ETV Bharat / technology

ಸೆಪ್ಟೆಂಬರ್‌ನಲ್ಲಿ ದಮ್ದಾರ್ 5G ಫೋನ್​ಗಳು ಲಾಂಚ್: ಇಲ್ಲಿದೆ ಬಜೆಟ್‌ನಲ್ಲಿ ಬಾಹುಬಲಿಗಳ ವಿವರ!!

Upcoming 5G Phones India Sep: ಸೆಪ್ಟೆಂಬರ್ 2026ರಲ್ಲಿ ಬರ್ತಿರೋ ಮಿಡ್ - ರೇಂಜ್ ದೈತ್ಯ ಫೋನ್‌ಗಳ ಪೂರ್ತಿ ಮಾಹಿತಿ ಇಲ್ಲಿದೆ. ಬ್ಯಾಟರಿ ಮತ್ತು ಪರ್ಫಾರ್ಮೆನ್ಸ್‌ಗೆ ಮೊದಲ ಆದ್ಯತೆ ಕೊಟ್ಟು ತಯಾರಿಸಿರೋ ಫೋನ್‌ಗಳು ಇವು.

BEST BATTERY PHONES SEPTEMBER  BEST MID RANGE PHONES SEP 2026  UPCOMING 5G PHONES INDIA  UPCOMING 5G PHONES PRICE
ಸೆಪ್ಟೆಂಬರ್‌ನಲ್ಲಿ ದಮ್ದಾರ್ 5G ಫೋನ್​ಗಳು ಲಾಂಚ್ (Photo Credit: POCO, Vivo, Redmi)
author img

By ETV Bharat Tech Team

Published : August 30, 2026 at 6:49 AM IST

6 Min Read
Choose ETV Bharat

Upcoming 5G Phones India Sep: ಸೆಪ್ಟೆಂಬರ್ ತಿಂಗಳು ಮೊಬೈಲ್ ಪ್ರಿಯರಿಗೆ ಹಬ್ಬ. POCO, Vivo, Redmi, Infinix ಎಲ್ಲಾ ಕಂಪನಿಗಳು ಒಂದೇ ವಾರದಲ್ಲಿ ತಮ್ಮ ಮಿಡ್-ರೇಂಜ್ ಅಸ್ತ್ರಗಳನ್ನು ಬಿಡ್ತಿವೆ. ಅವುಗಳ ವಿವರಗಳು ಇಲ್ಲಿವೆ..

POCO F9 Ultra - ಬ್ರಾಂಡ್‌ನ ಅತ್ಯಂತ ಪವರ್‌ಫುಲ್ ಫೋನ್: ಇದು POCO ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಫೋನ್. ಲಾಂಚ್ ಸೆಪ್ಟೆಂಬರ್ 1, 2026.

  • ಚಿಪ್‌ಸೆಟ್: Qualcomm Snapdragon 8 Elite Gen 5. Xiaomi 17 Ultra ನಲ್ಲಿರೋದು ಇದೇ ಚಿಪ್. ಇದು ಈ ವರ್ಷದ ಟಾಪ್ ಫ್ಲ್ಯಾಗ್‌ಶಿಪ್ ಪ್ರೊಸೆಸರ್.
  • AnTuTu ಸ್ಕೋರ್: 41,65,108 ಅಂಕ! ಇದು Samsung Galaxy S26 Ultra ಗಿಂತಲೂ ಜಾಸ್ತಿ. ಗೇಮಿಂಗ್‌ಗೆ ಇದಕ್ಕಿಂತ ದೊಡ್ಡದು ಇಲ್ಲ.
  • ಡಿಸೈನ್: Dark Cherry ಬಣ್ಣ, ಹಿಂಭಾಗದಲ್ಲಿ ಪ್ರೀಮಿಯಂ ಲೆದರ್ ಫಿನಿಶ್. Bose ಜೊತೆ ಸೇರಿ ಟ್ಯೂನ್ ಮಾಡಿದ ಡ್ಯುಯಲ್ ಸ್ಪೀಕರ್ + ಹಿಂಭಾಗದಲ್ಲಿ ಡಿಜಿಕೇಟೆಡ್ ಸಬ್‌ವುಫರ್ ಇದೆ. ಸಿನಿಮಾ, ಗೇಮ್‌ಗೆ ಥಿಯೇಟರ್ ಸೌಂಡ್.
  • ಕ್ಯಾಮೆರಾ: ಟ್ರಿಪಲ್ ರಿಯರ್ ಕ್ಯಾಮೆರಾ, ಟೆಲಿಫೋಟೋ ಲೆನ್ಸ್‌ನಿಂದ ದೂರದ ಫೋಟೋ, ಪೋರ್ಟ್ರೇಟ್ ಸೂಪರ್. ದೊಡ್ಡ ಕೂಲಿಂಗ್ ಸಿಸ್ಟಮ್ ಇರೋದ್ರಿಂದ ಬಿಸಿ ಆಗಲ್ಲ.

