ETV Bharat / technology

ಟ್ರಯಂಫ್ 400 ಸೀರಿಸ್​ ಬೆಲೆಗಳಲ್ಲಿ ಏರಿಕೆ: ಯಾವ್ಯಾವ ಮಾಡೆಲ್ಸ್​​​​​​​​​​​​ಗೆ ಎಷ್ಟು ಹೆಚ್ಚಳ?

Triumph 400 Bikes Price Hike: ಟ್ರಯಂಫ್ ಮೋಟಾರ್‌ಸೈಕಲ್ಸ್ ಭಾರತದಲ್ಲಿ ತನ್ನ 400 ಸಿಸಿ ಮೋಟಾರ್‌ಸೈಕಲ್ ರೇಂಜ್​ ಬೆಲೆಗಳನ್ನು ಹೆಚ್ಚಿಸಿದೆ. ಯಾವ ಬೈಕ್​ಗಳ ಬೆಲೆಗಳು ಎಷ್ಟು ಹೆಚ್ಚಾಗಿವೆ ಎಂಬುದರ ಸಂಪೂರ್ಣ ಮಾಹಿತಿ ನಿಮಗಾಗಿ.

TRIUMPH 400 BIKES GET COSTLIER  TRIUMPH 400 SERIES  TRIUMPH 400 SERIES NEW PRICE  TRIUMPH 400 BIKES FEATURES
ಟ್ರಯಂಫ್ 400 ಸೀರಿಸ್​ ಬೆಲೆಗಳು ಏರಿಕೆ (Photo Credit: Triumph Motorcycles India)
author img

By ETV Bharat Tech Team

Published : June 2, 2026 at 1:05 PM IST

3 Min Read
Choose ETV Bharat

Triumph 400 Bikes Price Hike: ಮೋಟಾರ್ ಸೈಕಲ್ ತಯಾರಕ ಟ್ರಯಂಫ್ ಭಾರತದಲ್ಲಿ ತನ್ನ 400 ಸೀರಿಸ್​ನ ಎಲ್ಲ ಬೈಕ್‌ಗಳ ಬೆಲೆಗಳನ್ನು ಹೆಚ್ಚಿಸಿದೆ. ಸ್ಪೀಡ್ 400, ಸ್ಪೀಡ್ T4, ಸ್ಕ್ರ್ಯಾಂಬ್ಲರ್ 400 XC ಮತ್ತು ಥ್ರಕ್ಸ್ಟನ್ 400 ಈಗ ₹2,000 ರಿಂದ ₹5,000 ವರೆಗೆ ದುಬಾರಿಯಾಗಿದೆ. ಹೊಸ ಬೆಲೆಗಳು ತಕ್ಷಣದಿಂದ ಜಾರಿಗೆ ಬಂದಿವೆ.

ನೀವು ಟ್ರಯಂಫ್‌ನ 400 ಸೀರಿಸ್​ ಬೈಕ್ ಖರೀದಿಸಲು ಯೋಜಿಸುತ್ತಿದ್ದರೆ ನೀವು ಈಗ ಸ್ವಲ್ಪ ಹೆಚ್ಚುವರಿ ಖರ್ಚು ಮಾಡಬೇಕಾಗುತ್ತದೆ. ಜೂನ್ 1 ರಿಂದ ಕಂಪನಿಯು ತನ್ನ ಸಂಪೂರ್ಣ 400 ಶ್ರೇಣಿಯಲ್ಲಿ ಬೆಲೆಗಳನ್ನು ಹೆಚ್ಚಿಸಿದೆ. ಈ ಬದಲಾವಣೆಯು ಸ್ಪೀಡ್ 400, ಸ್ಪೀಡ್ T4, ಸ್ಕ್ರ್ಯಾಂಬ್ಲರ್ 400 XC ಮತ್ತು ಥ್ರಕ್ಸ್ಟನ್ 400 ಮೇಲೆ ಪರಿಣಾಮ ಬೀರಿದೆ.

