VIDEO: ಒಂದರ ಹಿಂದೆ ಒಂದು, ಮತ್ತೊಂದು.. ಬಂಡೀಪುರದಲ್ಲಿ ಒಂದೇ ಬಾರಿ 6 ಹುಲಿಗಳ ದರ್ಶನ - 6 TIGERS SIGHTED AT ONCE

🎬 Watch Now: Feature Video

thumbnail
ಬಂಡೀಪುರದಲ್ಲಿ ಒಂದೇ ಬಾರಿ 6 ಹುಲಿಗಳ ದರ್ಶನ (ETV Bharat)

By ETV Bharat Karnataka Team

Published : March 11, 2026 at 10:01 AM IST

1 Min Read
Choose ETV Bharat

ಚಾಮರಾಜನಗರ: ದೇಶದ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ 6 ಹುಲಿಗಳ ದರ್ಶನವಾಗಿದೆ. ಬಿಸಿಲ ಬೇಗೆ ಹಿನ್ನೆಲೆಯಲ್ಲಿ, ಬಂಡೀಪುರದ ಸಫಾರಿ ಜೋನಿನ ಕಿರುಬನ ಕೊಳಚಿ ಎಂಬ ಕೆರೆಯಲ್ಲಿ ಹುಲಿಗಳು ರಿಲ್ಯಾಕ್ಸ್​ ಮೂಡಿಗೆ ಜಾರಿವೆ. ಒಟ್ಟು 6 ಹುಲಿಗಳನ್ನು ಕಂಡು ಸಫಾರಿಗರು ಪುಳಕಿತರಾಗಿದ್ದಾರೆ.

6 ಹುಲಿಗಳಲ್ಲಿ ಮೂರು ಹುಲಿಗಳು ಮೂರ್ಕೆರೆ ಫೀಮೇಲ್ ಎಂದು ಕರೆಸಿಕೊಳ್ಳುತ್ತಿದ್ದ ಮರಿಗಳಾಗಿದ್ದು, ಅವುಗಳ ತಾಯಿ ನಾಪತ್ತೆಯಾಗಿತ್ತು. ಅದಾದ ಬಳಿಕ, ಮೂರು ಮರಿಗಳು ಬೇಟೆ ಸಾಮರ್ಥ್ಯ ಬೆಳೆಸಿಕೊಂಡು ಒಟ್ಟಾಗಿ ಕಾಣಿಸಿಕೊಂಡಿವೆ. ಕೇತಹಳ್ಳಿ ಕೆರೆ ಫೀಮೇಲ್ ಎಂದು ಕರೆಯಿಸಿಕೊಳ್ಳುವ ತಾಯಿ ಜೊತೆ ಎರಡು ಮರಿಗಳು ಕೆರೆ ದಡದಲ್ಲಿ ಜಲವಿಹಾರ ನಡೆಸಿವೆ.

ಹುಲಿಗಳು ಪ್ರವಾಸಿಗರ ಮುಂದೆ ಕೆರೆಗಿಳಿದು ವಿಶ್ರಾಂತಿಗೆ ಜಾರಿದ್ದು, ಅವುಗಳ ಆಟ ಕಂಡು ಪ್ರವಾಸಿಗರು ರೋಮಾಂಚಿತರಾದರಲ್ಲದೆ, ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ.

ಈ ಕುರಿತು ಬಂಡೀಪುರ ಆರ್​ಎಫ್​ಒ ಮಹಾದೇವಯ್ಯ ಪ್ರತಿಕ್ರಿಯೆ ನೀಡಿದ್ದು, ಸಫಾರಿ ವೇಳೆ ಒಂದೇ ಜಾಗದಲ್ಲಿ ಒಂದರ ಹಿಂದೆ ಮತ್ತೊಂದರಂತೆ‌ ಒಟ್ಟು 6 ಹುಲಿಗಳು ಕಾಣಿಸಿಕೊಂಡಿವೆ.‌ ಪ್ರವಾಸಿಗರು ಅವಿಸ್ಮರಣೀಯ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಒಂದು ದೊಡ್ಡ ಹುಲಿ ಹಾಗೂ 5 ಮರಿ ಹುಲಿಗಳ ದರ್ಶನ ಅಪರೂಪ ಎಂದರು.

ಇದನ್ನೂ ಓದಿ: VIDEO: ಚಿಕ್ಕಮಗಳೂರಲ್ಲಿ ಏಕದಂತ ಭೀಮನ ಗ್ಯಾಂಗ್​ ಹಾವಳಿ: ರಸ್ತೆ ದಾಟಿದ 30 ಕಾಡಾನೆಗಳು!

ABOUT THE AUTHOR

...view details