POCO F9 Pro - Ultra ಗಿಂತ ಸ್ವಲ್ಪ ಕಡಿಮೆ: ಲಾಂಚ್ ಸೆಪ್ಟೆಂಬರ್ 1 ರಂದೇ F9 Ultra ಜೊತೆ.

  • ಚಿಪ್‌ಸೆಟ್: Snapdragon 8 Elite Gen 5 V-ಸೀರೀಸ್. ಸ್ಟ್ಯಾಂಡರ್ಡ್ ವರ್ಷನ್‌ಗಿಂತ GPU ಸ್ಲೈಸ್ ಮತ್ತು ಹೈ-ಪರ್ಫಾರ್ಮೆನ್ಸ್ ಮೆಮೊರಿ ಸ್ವಲ್ಪ ಕಡಿಮೆ, ಆದ್ರೂ ಫ್ಲ್ಯಾಗ್‌ಶಿಪ್ ಲೆವೆಲ್ ಪರ್ಫಾರ್ಮೆನ್ಸ್.
  • ಡಿಸೈನ್: Aurora Green ಬಣ್ಣ, Bose ಟ್ಯೂನ್ಡ್ ಸ್ಪೀಕರ್ ಇದೆ. ಸಬ್‌ವುಫರ್ ಇಲ್ಲ.
  • ಕ್ಯಾಮೆರಾ: F9 Ultra ತರಾನೇ ಟ್ರಿಪಲ್ ಕ್ಯಾಮೆರಾ + ಟೆಲಿಫೋಟೋ ಲೆನ್ಸ್.
  • ಬೆಲೆ ಎಫೆಕ್ಟ್: ಮೆಮೊರಿ ಬೆಲೆ ಜಾಸ್ತಿ ಆಗಿರೋದ್ರಿಂದ X8 Pro Max ಈಗಾಗಲೇ ₹48,999 ಆಗಿದೆ. ಹಾಗಾಗಿ F9 Pro ಬೆಲೆ ₹55,000 ದಾಟಬಹುದು. ಭಾರತಕ್ಕೆ ಬರೋದು ಡೌಟ್, ಯಾಕಂದ್ರೆ F8 ಸೀರೀಸ್ ಬಂದಿರಲಿಲ್ಲ.

POCO X8 5G - 9000mAh ಬ್ಯಾಟರಿ ಹೀರೋ: ಲಾಂಚ್ ಸೆಪ್ಟೆಂಬರ್ 4, ಮಧ್ಯಾಹ್ನ 12 ಗಂಟೆಗೆ Flipkart ನಲ್ಲಿ. X8 Pro ಮತ್ತು Pro Max ಗಿಂತ ಕೆಳಗಿನ ಮಾಡೆಲ್ ಆದ್ರೂ ಬ್ಯಾಟರಿಯಲ್ಲಿ ಅವುಗಳ ಅಪ್ಪ.

