ದೇಶಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಟೆಸ್ಲಾ ಹೊಸ ಮಾಡೆಲ್: ಸಿಂಗಲ್ ಚಾರ್ಜ್ಗೆ 681 ಕಿಲೋಮೀಟರ್ ರೇಂಜ್!
Tesla Model Y L Launched: ಟೆಸ್ಲಾ ಕಂಪನಿ ಮಾಡೆಲ್ ವೈ ನ ಹೊಸ 'ಎಲ್' ರೂಪಾಂತರವನ್ನು ಪರಿಚಯಿಸಿದೆ. ಇದರ ಬೆಲೆ ಮತ್ತು ಫೀಚರ್ಸ್ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ..

Published : April 22, 2026 at 1:49 PM IST
Tesla Model Y L Launched: ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಮತ್ತೊಂದು ಪ್ರಮುಖ ಅಪ್ಡೇಟ್ ಹೊರಬಿದ್ದಿದೆ. ಟೆಸ್ಲಾ ತನ್ನ ಮಾಡೆಲ್ ವೈ ನ ಹೊಸ 'ಎಲ್' ರೂಪಾಂತರವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮಾದರಿಯು ಅದರ ಹಿಂದಿನ ಮಾದರಿಗೆ ಹೋಲಿಸಿದರೆ ಹೆಚ್ಚಿನ ಸ್ಥಳ, ಸೌಕರ್ಯ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದು ಕುಟುಂಬಗಳು ಮತ್ತು ದೂರದ ಪ್ರಯಾಣಕ್ಕೆ ಇನ್ನೂ ಉತ್ತಮ ಆಯ್ಕೆಯಾಗಿದೆ. ಈ ಹೊಸ ರೂಪಾಂತರದ ಪ್ರಮುಖ ಹೈಲೈಟ್ ಅಂದ್ರೆ ಅದರ ವಿಸ್ತೃತ ವ್ಹೀಲ್‌ಬೇಸ್. ಪ್ರಯಾಣಿಕರು ಹೆಚ್ಚಿದ ಲೆಗ್ರೂಮ್ನಿಂದಾಗಿ ಲಾಂಗ್ ಡ್ರೈವ್ ಸಮಯದಲ್ಲಿಯೂ ಸಹ ಆರಾಮದಾಯಕ ಅನುಭವವನ್ನು ಖಚಿತಪಡಿಸುತ್ತಾರೆ.
6 ಸೀಟರ್ ಡಿಸೈನ್: ಈ ಮಾದರಿಯು 6-ಸೀಟರ್ ವಿನ್ಯಾಸವನ್ನು ಹೊಂದಿದೆ. ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ಸ್ ಒಳಗೊಂಡಿದೆ. ಹೆಚ್ಚುವರಿಯಾಗಿ ಮುಂಭಾಗದ ಆಸನಗಳು ತೊಡೆಯ ವಿಸ್ತರಣೆಗಳೊಂದಿಗೆ ಸಜ್ಜುಗೊಂಡಿವೆ. ಹೆದ್ದಾರಿ ಚಾಲನೆಯ ಸಮಯದಲ್ಲಿ ಹೆಚ್ಚುವರಿ ಸೌಕರ್ಯವನ್ನು ಒದಗಿಸುತ್ತದೆ.
ಸಸ್ಪೆನ್ಷನ್ ಮತ್ತು ಡ್ರೈವಿಂಗ್ ಅನುಭವ ಸುಧಾರಣೆ: ಈ ಕಾರು ಹಿಂದಿನ ಮಲ್ಟಿಲಿಂಕ್ ಸಸ್ಪೆನ್ಷನ್ ಸೆಟಪ್ ಅನ್ನು ಉಳಿಸಿಕೊಂಡಿದೆ. ಆದ್ರೆ ಇದು ಈಗ ಎಲೆಕ್ಟ್ರಾನಿಕ್ ಆಗಿ ನಿರಂತರವಾಗಿ ಬದಲಾಗುವ ಡ್ಯಾಂಪಿಂಗ್ ಮತ್ತು ವಿಭಿನ್ನ ಡ್ರೈವ್ ಮೋಡ್‌ಗಳನ್ನು ಸಂಯೋಜಿಸುತ್ತದೆ. ಇದು ಸುಗಮ ಚಾಲನಾ ಅನುಭವವನ್ನು ನೀಡುತ್ತದೆ.
ಪ್ರಭಾವಶಾಲಿ ರೇಂಜ್ ಮತ್ತು ಪರ್ಫಾರ್ಮೆನ್ಸ್: ಕಂಪನಿಯ ಪ್ರಕಾರ, ಈ ರೂಪಾಂತರವು WLTP-ರೇಟೆಡ್ ರೇಂಜ್ ಅನ್ನು 681 ಕಿಲೋಮೀಟರ್‌ಗಳವರೆಗೆ ನೀಡುತ್ತದೆ. ಈ ಸೀರಿಸ್ನಲ್ಲಿ ಇದು ಅತ್ಯಧಿಕವಾಗಿದೆ. ಇದು 201 ಕಿಮೀ/ಗಂಟೆಯ ಗರಿಷ್ಠ ವೇಗವನ್ನು ಹೊಂದಿದೆ ಮತ್ತು ಕೇವಲ 5 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ/ಗಂಟೆಗೆ ಸ್ಪೀಡ್ ಪಡೆಯುತ್ತದೆ.
