ETV Bharat / technology

10 ನಿಮಿಷದಲ್ಲಿ 300 km ರೇಂಜ್​ ಚಾರ್ಜ್​!; ಸಿಇಎಸ್​ 2026ನಲ್ಲಿ ಅದ್ಭುತ ಬೈಕ್​ ಅನಾವರಣ!!

Solid State Battery Electric Bike: ವಿಶ್ವದ ಮೊದಲ ಸಾಲಿಡ್ - ಸ್ಟೇಟ್ ಬ್ಯಾಟರಿ ಎಲೆಕ್ಟ್ರಿಕ್ ಬೈಕ್ ಕೇವಲ 10 ನಿಮಿಷಗಳಲ್ಲಿ 299 ಕಿ.ಮೀ. ರೇಂಜ್ ತಲುಪುವ ಚಾರ್ಜ್​ ಆಗಲಿದೆ.

CES 2026  SOLID STATE BATTERIES  VERGE MOTORCYCLES UNVEILED  VERGE MOTORCYCLES PRICE
ಸಾಲಿಡ್-ಸ್ಟೇಟ್ ಬ್ಯಾಟರಿ ಎಲೆಕ್ಟ್ರಿಕ್ ಬೈಕ್ (Photo Credit: Verge TS)
author img

By ETV Bharat Tech Team

Published : January 10, 2026 at 3:12 PM IST

|

Updated : January 11, 2026 at 6:50 AM IST

2 Min Read
Choose ETV Bharat

Solid State Battery Electric Bike: ಎಲೆಕ್ಟ್ರಿಕ್ ವಾಹನಗಳ (EV) ಜಗತ್ತಿನಲ್ಲಿ ಒಂದು ಪವಾಡ ಪತ್ತೆಯಾಗಿದೆ. ಇತ್ತೀಚಿನವರೆಗೂ ನಾವು ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ನೋಡುತ್ತಿದ್ದ ಫಾಸ್ಟ್​ ಚಾರ್ಜಿಂಗ್ ತಂತ್ರಜ್ಞಾನವು ಈಗ ದೊಡ್ಡ ಎಲೆಕ್ಟ್ರಿಕ್ ಬೈಕ್‌ಗಳಿಗೂ ಬಂದಿದೆ. ಫಿನ್ನಿಷ್ ಕಂಪನಿಯೊಂದು ಕೇವಲ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 299 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುವ ಕ್ರಾಂತಿಕಾರಿ ಬೈಕ್ ಸಿದ್ಧಪಡಿಸಿದೆ.

ಫಿನ್ನಿಷ್ ಎಲೆಕ್ಟ್ರಿಕ್ ವಾಹನ ತಯಾರಕ ವರ್ಜ್ ಮೋಟಾರ್‌ಸೈಕಲ್ಸ್ ಆಟೋಮೊಬೈಲ್ ಜಗತ್ತಿನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಇದು ಹಿಂದೆ ಕಾರು ತಯಾರಕರಿಗೆ ಸೀಮಿತವಾಗಿದ್ದ ಸಾಲಿಡ್ ​ -ಸ್ಟೇಟ್​ ಬ್ಯಾಟರಿ ತಂತ್ರಜ್ಞಾನವನ್ನು ಮೊದಲ ಬಾರಿಗೆ ಉತ್ಪಾದನಾ ಬೈಕ್‌ಗೆ ತಂದಿದೆ. ಈ ಬೈಕ್ ಕೇವಲ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 300 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ನಾವು ಸಾಮಾನ್ಯವಾಗಿ ಎಲೆಕ್ಟ್ರಿಕ್ ವಾಹನಗಳಲ್ಲಿ ನೋಡುವ ಲಿಥಿಯಂ - ಐಯಾನ್ ಬ್ಯಾಟರಿಗಳು ದ್ರವ ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುತ್ತವೆ. ಆದರೆ ವರ್ಜ್ ಮೋಟಾರ್‌ಸೈಕಲ್ಸ್ ತನ್ನ ಟಿಎಸ್ ಪ್ರೊ ಮಾದರಿಯನ್ನು ಡೋನಟ್ ಲ್ಯಾಬ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಸಾಲಿಡ್​ - ಸ್ಟೇಟ್​ ಬ್ಯಾಟರಿಯೊಂದಿಗೆ ಸಜ್ಜುಗೊಳಿಸಿದೆ. ಈ ಬ್ಯಾಟರಿಗಳು ಲಿಕ್ವಿಡ್​ ಬದಲಿಗೆ ಘನ ವಸ್ತುವನ್ನು ಬಳಸುತ್ತವೆ.

