34 PM IST

1 Min Read
Choose ETV Bharat

ಮೈಸೂರು : ಇದೇ ಮಾರ್ಚ್ 6ನೇ ತಾರೀಖಿನಂದು ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಬಜೆಟ್ ಮಂಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಅವರ ಅಭಿಮಾನಿಗಳು ಸಿಎಂ ಅವರು ಸೂಟ್​ಕೇಸ್ ಹಿಡಿದುಕೊಂಡಿರುವ ರೀತಿಯ ಬೃಹತ್ ಭಾವಚಿತ್ರವನ್ನು ರಂಗೋಲಿಯಲ್ಲಿ ಬಿಡಿಸುವ ಮೂಲಕ ಶುಭಾಶಯ ಕೋರಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಿಗೆ ಈ ಬಾರಿಯ ಬಜೆಟ್ ಮಂಡನೆ ದಾಖಲೆಯ 17ನೇ ಬಜೆಟ್ ಆಗಲಿದೆ. ಹಾಗೂ ಮುಖ್ಯಮಂತ್ರಿಯಾಗಿ ಈ ಬಾರಿ 8ನೇ ಬಜೆಟ್ ಮಂಡಿಸುತ್ತಿದ್ದಾರೆ.

8125 ಚದರಡಿಯ ವಿಸ್ತಾರದಲ್ಲಿ ಸಿದ್ದರಾಮಯ್ಯನವರ ಭಾವಚಿತ್ರ: ಸಿದ್ದರಾಮಯ್ಯನವರು ಬಜೆಟ್​ ಮಂಡಿಸುವುದಕ್ಕೂ ಮುನ್ನ ದಿನ ಪ್ರತಿ ಬಾರಿ ವಿಧಾನಸೌಧಕ್ಕೆ ಹೋಗಿ ಅವರಿಗೆ ಕಂಬಳಿ ಕೊಟ್ಟು ಬರುತ್ತಿದ್ದ ಅವರ ಅಭಿಮಾನಿಗಳು, ಈ ಬಾರಿ ಮೈಸೂರಿನ ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಸುಮಾರು 8,125 ಚದರಡಿಯ ವಿಸ್ತಾರದಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ಚಿತ್ರಿಸಿ ಗಮನ ಸೆಳೆದಿದ್ದಾರೆ. ಈ ಮೂಲಕ ಈ ಬಾರಿ ವಿಶೇಷವಾಗಿ ಅಭಿಮಾನ ಮೆರೆದಿದ್ದಾರೆ.  

'ಪುನೀತ್ ನೇತೃತ್ವದ ಕಲಾವಿದರ ತಂಡ 17ನೇ ಬಾರಿ ದಾಖಲೆಯ ಬಜೆಟ್ ಸೂಟ್ ಕೇಸ್ ಹಿಡಿದಿರುವ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರ ಬಿಡಿಸಿದ್ದಾರೆ' ಎಂದು ಕಂಸಾಳೆ ರವಿ ಅವರು ಈಟಿವಿ ಭಾರತ್​ಗೆ ವಿವರಿಸಿದ್ದಾರೆ.

ಇದನ್ನೂ ಓದಿ : ಬಜೆಟ್ ಲೆಕ್ಕಾಚಾರ: ಮಿತಿ ಮೀರಿದ ರಾಜಸ್ವ ವೆಚ್ಚಕ್ಕೆ ಕಡಿವಾಣ ಹಾಕುವ ಅನಿವಾರ್ಯತೆಯಲ್ಲಿ ಸಿಎಂ ಸಿದ್ದರಾಮಯ್ಯ

ABOUT THE AUTHOR

...view details