ETV Bharat / technology

ಸೀಕ್ವೆನ್ಷಿಯಲ್ ಇಂಡಿಕೇಟರ್, ಡ್ಯುಯಲ್ ಟೋನ್ ಕಲರ್​ನಲ್ಲಿ ಹೊಸ ಜೂಪಿಟರ್! ಬೆಲೆ ಎಷ್ಟು ಗೊತ್ತಾ?

TVS Jupiter 110 Spectral Launched: ಟಿವಿಎಸ್ ಜೂಪಿಟರ್ 110 ಸ್ಪೆಕ್ಟ್ರಲ್ ಬಿಡುಗಡೆಯಾಗಿದ್ದು, ಬಣ್ಣ ಬದಲಾಯಿಸುವ ತಂತ್ರಜ್ಞಾನ ಹೊಂದಿದೆ. ಇದರ ಬೆಲೆ, ಫೀಚರ್ಸ್​ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ..

TVS JUPITER 110 SPECTRAL PRICE  TVS JUPITER 110 TOP VARIANT  TVS SPECTRAL COLOUR TECHNOLOGY  TVS JUPITER PRICE HIKE
ಸೀಕ್ವೆನ್ಷಿಯಲ್ ಇಂಡಿಕೇಟರ್, ಡ್ಯುಯಲ್ ಟೋನ್ ಕಲರ್​ನಲ್ಲಿ ಹೊಸ ಜೂಪಿಟರ್ (Photo Credit: TVS Motor)
author img

By ETV Bharat Tech Team

Published : August 31, 2026 at 1:32 PM IST

2 Min Read
Choose ETV Bharat

TVS Jupiter 110 Spectral Launched: ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಜೂಪಿಟರ್ 110 ಸ್ಕೂಟರ್‌ನ ಹೊಸ ಟಾಪ್-ಎಂಡ್ ಸ್ಪೆಕ್ಟ್ರಲ್ ವೇರಿಯಂಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ರೂಪಾಂತರದ ಎಕ್ಸ್ ಶೋರೂಮ್ ಬೆಲೆ 89,825 ರೂಪಾಯಿ ನಿಗದಿಪಡಿಸಲಾಗಿದ್ದು, ಜೂಪಿಟರ್ 110 ಸೀರಿಸ್​ನ ಏಳು ವೇರಿಯಂಟ್‌ಗಳಲ್ಲಿ ಇದು ಅತ್ಯಂತ ದುಬಾರಿ ಮಾದರಿಯಾಗಿದೆ.

ಸ್ಮಾರ್ಟ್‌ಎಕ್ಸ್‌ಆನೆಕ್ಟ್ ಡಿಸ್ಕ್ ಮತ್ತು ಸ್ಪೆಷಲ್ ಎಡಿಷನ್ ಟ್ರಿಮ್‌ಗಳಿಗೆ ಸಮಾನವಾಗಿ ಯಾಂತ್ರಿಕವಾಗಿ ಯಾವುದೇ ಬದಲಾವಣೆ ಇಲ್ಲದಿದ್ದರೂ ವಿನ್ಯಾಸ ಮತ್ತು ಫೀಚರ್ಸ್‌ಅಲ್ಲಿ ವಿಶೇಷತೆಯನ್ನು ಹೊಂದಿದೆ. ಈ ಸ್ಕೂಟರ್ ಶೀಘ್ರದಲ್ಲೇ ದೇಶಾದ್ಯಂತ ಎಲ್ಲಾ ಡೀಲರ್‌ಶಿಪ್‌ಗಳಿಗೆ ತಲುಪಲಿದೆ ಎಂದು ಕಂಪನಿ ತಿಳಿಸಿದೆ.

ಬಣ್ಣ ಮತ್ತು ವಿನ್ಯಾಸದ ವಿಶೇಷತೆ: ಸ್ಪೆಕ್ಟ್ರಲ್ ವೇರಿಯಂಟ್ ಎರಡು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಲಭ್ಯವಿದ್ದು, ಕಂಪನಿಯ ಹೊಸ ಸ್ಪೆಕ್ಟ್ರಲ್ ಕಲರ್ ಟೆಕ್ನಾಲಜಿಯನ್ನು ಮೊದಲ ಬಾರಿಗೆ ಪರಿಚಯಿಸಿದೆ.