ಇದು ಅಧಿಕ ಬಿಸಿಯಾಗುವುದು ಮತ್ತು ಬೆಂಕಿಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದಲ್ಲದೇ ಇದು ಲಿಥಿಯಂ - ಐಯಾನ್‌ನ ಎರಡು ಪಟ್ಟು ಶಕ್ತಿಯ ಸಾಂದ್ರತೆಯನ್ನು ಸಂಗ್ರಹಿಸಬಹುದು. ಈ ಬ್ಯಾಟರಿಯು ಸುಮಾರು 1,00,000 ಚಾರ್ಜಿಂಗ್ ಚಕ್ರಗಳ ಜೀವಿತಾವಧಿಯನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ ಬೈಕ್ ಬಳಸುವವರೆಗೆ ಬ್ಯಾಟರಿಯನ್ನು ಬದಲಾಯಿಸಬೇಕಾಗಿಲ್ಲ.

ಈ ಬೈಕ್ ಬಳಕೆದಾರರ ದೊಡ್ಡ ಸಮಸ್ಯೆಯಾದ ಚಾರ್ಜಿಂಗ್ ಸಮಯವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ವರ್ಜ್ ಟಿಎಸ್ ಪ್ರೊ ಬೈಕ್ 200kW ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಇದರ ಮೂಲಕ ಕೇವಲ 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ 299 ಕಿಲೋಮೀಟರ್ (186 ಮೈಲುಗಳು) ವ್ಯಾಪ್ತಿಯನ್ನು ಪಡೆಯಬಹುದು. ಬೈಕ್ ಫುಲ್​ ಚಾರ್ಜ್‌ನಲ್ಲಿ 600 ಕಿಲೋಮೀಟರ್ (373 ಮೈಲುಗಳು) ಗರಿಷ್ಠ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಬಹಿರಂಗಪಡಿಸಿದೆ. ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಯಾವುದೇ ಎಲೆಕ್ಟ್ರಿಕ್ ಬೈಕ್‌ಗಿಂತ ಉತ್ತಮವಾಗಿದೆ.

Verge TS Pro ಕೇವಲ ರೇಂಜ್‌ನಲ್ಲಿ ಮಾತ್ರವಲ್ಲದೇ ಕಾರ್ಯಕ್ಷಮತೆಯಲ್ಲೂ ಸೂಪರ್‌ಕಾರ್‌ಗಳೊಂದಿಗೆ ಸ್ಪರ್ಧಿಸುತ್ತದೆ. ಇದರಲ್ಲಿ ಬಳಸಲಾದ ಹಬ್‌ಲೆಸ್ ಮೋಟಾರ್ ಒಟ್ಟು 1,000 Nm ಟಾರ್ಕ್ ಮತ್ತು 138 hp ಪವರ್ ಉತ್ಪಾದಿಸುತ್ತದೆ. ಇದು ಕೇವಲ 3.5 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್ ವೇಗವನ್ನು ತಲುಪಬಹುದು.

ಇದರ ಹಿಂಭಾಗದ ವೀಲ್​ ಮಧ್ಯದಲ್ಲಿ ಖಾಲಿಯಿದ್ದು, ವಿನ್ಯಾಸವು ತುಂಬಾ ಫ್ಯೂಚರಿಸ್ಟಿಕ್ ಮಾಡಲಾಗಿದೆ. ಇದು ಎರಡು ಬ್ಯಾಟರಿ ಆಯ್ಕೆಗಳನ್ನು ಹೊಂದಿದ್ದು, ಒಂದು 20.2 kWh (ಸ್ಟ್ಯಾಂಡರ್ಡ್), ಮತ್ತೊಂದು 33.3 kWh (ಎಕ್ಸಡೆಂಟ್​ ರೇಂಜ್​). ಪ್ರಸ್ತುತ ಈ ಬೈಕ್‌ನ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 29,900 ಯುರೋಗಳಿಂದ (ಸುಮಾರು 27 ಲಕ್ಷ ರೂ) ಪ್ರಾರಂಭವಾಗುತ್ತದೆ.

ಇದರ ಡೆಲಿವರಿಗಳು 2026ರ ಮೊದಲ ತ್ರೈಮಾಸಿಕದಲ್ಲಿ ಪ್ರಾರಂಭವಾಗಲಿವೆ. ಪ್ರಸ್ತುತ ಯುರೋಪ್ ಮತ್ತು ಯುಎಸ್‌ನಲ್ಲಿ ಬುಕಿಂಗ್‌ಗಳು ತೆರೆದಿವೆ. ಭಾರತದಂತಹ ಮಾರುಕಟ್ಟೆಗಳಲ್ಲಿ ಇದು ಯಾವಾಗ ಲಭ್ಯವಾಗುತ್ತದೆ ಎಂಬುದರ ಕುರಿತು ಕಂಪನಿಯು ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಈ ತಂತ್ರಜ್ಞಾನ ಲಭ್ಯವಾದ ನಂತರ ಅದು ಎಲೆಕ್ಟ್ರಿಕ್​ ವಾಹನಗಳ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ.

ಓದಿ: ಬಾಹ್ಯಾಕಾಶದಲ್ಲಿ ಮೆಡಿಕಲ್​ ಎಮರ್ಜೆನ್ಸಿ, ಗಗನಯಾತ್ರಿ ಅಸ್ವಸ್ಥ! ನಾಸಾದ ಮುಂದಿನ ನಡೆಯೇನು?

Last Updated : January 11, 2026 at 6:50 AM IST