  • ಬ್ಯಾಟರಿ: 9,000mAh ಮಹಾ ಬ್ಯಾಟರಿ. X8 Pro ನಲ್ಲಿ 6,500mAh ಮತ್ತು Pro Max ನಲ್ಲಿ 8,500mAh ಇತ್ತು. ಇದರಲ್ಲಿ 9,000mAh! ಇದೆ. ಸಿಂಗಲ್​ ಚಾರ್ಜ್‌ನಲ್ಲಿ 3.2 ದಿನ ಬರುತ್ತೆ ಅಂತ ಟೀಸರ್ ಹೇಳಿದೆ.
  • ಚಾರ್ಜಿಂಗ್: 67W ವೈರ್ಡ್ + 22.5W ರಿವರ್ಸ್ ಚಾರ್ಜಿಂಗ್ + ಬೈಪಾಸ್ ಚಾರ್ಜಿಂಗ್ + PPS + ಸ್ಮಾರ್ಟ್ ಚಾರ್ಜಿಂಗ್ ಹೊಂದಿದೆ. 6 ವರ್ಷ ಬ್ಯಾಟರಿ ಹೆಲ್ತ್ ರೇಟಿಂಗ್ ಇದೆ.
  • ಪ್ರೊಸೆಸರ್: Snapdragon 6s Gen 4. ಫ್ಲ್ಯಾಗ್‌ಶಿಪ್ ಕಿಲ್ಲರ್ ಅಲ್ಲ.. ಆದ್ರೆ ದಿನಾ ಮಲ್ಟಿಟಾಸ್ಕಿಂಗ್, ಇನ್‌ಸ್ಟಾ, ಯೂಟ್ಯೂಬ್, ಲೈಟ್ ಗೇಮಿಂಗ್‌ಗೆ ಸಾಕು. LPDDR + UFS ಸ್ಟೋರೇಜ್ ಹೊಂದಿದೆ.
  • ಡಿಸ್ಪ್ಲೇ: 6.83-ಇಂಚು AMOLED, 3,500 ನಿಟ್ಸ್ ಪೀಕ್ ಬ್ರೈಟ್‌ನೆಸ್, ಸ್ಮೂತ್ ರಿಫ್ರೆಶ್ ರೇಟ್. ಸಿನಿಮಾ ನೋಡೋಕೆ ಬಿಗ್​ ಸ್ಕ್ರೀನ್​ ಇದೆ.
  • ಕ್ಯಾಮೆರಾ: ಡ್ಯುಯಲ್ ರಿಯರ್ - 50MP ಮೇನ್ + ಸೆಕೆಂಡರಿ ಲೆನ್ಸ್, ಮುಂದೆ 16MP ಸೆಲ್ಫಿ ಕ್ಯಾಮೆರಾ ಹೊಂದಿದೆ.
  • ಬಿಲ್ಡ್: IP66 / IP68 / IP69 / IP69K ರೇಟಿಂಗ್ - ನೀರು, ಧೂಳು, ಪ್ರೆಶರ್ ವಾಷ್‌ಗೂ ಏನೂ ಆಗಲ್ಲ. 4 Android ಅಪ್‌ಡೇಟ್ + 6 ವರ್ಷ ಸೆಕ್ಯುರಿಟಿ ಪ್ಯಾಚ್.
  • ಬೆಲೆ: ₹28,000 - ₹30,000 ಅಂದಾಜು. ಬ್ಯಾಟರಿ ಲವರ್ಸ್‌ಗೆ ಬೆಸ್ಟ್ ಎಂದು ಹೇಳಬಹುದು.

POCO X8 Power 5G - 10,000mAh ಬ್ಯಾಟರಿ ಸುನಾಮಿ: ಇದುವೇ ಈ ಸಲದ ಹೈಲೈಟ್. X8 ಸೀರೀಸ್‌ನ ಫ್ಲ್ಯಾಗ್‌ಶಿಪ್ ಮಾಡೆಲ್.