  • ಸ್ಪೆಕ್ಟ್ರಲ್ ಬ್ಲೂ: ಬಿಳಿ ಮತ್ತು ನೀಲಿ-ನೇರಳೆ ಡ್ಯುಯಲ್-ಟೋನ್ ಬೇಸ್ ಮೇಲೆ ಬಣ್ಣ ಬದಲಾಯಿಸುವ ಪೇಂಟ್ ಫಿನಿಶ್ ಹೊಂದಿದೆ. ನೋಡುವ ಕೋನಕ್ಕೆ ಅನುಗುಣವಾಗಿ ಬಣ್ಣ ಬದಲಾಗುತ್ತದೆ.
  • ಸ್ಪೆಕ್ಟ್ರಲ್ ಕಾಪರ್: ಬಿಳಿ ಮತ್ತು ತಾಮ್ರ-ನೇರಳೆ ಬಣ್ಣದ ಮೇಲೆ ಇದೇ ರೀತಿಯ ಸ್ಪೆಕ್ಟ್ರಲ್ ತಂತ್ರಜ್ಞಾನ ಅಳವಡಿಸಲಾಗಿದೆ.
  • ಹೆಚ್ಚುವರಿ ಅಂಶಗಳು: ಬಣ್ಣಕ್ಕೆ ಹೊಂದಿಕೆಯಾಗುವ ಒಳ ಪ್ಯಾನೆಲ್‌ಗಳು, ಹೊಸ ಸೀಟ್ ಶೇಡ್ ಮತ್ತು ಭಾಗಶಃ ಕ್ರೋಮ್ ಕನ್ನಡಿಗಳು ಈ ವೇರಿಯಂಟ್‌ನ ಆಕರ್ಷಣೆಯನ್ನು ಹೆಚ್ಚಿಸಿವೆ.

ಹೊಸ ಫೀಚರ್ಸ್‌: ಸ್ಮಾರ್ಟ್‌ಎಕ್ಸ್‌ಆನೆಕ್ಟ್ ಡಿಸ್ಕ್ ವೇರಿಯಂಟ್‌ಗೆ ಹೋಲಿಸಿದರೆ ಸ್ಪೆಕ್ಟ್ರಲ್ ಟ್ರಿಮ್‌ನಲ್ಲಿ ಎರಡು ಹೊಸ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಸದ್ಯಕ್ಕೆ ಇವು ಈ ಟಾಪ್ ವೇರಿಯಂಟ್‌ಗೆ ಮಾತ್ರ ಸೀಮಿತವಾಗಿವೆ.

  • ಇಂಟಿಗ್ರೇಟೆಡ್ ಪಿಲಿಯನ್ ಬ್ಯಾಕ್‌ರೆಸ್ಟ್: ಹಿಂಬದಿ ಸವಾರರಿಗೆ ಹೆಚ್ಚಿನ ಆರಾಮಕ್ಕಾಗಿ ಸ್ಟ್ಯಾಂಡರ್ಡ್ ಫಿಟ್‌ಮೆಂಟ್ ಆಗಿ ಅಳವಡಿಸಲಾಗಿದೆ.
  • ಸೀಕ್ವೆನ್ಷಿಯಲ್ ಟರ್ನ್ ಇಂಡಿಕೇಟರ್ಸ್: ಜೂಪಿಟರ್ 110 ಸೀರಿಸ್​ನಲ್ಲಿ ಸೆಗ್ಮೆಂಟ್-ಫಸ್ಟ್ ಫೀಚರ್ ಆಗಿದ್ದು, ಟಿವಿಎಸ್‌ನ ಹೊಸ ತಂತ್ರಜ್ಞಾನವಾಗಿದೆ.

ಇದಲ್ಲದೆ ಈಗಾಗಲೇ ಇರುವ ಸೆಗ್ಮೆಂಟ್-ಲೀಡಿಂಗ್ ಫೀಚರ್ಸ್‌ ಮುಂದುವರಿದಿವೆ. 33 ಲೀಟರ್ ಅಂಡರ್‌ಸೀಟ್ ಸ್ಟೋರೇಜ್, ಏಪ್ರನ್-ಮೌಂಟೆಡ್ ಫ್ಯೂಯಲ್ ಟ್ಯಾಂಕ್, ಸೈಲೆಂಟ್ ಸ್ಟಾರ್ಟ್-ಸ್ಟಾಪ್‌ಗಾಗಿ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಮತ್ತು ಸ್ಮಾರ್ಟ್‌ಎಕ್ಸ್‌ಆನೆಕ್ಟ್ ಕನೆಕ್ಟೆಡ್ ತಂತ್ರಜ್ಞಾನ ಇದರಲ್ಲಿ ಇದೆ.

