ಪ್ರೀಮಿಯಂ ರೆಡ್ ಲುಕ್‌ನಲ್ಲಿ ರೆಟ್ರೊ ಮಾಡೆಲ್! ಹೊಚ್ಚ ಹೊಸ Yezdi ಬೈಕ್‌ನ ಬೆಲೆ ಎಷ್ಟು?
Yezdi Roadster Red Wolf Edition: "ಯೆಜ್ಡಿ ರೋಡ್‌ಸ್ಟರ್ ರೆಡ್ ವುಲ್ಫ್ ಎಡಿಷನ್" ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶಕ್ತಿಶಾಲಿ 334 ಸಿಸಿ ಎಂಜಿನ್ ಮತ್ತು ಪ್ರೀಮಿಯಂ ರೆಡ್ ಲುಕ್‌ನೊಂದಿಗೆ ಬಿಡುಗಡೆಯಾಗಿದೆ.

Published : March 4, 2026 at 12:49 PM IST
Yezdi Roadster Red Wolf Edition: ಭಾರತೀಯ ಮಾರುಕಟ್ಟೆಗೆ ಹೊಸ ರೆಟ್ರೋ ಶೈಲಿಯ ಬೈಕ್ ಪ್ರವೇಶಿಸಿದೆ. ಕ್ಲಾಸಿಕ್ ಲೆಜೆಂಡ್ಸ್ ಭಾರತದಲ್ಲಿ "ಯೆಜ್ಡಿ ರೋಡ್‌ಸ್ಟರ್ ರೆಡ್ ವುಲ್ಫ್ ಎಡಿಷನ್" ಎಂಬ ಹೊಸ ಬೈಕ್ ಬಿಡುಗಡೆ ಮಾಡಿದೆ. ಈ ಬೈಕ್ ಯೆಜ್ಡಿ ರೋಡ್‌ಸ್ಟರ್‌ನ ವಿಶೇಷ ಆವೃತ್ತಿಯಾಗಿದೆ.
ಇದು ಗಾಢ ರೆಡ್ ಕಲರ್ ಸ್ಕೀಮ್ ಮತ್ತು ಕ್ರೋಮ್ ಫಿನಿಶಿಂಗ್‌ನೊಂದಿಗೆ ಆಕರ್ಷಕವಾಗಿ ಕಾಣುತ್ತದೆ. ಕಂಪನಿ ಇದಕ್ಕೆ ಹೊಸ ಡೆಕಲ್ಸ್ ಸಹ ಸೇರಿಸಿದೆ. ಈ ಮಾದರಿ ಈಗ ಕಂಪನಿಯ ಅಸ್ತಿತ್ವದಲ್ಲಿರುವ ಮಾದರಿ ಶ್ರೇಣಿಯಾದ "ಜಾವಾ 42", "ಜಾವಾ ಪೆರಾಕ್", "ಯೆಜ್ಡಿ ರೋಡ್‌ಸ್ಟರ್", "ಯೆಜ್ಡಿ ಅಡ್ವೆಂಚರ್", "ಬಿಎಸ್‌ಎ ಗೋಲ್ಡ್ ಸ್ಟಾರ್ 650" ಗೆ ಸೇರುತ್ತದೆ.
ಬೆಲೆ, ಮಾರಾಟದ ವಿವರ: ರೆಡ್ ವುಲ್ಫ್ ಎಡಿಷನ್ ಬೆಲೆ ರೂ. 2.10 ಲಕ್ಷ (ಎಕ್ಸ್-ಶೋರೂಂ, ದೆಹಲಿ). ನೀವು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಅಥವಾ ನಿಮ್ಮ ಹತ್ತಿರದ ಜಾವಾ-ಯೆಜ್ಡಿ ಡೀಲರ್‌ಶಿಪ್‌ಗೆ ಭೇಟಿ ನೀಡುವ ಮೂಲಕ ಇದನ್ನು ಬುಕ್ ಮಾಡಬಹುದು.
ವಿನ್ಯಾಸ, ವೈಶಿಷ್ಟ್ಯಗಳು: ಡಿಸೈನ್ ವಿಷಯದಲ್ಲಿ ಈ ಆವೃತ್ತಿಯು ಇಂಧನ ಟ್ಯಾಂಕ್, ಮುಂಭಾಗ ಮತ್ತು ಹಿಂಭಾಗದ ಫೆಂಡರ್ಸ್, ಟೂಲ್‌ಬಾಕ್ಸ್‌ನಲ್ಲಿ ರೆಡ್ ಆಕ್ಸೆಂಟ್ಸ್ ಹೊಂದಿದೆ.