Best battery phones September  Best mid range phones Sep 2026  Upcoming 5G phones India  Upcoming 5G phones price
POCO X8 Power (POCO)
  • ಬ್ಯಾಟರಿ: 10,000mAh! ಇದು ಇಂಡಸ್ಟ್ರಿಯಲ್ಲಿ ಅತಿದೊಡ್ಡದರಲ್ಲಿ ಒಂದು. 3.5 ದಿನ ಪ್ಲೇಬ್ಯಾಕ್ ಟೈಮ್. 100W ವೈರ್ಡ್ + 27W ರಿವರ್ಸ್ + ಬೈಪಾಸ್ + PPS + ಸ್ಮಾರ್ಟ್ ಚಾರ್ಜಿಂಗ್ ಹೊಂದಿದೆ. 6 ವರ್ಷ ಬ್ಯಾಟರಿ ಲೈಫ್ ಸಹ ಇದೆ.
  • ಪ್ರೊಸೆಸರ್: Snapdragon 6 Gen 5 + LPDDR5X RAM + UFS 4.0 ಸ್ಟೋರೇಜ್. ಸ್ಟ್ಯಾಂಡರ್ಡ್ X8 ನಲ್ಲಿರೋ 6s Gen 4 ಗಿಂತ 20% ಜಾಸ್ತಿ ಪವರ್‌ಫುಲ್.
  • ಡಿಸ್ಪ್ಲೇ: 6.83-ಇಂಚು 1.5K AMOLED, 120Hz. ದೊಡ್ಡ ಬ್ಯಾಟರಿನ ಇಷ್ಟು ತೆಳ್ಳಗೆ ಫಿಟ್ ಮಾಡಿರೋದೇ ಇಂಜಿನಿಯರಿಂಗ್ ಮ್ಯಾಜಿಕ್.
  • ಕ್ಯಾಮೆರಾ: 50MP OIS ಮೇನ್ + 8MP ಅಲ್ಟ್ರಾ-ವೈಡ್ + 32MP ಸೆಲ್ಫಿ. OIS ಇರೋದ್ರಿಂದ ವಿಡಿಯೋ ಶೇಕ್ ಆಗಲ್ಲ, ಫೋಟೋ ಬ್ಲರ್ ಆಗಲ್ಲ.
  • ಡಿಸೈನ್: ಹಳದಿ (Yellow) ಬಣ್ಣ ಮತ್ತು ಕಪ್ಪು ಸ್ಕ್ವರ್ಕಲ್ ಕ್ಯಾಮೆರಾ ಮಾಡ್ಯೂಲ್. X8 ನ ಕಿತ್ತಳೆ/ಬಿಳಿ ಬಣ್ಣಕ್ಕಿಂತ ಡಿಫರೆಂಟ್ ಲುಕ್.
  • ಬಾಳಿಕೆ: IP66/68/69/69K + 4 OS ಅಪ್‌ಡೇಟ್ + 6 ವರ್ಷ ಸೆಕ್ಯುರಿಟಿ.
  • ಬೆಲೆ: ₹35,000 ಅಂದಾಜು. X8 ಗಿಂತ ಜಾಸ್ತಿ, X8 Pro ಗಿಂತ ಕಡಿಮೆ.

Vivo T5 5G - ಕರ್ವ್ ಡಿಸ್ಪ್ಲೇಯ ಪ್ರೀಮಿಯಂ ರಾಜ: ಲಾಂಚ್ ಆಗೋದು ಸೆಪ್ಟೆಂಬರ್ 2, 2026 ರಂದು. ಇದು ಕೇವಲ ಫೋನ್ ಅಲ್ಲ, ಕೈಯಲ್ಲಿ ಹಿಡಿದ್ರೆ ಪ್ರೀಮಿಯಂ ಫೀಲ್ ಕೊಡೋ ಪೀಸ್.