ಆಲ್-ವ್ಹೀಲ್ ಡ್ರೈವ್‌ನ ಪ್ರಯೋಜನೆವೇನು? ಈ ಹೊಸ ಮಾದರಿಯು ಆಲ್-ವ್ಹೀಲ್ ಡ್ರೈವ್ ಸಿಸ್ಟಮ್ ಹೊಂದಿದೆ. ಇದು ಒರಟು ಅಥವಾ ಒದ್ದೆಯಾದ ರಸ್ತೆಗಳಲ್ಲಿ ಉತ್ತಮ ಎಳೆತವನ್ನು ಒದಗಿಸುತ್ತದೆ. ಇದು ಕಾರಿನ ಹಿಡಿತ ಮತ್ತು ಒಟ್ಟಾರೆ ನಿಯಂತ್ರಣ ಎರಡನ್ನೂ ಹೆಚ್ಚಿಸುತ್ತದೆ.
ಬೆಲೆ ಎಷ್ಟು? ಅದ್ಭುತ ಸೌಂದರ್ಯ ಮತ್ತು ಶಕ್ತಿಯುತ ಬ್ಯಾಟರಿ ಪ್ಯಾಕ್‌ನೊಂದಿಗೆ ಸಜ್ಜುಗೊಂಡಿರುವ ಮಾಡೆಲ್ ವೈ ಲಾಂಗ್ ವ್ಹೀಲ್‌ಬೇಸ್ ರೂಪಾಂತರದ ಬೆಲೆ ₹61.99 ಲಕ್ಷ (ಎಕ್ಸ್-ಶೋರೂಂ) ರಿಂದ ಪ್ರಾರಂಭವಾಗುತ್ತದೆ. ಕಾರು ಆಪ್ಶನ್ "ಫುಲ್ ಸೆಲ್ಫ್ ಡ್ರೈವಿಂಗ್ ಚಾಲನಾ" ಸಾಮರ್ಥ್ಯವನ್ನು ಸಹ ನೀಡುತ್ತದೆ. ಆದ್ರೆ ಈ ವೈಶಿಷ್ಟ್ಯವನ್ನು ಪಡೆಯಲು ಗ್ರಾಹಕರು ಸುಮಾರು ₹6 ಲಕ್ಷ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ವ್ಹೀಲ್ಸ್ ಮತ್ತು ಕಲರ್ ಆಪ್ಶನ್ಸ್: ಹೊಸ ಮಾಡೆಲ್ ವೈ ಎಲ್ 19-ಇಂಚಿನ ಮೆಷಿನಾ 2.0 ಅಲಾಯ್ ವ್ಹೀಲ್‌ಗಳೊಂದಿಗೆ ಅಳವಡಿಸಲಾಗಿದೆ. ಕಾರಿನ ಒಳಭಾಗವು ಬ್ಲ್ಯಾಕ್ ಥೀಮ್ ಅನ್ನು ಹೊಂದಿದೆ. ಆದರೆ ಹೊರಭಾಗವು ವಿವಿಧ ಕಲರ್ ಆಪ್ಶನ್ಸ್ನಲ್ಲಿ ಲಭ್ಯವಿದೆ. ಗ್ರಾಹಕರು ಝೆನ್ ಗ್ರೇ ಕಲರ್ ಅನ್ನು ಬಯಸಿದರೆ. ಅವರು ಹೆಚ್ಚುವರಿಯಾಗಿ ₹95,000 ಪಾವತಿಸಬೇಕಾಗುತ್ತದೆ.
ಕಾರು ಆರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಸ್ಟೆಲ್ತ್ ಗ್ರೇ ಕಲರ್ ಆಯ್ಕೆಯನ್ನು ಪ್ರಮಾಣಿತ ವೈಶಿಷ್ಟ್ಯವಾಗಿ ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಪರ್ಲ್ ವೈಟ್ ಮಲ್ಟಿ-ಕೋಟ್ ಮತ್ತು ಡೈಮಂಡ್ ಬ್ಲ್ಯಾಕ್ ಆಯ್ಕೆಗಳು ತಲಾ ₹95,000 ಬೆಲೆಯನ್ನು ಹೊಂದಿವೆ. ಅಂತಿಮವಾಗಿ ಗ್ಲೇಸಿಯರ್ ಬ್ಲೂ, ಅಲ್ಟ್ರಾ ರೆಡ್ ಮತ್ತು ಕಾಸ್ಮಿಕ್ ಸಿಲ್ವರ್‌ಗಾಗಿ, ನೀವು ₹1.85 ಲಕ್ಷ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.
ಓದಿ: 496km ಮೈಲೇಜ್, 29 ನಿಮಿಷದಲ್ಲಿ 80% ಚಾರ್ಜ್! ಹುಂಡೈನಿಂದ ಹೊಸ ಎಲೆಕ್ಟ್ರಿಕ್ ಕಾರ್ ರಿವೀಲ್