ಎಂಜಿನ್ ಮತ್ತು ಬೆಲೆ ವಿವರ: ಯಾಂತ್ರಿಕವಾಗಿ ಯಾವುದೇ ಬದಲಾವಣೆ ಇಲ್ಲ. ಅದೇ 113.3ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ 8 ಹಾರ್ಸ್​ಪವರ್​ ಮತ್ತು 9.80Nm ಟಾರ್ಕ್ ಉತ್ಪಾದಿಸುತ್ತದೆ. ಈ ವರ್ಷದ ಆರಂಭದಲ್ಲಿ ಜೂಪಿಟರ್ 110 ಸೀರಿಸ್​ನ ಬೆಲೆಯನ್ನು 1,950 ರೂಪಾಯಿವರೆಗೆ ಹೆಚ್ಚಿಸಲಾಗಿತ್ತು.

ಟಿವಿಎಸ್ ಜೂಪಿಟರ್ 110 ಸ್ಪೆಕ್ಟ್ರಲ್ ವಿವರ

ವಿವರಮಾಹಿತಿ
ಮಾದರಿಜೂಪಿಟರ್ 110 ಸ್ಪೆಕ್ಟ್ರಲ್ (ಟಾಪ್ ವೇರಿಯಂಟ್)
ಬೆಲೆರೂ 89,825 (ಎಕ್ಸ್ ಶೋರೂಮ್)
ಒಟ್ಟು ವೇರಿಯಂಟ್‌ಗಳು7
ಬಣ್ಣಗಳುಸ್ಪೆಕ್ಟ್ರಲ್ ಬ್ಲೂ, ಸ್ಪೆಕ್ಟ್ರಲ್ ಕಾಪರ್ (ಡ್ಯುಯಲ್-ಟೋನ್)
ವಿಶೇಷ ಪೇಂಟ್ಸ್ಪೆಕ್ಟ್ರಲ್ ಕಲರ್ ಟೆಕ್ನಾಲಜಿ - ಕೋನಕ್ಕೆ ತಕ್ಕಂತೆ ಬಣ್ಣ ಬದಲಾಗುತ್ತದೆ
ಹೊಸ ಫೀಚರ್ಸ್ಇಂಟಿಗ್ರೇಟೆಡ್ ಪಿಲಿಯನ್ ಬ್ಯಾಕ್‌ರೆಸ್ಟ್, ಸೀಕ್ವೆನ್ಷಿಯಲ್ ಟರ್ನ್ ಇಂಡಿಕೇಟರ್
ಎಂಜಿನ್113.3ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್
ಶಕ್ತಿ / ಟಾರ್ಕ್8hp / 9.80Nm
ಸ್ಟೋರೇಜ್33 ಲೀಟರ್ ಅಂಡರ್‌ಸೀಟ್ ಸ್ಟೋರೇಜ್
ಬೆಲೆ ವ್ಯತ್ಯಾಸಸ್ಮಾರ್ಟ್‌ಎಕ್ಸ್‌ಆನೆಕ್ಟ್ ಡಿಸ್ಕ್‌ಗಿಂತ ರೂ 3,000 ಹೆಚ್ಚು, ಸ್ಪೆಷಲ್ ಎಡಿಷನ್‌ಗಿಂತ ರೂ 525 ಹೆಚ್ಚು

ಕಂಪನಿ ಹೇಳಿದ್ದೇನು? ಟಿವಿಎಸ್ ಮೋಟಾರ್ ಕಂಪನಿಯ ಹಿರಿಯ ಉಪಾಧ್ಯಕ್ಷ ಅನಿರುದ್ಧ ಹಾಲ್ದರ್ ಮಾತನಾಡಿ, ಯುವ ಮತ್ತು ನಗರ ಭಾರತೀಯ ಕುಟುಂಬಗಳು ಹೊಸ ಅನುಭವ, ವಿನ್ಯಾಸ ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಒಡ್ಡಿಕೊಳ್ಳುತ್ತಿದ್ದಾರೆ. ಜೂಪಿಟರ್ ಭಾರತದ ಸ್ಕೂಟರೀಕರಣದ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇದನ್ನು 'ಸ್ಕೂಟರ್ ಆಫ್ ಇಂಡಿಯಾ' ಎಂದು ಕರೆಯಲಾಗುತ್ತಿದೆ ಅಂತಾ ಹೇಳಿದ್ದಾರೆ.

ಓದಿ: ಮೇಡ್ ಇನ್ ಇಂಡಿಯಾ ಬ್ಯಾಟರಿಯ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದ ಓಲಾ! ಕಡಿಮೆ ಬೆಲೆಗೆ ಅದ್ಭುತ ಮೈಲೇಜ್​!