Best battery phones September  Best mid range phones Sep 2026  Upcoming 5G phones India  Upcoming 5G phones price
Vivo T5 (Vivo)
  • ಪರ್ಫಾರ್ಮೆನ್ಸ್ ದೈತ್ಯ: MediaTek Dimensity 7500 Turbo ಚಿಪ್‌ಸೆಟ್ ಇದೆ. AnTuTu ನಲ್ಲಿ 12 ಲಕ್ಷ ಅಂಕ ಹೊಡೆದಿದೆ. ಫೋನ್‌ನಲ್ಲೇ 3 ಬಿಲಿಯನ್ ಪ್ಯಾರಾಮೀಟರ್ AI ಮಾಡೆಲ್ ರನ್ ಆಗುತ್ತೆ, ಅಂದ್ರೆ ಸೆಕೆಂಡಿಗೆ 10 ಟೋಕನ್ AI ಕೆಲಸ ಮಾಡುತ್ತೆ. ಗೇಮಿಂಗ್, ಮಲ್ಟಿಟಾಸ್ಕಿಂಗ್‌ಗೆ ಬೇಜಾನ್ ಪವರ್ ಎಂದು ಕಂಪನಿ ಹೇಳುತ್ತೆ.
  • ಡಿಸ್ಪ್ಲೇ: 1.5K ರೆಸಲ್ಯೂಷನ್ ಇರೋ 3D ಕರ್ವ್ಡ್ AMOLED. 144Hz ರಿಫ್ರೆಶ್ ರೇಟ್, 2,000 ನಿಟ್ಸ್ ಪೀಕ್ ಬ್ರೈಟ್‌ನೆಸ್. ಬಿಸಿಲಲ್ಲಿ ನೋಡಿದ್ರೂ ಕ್ಲಿಯರ್ ಕಾಣುತ್ತೆ, ಸ್ಕ್ರೋಲಿಂಗ್ ಬೆಣ್ಣೆ ತರ ಎಂದು ಕಂಪನಿ ಹೇಳಿಕೊಂಡಿದೆ.
  • ಬ್ಯಾಟರಿ: 7,050mAh ಬ್ಯಾಟರಿ. ಒಂದು ದಿನ ಅಲ್ಲ, ಒಂದೂವರೆ ದಿನ ಆರಾಮಾಗಿ ಬರುತ್ತೆ.
  • ಡಿಸೈನ್: Silver Green ಮತ್ತು Royal Bronze ಎರಡು ಬಣ್ಣ. Vivo S2 ಸೀರೀಸ್ ತರ ಪ್ರೀಮಿಯಂ ಲುಕ್, ಮೇಲ್ಭಾಗದಲ್ಲಿ ಪಂಚ್-ಹೋಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
  • ಸಾಫ್ಟ್‌ವೇರ್: Android 16 ಮೇಲೆ ಹೊಚ್ಚ ಹೊಸ OriginOS 6. ಸ್ಮೂತ್ ಆನಿಮೇಷನ್, ಭರ್ಜರಿ ಕಸ್ಟಮೈಸೇಶನ್.
  • ಕ್ಯಾಮೆರಾ: ಕ್ಯಾಮೆರಾ ಡಿಟೇಲ್ ಇನ್ನೂ ಸೀಕ್ರೆಟ್ ಇದೆ, ಆದ್ರೆ AI ಫೀಚರ್ಸ್ ಮೇಲೆ ಜಾಸ್ತಿ ಫೋಕಸ್ ಇದೆ ಅಂತ ಕಂಪನಿ ಹೇಳಿದೆ.

Redmi 17 5G - ಬಜೆಟ್‌ನಲ್ಲಿ ಬ್ಯಾಟರಿ ಬಾಹುಬಲಿ: ಲಾಂಚ್ ಸೆಪ್ಟೆಂಬರ್ 3, 2026 ರಂದು. ಭಾರತೀಯರಿಗಾಗಿ ವಿಶೇಷವಾಗಿ ಮಾಡಿರೋ ಫೋನ್ ಇದು.

Best battery phones September  Best mid range phones Sep 2026  Upcoming 5G phones India  Upcoming 5G phones price
Redmi 17 (Redmi)
  • ಬ್ಯಾಟರಿ ಹೈಲೈಟ್: ಇದರದ್ದೇ ಮ್ಯಾಜಿಕ್. ಗ್ಲೋಬಲ್ ವೇರಿಯಂಟ್‌ನಲ್ಲಿ 7,500mAh ಇತ್ತು, ಭಾರತಕ್ಕೆ 7,900mAh ಕೊಟ್ಟಿದ್ದಾರೆ. ಅಂದ್ರೆ 400mAh ಎಕ್ಸ್‌ಟ್ರಾ. 45W ವೈರ್ಡ್ ಫಾಸ್ಟ್ ಚಾರ್ಜಿಂಗ್ + 22.5W ರಿವರ್ಸ್ ಚಾರ್ಜಿಂಗ್ ಇದೆ. ಇದರಿಂದ ಬೇರೆ ಫೋನ್‌ಗೂ ಚಾರ್ಜ್ ಹಾಕಬಹುದು.
  • ಪ್ರೊಸೆಸರ್: Snapdragon 4 Gen 5. ಇದು ಪವರ್ ಎಫಿಶಿಯಂಟ್ ಚಿಪ್. ದಿನಾ ಸೋಶಿಯಲ್ ಮೀಡಿಯಾ, ಯೂಟ್ಯೂಬ್, ಲೈಟ್ ಗೇಮಿಂಗ್‌ಗೆ ತುಂಬಾ ಸ್ಮೂತ್. ದೊಡ್ಡ ಬ್ಯಾಟರಿ ಜೊತೆ ಕಾಂಬಿನೇಷನ್ ಸೂಪರ್.
  • ಕ್ಯಾಮೆರಾ: 50MP ಮೇನ್ ಕ್ಯಾಮೆರಾ ಕನ್ಫರ್ಮ್. ಹಗಲಲ್ಲಿ ಫೋಟೋ ಚೆನ್ನಾಗಿ ಬರುತ್ತೆ, ಕಡಿಮೆ ಬೆಳಕಲ್ಲಿ ಸಾಫ್ಟ್‌ವೇರ್ ಚೆನ್ನಾಗಿ ಮ್ಯಾನೇಜ್ ಮಾಡುತ್ತೆ.
  • ಡಿಸ್ಪ್ಲೇ: 120Hz ರಿಫ್ರೆಶ್ ರೇಟ್ ಇರೋ ಸ್ಮೂತ್ ಡಿಸ್ಪ್ಲೇ. ಸಿನಿಮಾ, ರೀಲ್ಸ್ ನೋಡೋಕೆ ಫ್ಲೂಯಿಡ್ ಎಕ್ಸ್‌ಪೀರಿಯನ್ಸ್.
  • ಬಣ್ಣಗಳು: Black, Blue ಮತ್ತು Orange - ಯೂತ್‌ಗೆ ಇಷ್ಟ ಆಗೋ ಕಲರ್.
  • ಸಾಫ್ಟ್‌ವೇರ್: ಹೊಸ HyperOS. ಅಪ್‌ಡೇಟ್ ಎಷ್ಟು ವರ್ಷ ಕೊಡ್ತಾರೆ ಅನ್ನೋದು ಲಾಂಚ್‌ನಲ್ಲಿ ಗೊತ್ತಾಗುತ್ತೆ.