ಟ್ರಯಂಫ್ ಸ್ಪೀಡ್ 400, ಸ್ಪೀಡ್ T4 ಹೊಸ ಬೆಲೆ: ಹೊಸ ಬೆಲೆಯ ಪ್ರಕಾರ, ಟ್ರಯಂಫ್ ಸ್ಪೀಡ್ 400 ಈಗ ₹2.34 ಲಕ್ಷಕ್ಕೆ (ಎಕ್ಸ್-ಶೋರೂಂ, ದೆಹಲಿ) ಲಭ್ಯವಿರುತ್ತದೆ. ಇದರ ಬೆಲೆಯನ್ನು ₹2,000 ರೂ.ವರೆಗೂ ಹೆಚ್ಚಿಸಲಾಗಿದೆ. ಈ ಹಿಂದೆ ಈ ಬೈಕ್ ₹2.32 ಲಕ್ಷಕ್ಕೆ ಲಭ್ಯವಿತ್ತು. ಸ್ಪೀಡ್ T4 ಬೆಲೆ ₹4,000 ರಷ್ಟು ಏರಿಕೆಯಾಗಿದೆ. ಈ ಬೈಕ್ ಈಗ ₹1.99 ಲಕ್ಷದ ಆರಂಭಿಕ ಬೆಲೆಯಲ್ಲಿ ಲಭ್ಯವಿರುತ್ತದೆ.

ಸ್ಕ್ರ್ಯಾಂಬ್ಲರ್ 400 XC, ಥ್ರಕ್ಸ್ಟನ್ 400 ಬೆಲೆ: ಬೆಲೆ ಏರಿಕೆಯು ಸ್ಕ್ರ್ಯಾಂಬ್ಲರ್ 400 XC ಮತ್ತು ಥ್ರಕ್ಸ್ಟನ್ 400 ಮೇಲೆ ಅತ್ಯಂತ ಗಮನಾರ್ಹ ಪರಿಣಾಮ ಬೀರಿದೆ. ಎರಡೂ ಮೋಟಾರ್ ಸೈಕಲ್‌ಗಳು ₹5,000 ರಷ್ಟು ದುಬಾರಿಯಾಗಿವೆ.

ಬೆಲೆ ಪರಿಷ್ಕರಣೆಯ ನಂತರ ಥ್ರಕ್ಸ್ಟನ್ 400ರ ಎಕ್ಸ್-ಶೋರೂಂ ಬೆಲೆ ಈಗ ₹2.70 ಲಕ್ಷಕ್ಕೆ ತಲುಪಿದೆ. ಸ್ಕ್ರ್ಯಾಂಬ್ಲರ್ 400 XC ಅನ್ನು ಈಗ ₹2.94 ಲಕ್ಷಕ್ಕೆ ಖರೀದಿಸಬಹುದು.

ಸ್ಪೀಡ್ T4ಗಾಗಿ ಬೆಲೆ ಏರಿಕೆ: ಸ್ಪೀಡ್ T4 ಬಿಡುಗಡೆಯಾದ ನಂತರ ಅದರ ಬೆಲೆ ಪರಿಷ್ಕರಣೆ ಆಗಿರುವುದು ಇದೇ ಮೊದಲು. ಕಂಪನಿಯ ಪ್ರಸ್ತುತ 350cc ಆಧಾರಿತ ಶ್ರೇಣಿಯಲ್ಲಿ GST 2.0 ಗೆ ಸಂಬಂಧಿಸಿದ ಪ್ಲಾಟ್‌ಫಾರ್ಮ್ ಬದಲಾವಣೆಗಳ ಪ್ರಯೋಜನಗಳನ್ನು ಈ ಹಿಂದೆ ಪಡೆಯದ ಏಕೈಕ ಮಾದರಿ ಇದಾಗಿದೆ. ಈ ಕಾರಣಕ್ಕಾಗಿಯೇ ಹೊಸ 350cc ಸ್ಪೀಡ್ T4 ಈಗ ಕೆಲವೇ ತಿಂಗಳುಗಳ ಹಿಂದೆ ಮಾರಾಟದಲ್ಲಿದ್ದ 399cc ಆವೃತ್ತಿಗಿಂತ ಹೆಚ್ಚು ದುಬಾರಿಯಾಗಿದೆ.

ಬೈಕ್​ ಮಾಡೆಲ್ಸ್​ಹಳೆಯ ಬೆಲೆ (ಎಕ್ಸ್​-ಶೋರೂಂ)ಹೊಸ ಬೆಲೆ (ಎಕ್ಸ್​-ಶೋರೂಂ)
Speed T4ರೂ. 1,95,000 ಲಕ್ಷರೂ. 1,99,139 ಲಕ್ಷ
Speed 400ರೂ. 2,31,890 ಲಕ್ಷರೂ. 2,34,140 ಲಕ್ಷ
Thruxton 400ರೂ. 2,65,538 ಲಕ್ಷರೂ. 2,69,598 ಲಕ್ಷ
Scrambler 400 XCರೂ. 2,89,534 ಲಕ್ಷರೂ. 2,93,596 ಲಕ್ಷ
Tracker 400ರೂ. 2,46,225 ಲಕ್ಷರೂ. 2,46,225 ಲಕ್ಷ
Scrambler 400 Xರೂ. 2,59,241 ಲಕ್ಷರೂ. 2,59,241 ಲಕ್ಷ

