ಉತ್ತರ ಕನ್ನಡ: 15 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ- ವಿಡಿಯೋ
🎬 Watch Now: Feature Video

Published : August 9, 2026 at 2:50 PM IST
ದಾಂಡೇಲಿ(ಉತ್ತರ ಕನ್ನಡ): ಜಿಲ್ಲೆಯ ದಾಂಡೇಲಿ ತಾಲೂಕಿನ ಮೂಲಂಗಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಸುಮಾರು 5 ಗಂಟೆಗೆ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಸಿತು.
15 ಅಡಿ ಉದ್ದದ ಹೆಬ್ಬಾವು ಕುರಿಯನ್ನು ಕಚ್ಚಿ, ದೇಹಕ್ಕೆ ಸುತ್ತಿಕೊಂಡು ನುಂಗಲು ಯತ್ನಿಸುತ್ತಿತ್ತು. ಕುರಿಗೆ ಹೆಬ್ಬಾವು ಸುತ್ತಿಕೊಂಡಿರುವುದನ್ನು ಗಮನಿಸಿದ ಜನರು ಅರಣ್ಯ ಇಲಾಖೆ ಮತ್ತು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿ ಜಗದೀಶ್, ಪಾರ್ಕ್ ಗಾರ್ಡ್ ದೀಪಕ್ ಸೇರಿದಂತೆ ಸಿಬ್ಬಂದಿ ಹಾಗೂ ಉರಗ ತಜ್ಞ ರಾಜಕ್ ಶಾ, ಮಲಿಕ್ ರಿಹಾನ್ ನೇತೃತ್ವದ ತಂಡ ಜಾಗರೂಕತೆಯಿಂದ ಹೆಬ್ಬಾವನ್ನು ಹಿಡಿದಿದೆ. ನಂತರ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಇತ್ತೀಚಿಗೆ ಅಂಕೋಲಾ ತಾಲೂಕಿನ ಮಾರುಗದ್ದೆ ಗ್ರಾಮದ ಗಣಪ ರಾಮಗೌಡ ಎಂಬವರ ಮನೆಯಲ್ಲಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷಗೊಂಡು, ಮನೆಯವರಲ್ಲಿ ಭಯದ ಉಂಟು ಮಾಡಿತ್ತು. ಅವರ್ಸಾದ ಪ್ರಸಿದ್ಧ ಉರಗ ಪ್ರೇಮಿ ಮಹೇಶ್ ನಾಯಕ್ ಮತ್ತು ಅವರ ಪುತ್ರ ಗಗನ್ ನಾಯ್ಕ್ ಕಟ್ಟಿಗೆಯ ರಾಶಿಯಲ್ಲಿ ಅಡಗಿದ್ದ ಸರ್ಪವನ್ನು ಸುರಕ್ಷಿತವಾಗಿ ಹಿಡಿದಿದ್ದರು. ನಂತರ, ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಸಮೀಪದ ದಟ್ಟ ಅಭಯಾರಣ್ಯಕ್ಕೆ ಕೊಂಡೊಯ್ದು ಬಿಟ್ಟಿದ್ದರು.
ಇದನ್ನೂ ಓದಿ: ಹಾಸನ: ಒಂಟಿ ಸಲಗದ ಪುಂಡಾಟಕ್ಕೆ ಕಿತ್ತಾವರ ಗ್ರಾಮ ತಲ್ಲಣ: ಸೆರೆ ಹಿಡಿಯುವಂತೆ ಆಗ್ರಹ