Infinix HOT 70 Pro 5G - ಲೈಟಿಂಗ್ ಶೋ ಫೋನ್​: ಸೆಪ್ಟೆಂಬರ್ 4, 2026 ರಂದು Flipkart ಮತ್ತು Infinix ಸ್ಟೋರ್‌ನಲ್ಲಿ ಲಾಂಚ್ ಆಗಲಿದೆ.

  • ಡಿಸೈನ್‌ನಲ್ಲಿ ಬೇರೆನೇ ಲೆವೆಲ್: ಹಿಂಭಾಗದ ಕ್ಯಾಮೆರಾ ಮಾಡ್ಯೂಲ್‌ನಲ್ಲಿ Interactive Active Matrix Cube (AMC) ಅಂತ ಒಂದು ಮಿನಿ ಡಾಟ್-ಮ್ಯಾಟ್ರಿಕ್ಸ್ ಲೈಟ್ ಇದೆ. ಕರೆ ಬಂದ್ರೆ, ಮೆಸೇಜ್ ಬಂದ್ರೆ, ಚಾರ್ಜ್ ಹಾಕಿದ್ರೆ, ಗೇಮ್ ಆಡಿದ್ರೆ, ಹಾಡು ಕೇಳಿದ್ರೆ ಬೇರೆ ಬೇರೆ ಲೈಟಿಂಗ್ ಎಫೆಕ್ಟ್ ಬರುತ್ತೆ. ಇದುವರೆಗೂ ಯಾವ ಮಿಡ್-ರೇಂಜ್ ಫೋನ್‌ನಲ್ಲೂ ಇಲ್ಲ.

ಬಣ್ಣಗಳ ಮೋಡಿ: ಕೇವಲ 7.85mm ತೆಳ್ಳಗೆ ಇದೆ.