ಎಂಜಿನ್ ಪರ್ಫಾರ್ಮೆನ್ಸ್​ ಹೇಗಿದೆ?: ಈ ಸಂಪೂರ್ಣ ಟ್ರಯಂಫ್ ಶ್ರೇಣಿಯು ಕಂಪನಿಯ ಹೊಸ 350cc ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಆದರೆ, ವಿಭಿನ್ನ ಮಾದರಿಗಳಲ್ಲಿ ಕಾರ್ಯಕ್ಷಮತೆಯ ಅಂಕಿ - ಅಂಶಗಳು ಬದಲಾಗುತ್ತವೆ.

  • ಸ್ಪೀಡ್ T4 ನ ಎಂಜಿನ್ 29 ಹಾರ್ಸ್​ಪವರ್​ ಮತ್ತು 31 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಅಂಕಿ - ಅಂಶಗಳು ಹಿಂದಿನ 398.15cc ಎಂಜಿನ್‌ಗಿಂತ ಸ್ವಲ್ಪ ಕಡಿಮೆ. ಇದು 29 ಹಾರ್ಸ್​ಪವರ್​ ಮತ್ತು 36 Nm ಟಾರ್ಕ್ ಉತ್ಪಾದಿಸುತ್ತದೆ.
  • ಸ್ಪೀಡ್ 400 ಮತ್ತು ಸ್ಕ್ರ್ಯಾಂಬ್ಲರ್ 400 XC ಬೈಕ್​ಗಳು 37 ಹಾರ್ಸ್​ಪವರ್​ ಮತ್ತು 32 Nm ಟಾರ್ಕ್ ನೀಡುತ್ತವೆ. ಹಳೆಯ ಆವೃತ್ತಿಗಳಲ್ಲಿ ಈ ಔಟ್‌ಪುಟ್ 40 ಹಾರ್ಸ್​ಪವರ್​ ಮತ್ತು 37.5 Nm ಟಾರ್ಕ್‌ ಉತ್ಪಾದಿಸುತ್ತಿತ್ತು.
  • ಲೈನ್‌ಅಪ್‌ನಲ್ಲಿ ಅತ್ಯಂತ ಶಕ್ತಿಶಾಲಿ ಬೈಕ್ ಥ್ರಕ್ಸ್ಟನ್ 400. ಇದರ ಎಂಜಿನ್ 40 ಹಾರ್ಸ್​ಪವರ್​ ಮತ್ತು 32 Nm ಟಾರ್ಕ್ ಉತ್ಪಾದಿಸುತ್ತದೆ. ಇದು ಇತ್ತೀಚೆಗೆ ಬಿಡುಗಡೆಯಾದ ಟ್ರ್ಯಾಕರ್ 400ಗೆ ಸಮಾನವಾದ ಪರ್ಫಾರ್ಮೆನ್ಸ್​ ನೀಡುತ್ತದೆ.

ದೇಶದಲ್ಲಿ ಟ್ರಯಂಫ್‌ನ 400 ಸೀರಿಸ್​ ತನ್ನ ವಿನ್ಯಾಸ, ಕಾರ್ಯಕ್ಷಮತೆ ಮತ್ತು ಪ್ರೀಮಿಯಂ ಬ್ರ್ಯಾಂಡ್ ಇಮೇಜ್‌ನಿಂದಾಗಿ ತನಗಾಗಿ ಬಲವಾದ ಗುರುತನ್ನು ರೂಪಿಸಿಕೊಂಡಿದೆ. ಇತ್ತೀಚಿನ ಬೆಲೆ ಏರಿಕೆಯ ನಂತರ ಈ ಬೈಕ್‌ಗಳ ಪ್ರವೇಶ ವೆಚ್ಚವು ಖಂಡಿತವಾಗಿಯೂ ಹೆಚ್ಚಾಗಿದೆ. ಆದರೆ, ಅವು ತಮ್ಮ ವಿಭಾಗದಲ್ಲಿ ಅಸಾಧಾರಣ ಸ್ಪರ್ಧಿಗಳಾಗಿ ಉಳಿದಿವೆ.

ಓದಿ: ಈ ಕಾರಿನಲ್ಲಿಯೇ ಫಸ್ಟ್​ ಟೈಂ ಅಂಡರ್​ ಬಾಡಿ ಟ್ಯಾಂಕ್​ ಟೆಕ್ನಾಲಾಜಿ: ಹೊಸ ರೂಪದಲ್ಲಿ ಬರುತ್ತಿದೆ ಮಾರುತಿ ಬ್ರೆಝಾ!