ಭಾರತ ಸರ್ಕಾರದ ನಿರ್ದೇಶನದ ಎಫೆಕ್ಟ್: ಕಟ್ಟುನಿಟ್ಟಿನ ಕ್ರಮ ಕೈಗೊಂಡ ಎಕ್ಸ್, ಹೊಸ ನಿಯಮ ರಚನೆ
X Action On Illegal Content: ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ಗೆ ಇತ್ತೀಚಿಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಎಕ್ಸ್, ಸರ್ಕಾರದ ನಿಯಮಗಳನ್ನು ಪಾಲಿಸುವುದಾಗಿ ಹೇಳಿದೆ.

Published : January 5, 2026 at 11:33 AM IST
X Action On Illegal Content: ಎಲೋನ್ ಮಸ್ಕ್ ಅವರ ಸಾಮಾಜಿಕ ಮಾಧ್ಯಮ ಕಂಪನಿ ಎಕ್ಸ್ ಕಾನೂನುಬಾಹಿರ ಮತ್ತು ಅಶ್ಲೀಲ ವಿಷಯಗಳಿಗೆ ಶೂನ್ಯ ಸಹಿಷ್ಣುತೆ ನೀತಿ ಅಳವಡಿಸಿಕೊಳ್ಳಲು ಮುಂದಾಗಿದೆ. ಗ್ರೋಕ್ AI ದುರುಪಯೋಗವು ನಿಯಮಿತ ಪೋಸ್ಟ್‌ಗಳಂತೆಯೇ ಕ್ರಮಕ್ಕೆ ಒಳಪಟ್ಟಿರುತ್ತದೆ ಎಂದು ಕಂಪನಿ ಹೇಳಿದೆ. ಭಾರತ ಸರ್ಕಾರದಿಂದ ಕಠಿಣ ಎಚ್ಚರಿಕೆಯ ನಂತರ ಈ ಹೇಳಿಕೆ ಹೊರಬಂದಿದೆ. ಸರ್ಕಾರ 72 ಗಂಟೆಗಳೊಳಗೆ ಕಂಪನಿಯಿಂದ ವರದಿ ಕೋರಿತ್ತು.
ಅಕ್ರಮ, ಅಶ್ಲೀಲ ವಿಷಯವನ್ನು ಪೋಸ್ಟ್ ಮಾಡುವವರ ಅಥವಾ AI ಪರಿಕರವಾದ ಗ್ರೋಕ್ ಬಳಸಿ ಅಂತಹ ವಿಷಯವನ್ನು ರಚಿಸುವವರ ಖಾತೆಗಳನ್ನು ಶಾಶ್ವತವಾಗಿ ನಿಷೇಧಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಅಗತ್ಯವಿದ್ದರೆ ಸ್ಥಳೀಯ ಸರ್ಕಾರಗಳು ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಎಕ್ಸ್ ಸಹಕರಿಸುತ್ತದೆ ಎಂದು ತಿಳಿಸಿದೆ.
We take action against illegal content on X, including Child Sexual Abuse Material (CSAM), by removing it, permanently suspending accounts, and working with local governments and law enforcement as necessary.
— Safety (@Safety) January 4, 2026
Anyone using or prompting Grok to make illegal content will suffer the… https://t.co/93kiIBTCYO
ಎಕ್ಸ್ ಕಟ್ಟುನಿಟ್ಟಿನ ನಿಯಮಗಳು:
- ಎಕ್ಸ್ ಯಾವುದೇ ರೀತಿಯ ಕಾನೂನುಬಾಹಿರ ವಿಷಯವನ್ನು ಸಹಿಸುವುದಿಲ್ಲ.
- ಇದರಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ಗಂಭೀರ ವಿಷಯಗಳೂ ಸೇರಿವೆ.
- ಅಂತಹ ವಿಷಯವನ್ನು ತಕ್ಷಣವೇ ತೆಗೆದುಹಾಕಲಾಗುತ್ತದೆ.
- ಅದನ್ನು ಅಪ್‌ಲೋಡ್ ಮಾಡುವ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗುತ್ತದೆ.
- ಅಗತ್ಯವಿದ್ದರೆ ಸ್ಥಳೀಯ ಸರ್ಕಾರಗಳು ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಸಹಕಾರ ನೀಡಲಾಗುತ್ತದೆ.
ಜನವರಿ 2ರಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಎಲ್ಲ ಅಶ್ಲೀಲ, ಆಕ್ಷೇಪಾರ್ಹ ಮತ್ತು ಕಾನೂನುಬಾಹಿರ ವಿಷಯವನ್ನು ತಕ್ಷಣ ತೆಗೆದುಹಾಕುವಂತೆ ಎಕ್ಸ್‌ಗೆ ನಿರ್ದೇಶನ ನೀಡಿತ್ತು. ಈ ಆದೇಶವು ನಿರ್ದಿಷ್ಟವಾಗಿ Grok AI ಬಳಸಿ ರಚಿಸಲಾದ ವಿಷಯದ ಮೇಲೆ ಕಟ್ಟುನಿಟ್ಟಿನ ಮೇಲ್ವಿಚಾರಣೆಯನ್ನು ಕಡ್ಡಾಯಗೊಳಿಸಿತು. ಸಚಿವಾಲಯವು ಎಕ್ಸ್‌ಗೆ 72 ಗಂಟೆಗಳ ಒಳಗೆ ಕ್ರಮ ತೆಗೆದುಕೊಂಡ ವರದಿಯನ್ನು ಸಲ್ಲಿಸುವಂತೆಯೂ ಕೇಳಿತು. ಪಾಲಿಸಲು ವಿಫಲವಾದರೆ ಕಾನೂನು ಕ್ರಮಕ್ಕೆ ಕಾರಣವಾಗಬಹುದು ಎಂದು ಸರ್ಕಾರ ಎಚ್ಚರಿಸಿತ್ತು.
ಎಕ್ಸ್ನಲ್ಲಿ ಮಹಿಳೆಯರ ನಕಲಿ ಮತ್ತು ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಸರ್ಕಾರಕ್ಕೆ ದೂರುಗಳು ಬಂದಿದ್ದವು. ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಈ ವಿಷಯದ ಬಗ್ಗೆ ಮಧ್ಯಪ್ರವೇಶಿಸುವಂತೆ ಕೋರಿ ಪತ್ರ ಬರೆದಿದ್ದರು. Grok AI ಬಳಸಿ ಮಹಿಳೆಯರನ್ನು ಅವಹೇಳನಕಾರಿಯಾಗಿ ಮಾಡುವ ವಿಷಯವನ್ನು ರಚಿಸಲಾಗುತ್ತಿದೆ. ಇದು ಕಾನೂನಿನ ನೇರ ಉಲ್ಲಂಘನೆ ಎಂದು ಆದೇಶದಲ್ಲಿ ಹೇಳಲಾಗಿದೆ. ಇದರ ನಂತರ ಎಕ್ಸ್ ವಿರುದ್ಧ ಒತ್ತಡ ಹೆಚ್ಚಾಗಿತ್ತು.
ಇದನ್ನೂ ಓದಿ: ಮಸ್ಕ್ ಕಂಪನಿ 'ಎಕ್ಸ್' ವಿರುದ್ಧ ಕಠಿಣ ಕ್ರಮ: ಅಶ್ಲೀಲ, ಕಾನೂನುಬಾಹಿರ ಕಂಟೆಂಟ್ ತೆಗೆದುಹಾಕಲು ಭಾರತ ನಿರ್ದೇಶನ