  • Thermo Orange - ಬಿಸಿಗೆ ಬಣ್ಣ ಬದಲಾಗುತ್ತೆ
  • Mirage Green - ಬಣ್ಣ ಬದಲಾಗುತ್ತೆ + ಕತ್ತಲಲ್ಲಿ ಹೊಳೆಯುತ್ತೆ
  • Silk Glow Purple - ಲೈಟ್‌ಗೆ ಹೊಳೆಯೋ ಟೆಕ್ಸ್ಚರ್
  • Dive Blue - ಮ್ಯಾಟ್ ಫಿನಿಶ್​
  • ಡಿಸ್ಪ್ಲೇ: 6.76-ಇಂಚು Full HD+ ಡಿಸ್ಪ್ಲೇ, 144Hz ಅಡಾಪ್ಟಿವ್ ರಿಫ್ರೆಶ್ ರೇಟ್. ಬ್ಯಾಟರಿ ಉಳಿಸೋಕೆ ತಾನಾಗೇ ರಿಫ್ರೆಶ್ ರೇಟ್ ಕಡಿಮೆ ಮಾಡಿಕೊಳ್ಳುತ್ತೆ.
  • ಪ್ರೊಸೆಸರ್: 6nm MediaTek Dimensity 7100 5G. 5G ಸ್ಪೀಡ್ ಜೋರಾಗಿದೆ, ಬ್ಯಾಟರಿ ಕಡಿಮೆ ತಿನ್ನುತ್ತೆ.
  • ಕ್ಯಾಮೆರಾ: 50MP Sony IMX882 ಮೇನ್ ಸೆನ್ಸರ್, 2x ಲಾಸ್‌ಲೆಸ್ ಜೂಮ್ ಜೊತೆಗೆ AI Studio - AI Eraser (ಫೋಟೋದಲ್ಲಿರೋ ಜನರನ್ನ ತೆಗೆದಾಕಬಹುದು), AI Background, AI Sharpness.
  • ಬ್ಯಾಟರಿ ಮತ್ತು ಬಾಳಿಕೆ: 6,000mAh ಬ್ಯಾಟರಿ + 45W ಫಾಸ್ಟ್ ಚಾರ್ಜಿಂಗ್. ಜೊತೆಗೆ IP68 ವಾಟರ್ & ಡಸ್ಟ್ ಪ್ರೂಫ್ ಹಾಗು MIL-STD ಮಿಲಿಟರಿ ಗ್ರೇಡ್ ಬಾಳಿಕೆ ಸರ್ಟಿಫಿಕೇಟ್ ಹೊಂದಿದೆ.
ಫೋನ್ ಮಾಡೆಲ್​ಪ್ರೊಸೆಸರ್ಬ್ಯಾಟರಿಸ್ಕ್ರೀನ್​ ಮತ್ತು ಡಿಸ್ಪ್ಲೇ ಮೇನ್​ ಕ್ಯಾಮೆರಾಲಾಂಚ್​ ಡೇಟ್​ಅಂದಾಜು ಬೆಲೆ
POCO X8 5Gಸ್ನ್ಯಾಪ್‌ಡ್ರಾಗನ್ 6s Gen 49000mAh, 67W ಚಾರ್ಜಿಂಗ್6.83" 1.5K AMOLED 120Hz50MPಸೆಪ್ಟೆಂಬರ್ 4₹28,000 - ₹30,000
POCO X8 Power 5Gಸ್ನ್ಯಾಪ್‌ಡ್ರಾಗನ್ 6 Gen 510000mAh, 100W ಚಾರ್ಜಿಂಗ್6.83" 1.5K AMOLED 120Hz50MP OISಸೆಪ್ಟೆಂಬರ್ 4₹35,000
Vivo T5 5Gಡೈಮೆನ್ಸಿಟಿ 7500 Turbo7050mAh1.5K 3D ಕರ್ವ್ಡ್ AMOLED 144HzAI ಫೋಕಸ್ಸೆಪ್ಟೆಂಬರ್ 2₹40,000 - ₹50,000
Redmi 17 5Gಸ್ನ್ಯಾಪ್‌ಡ್ರಾಗನ್ 4 Gen 57900mAh, 45W ಚಾರ್ಜಿಂಗ್120Hz ಡಿಸ್ಪ್ಲೇ50MPಸೆಪ್ಟೆಂಬರ್ 3₹18,000 - ₹22,000
Infinix HOT 70 Pro 5Gಡೈಮೆನ್ಸಿಟಿ 7100 5G6000mAh, 45W ಚಾರ್ಜಿಂಗ್6.76" FHD+ 144Hz50MP Sony IMX882ಸೆಪ್ಟೆಂಬರ್ 4₹20,000 - ₹25,000

ಓದಿ: ಸಂಚಾರ್ ಸಾಥಿ ಮೂಲಕ ಜುಲೈನಲ್ಲಿ ಕಳ್ಳತನವಾದ 77 ಸಾವಿರ ಮೊಬೈಲ್ ವಶ: ಕೇಂದ್ರ ಸಚಿವರ ಶ್ಲಾಘನೆ, ಮಾಲ್​ವೇರ್​ ಎಚ್ಚರಿಕೆ!