ಎಂಜಿನ್ ಕವರ್ ಮತ್ತು ಎಗ್ಜಾಸ್ಟ್‌ಪೈ ಕ್ರೋಮ್ ಫಿನಿಶಿಂಗ್ಸ್ ಬೈಕ್‌ಗೆ ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ. ಬ್ರೌನ್ ಸೀಟ್ಸ್ ಇದಕ್ಕೆ ಕ್ಲಾಸಿಕ್ ಅನುಭವ ನೀಡುತ್ತದೆ. ಆದರೆ ಬ್ಲ್ಯಾಕ್ ಅಲಾಯ್ ವೀಲ್ಸ್ ಮತ್ತು ಸ್ವಿಂಗರ್ಮ್ ಸ್ಪೋರ್ಟಿ ಕಾಂಟ್ರಾಸ್ಟ್ ಸೇರಿಸುತ್ತದೆ. ಇದು ದೂರದ ಸವಾರಿಗಾಗಿ ವಿಂಡ್ ಡಿಫ್ಲೆಕ್ಟರ್ ಅನ್ನು ಸಹ ಹೊಂದಿದ್ದು, ಪ್ರವಾಸವನ್ನು ಹೆಚ್ಚು ಆರಾಮದಾಯಕವಾಗಿಸುತ್ತದೆ.
ಬೈಕ್ ತನ್ನ ಲುಕ್ ಅನ್ನು ಬದಲಾಯಿಸಿದ್ದರೂ ಯಾಂತ್ರಿಕವಾಗಿ ಇದು ಸ್ಟ್ಯಾಂಡರ್ಡ್ ರೋಡ್‌ಸ್ಟರ್‌ನಂತೆಯೇ ಉಳಿದಿದೆ. ಈ ಬೈಕ್ 334 ಸಿಸಿ ಆಲ್ಫಾ 2 ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 28.70 ಬಿಎಚ್‌ಪಿ ಮತ್ತು 29.63 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಸುರಕ್ಷತಾ ವೈಶಿಷ್ಟ್ಯಗಳ ವಿಷಯಕ್ಕೆ ಬಂದಾಗ, ಇದು ಮುಂಭಾಗದಲ್ಲಿ 20 ಎಂಎಂ ಡಿಸ್ಕ್ ಬ್ರೇಕ್‌ಗಳು, ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್‌ಗಳು ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಹೊಂದಿದೆ.
ಇದು ಬ್ಲೂಟೂತ್ ಸಂಪರ್ಕವನ್ನು ಬೆಂಬಲಿಸುವ ಸುತ್ತಿನ ಡಿಜಿಟಲ್ ಸ್ಪೀಡೋಮೀಟರ್ ಅನ್ನು ಸಹ ಹೊಂದಿದೆ. ಇದರ ಮೂಲಕ ಸವಾರರು ನ್ಯಾವಿಗೇಷನ್, ಕಾಲ್ಸ್ ಮತ್ತು ಮೆಸೇಜ್ ಅಲರ್ಟ್ನಂತಹ ಮಾಹಿತಿಯನ್ನು ಪ್ರವೇಶಿಸಬಹುದು. ಇದರ ಎಲ್‌ಇಡಿ ಹೆಡ್‌ಲೈಟ್, ಸಸ್ಪೆನ್ಷನ್ ಮತ್ತು ಇತರ ವಿನ್ಯಾಸ ಅಂಶಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಒಟ್ಟಾರೆಯಾಗಿ ರೆಟ್ರೊ ಶೈಲಿಯಲ್ಲಿ ಸ್ವಲ್ಪ ವಿಭಿನ್ನವಾದ ಒರಟಾದ ನೋಟವನ್ನು ಹೊಂದಿರುವ ಮೋಟಾರ್‌ಸೈಕಲ್ ಅನ್ನು ಹುಡುಕುತ್ತಿರುವವರಿಗೆ ಈ ಆವೃತ್ತಿಯು ವಿಶೇಷವಾಗಿದೆ.
ಇದನ್ನೂ ಓದಿ: RX 100 ನೆನಪಿಸುವ ವೈಬ್ ಮತ್ತೆ ಬಂದಿದೆ! ಯಮಹಾ ಹೊಸ ಬೈಕ್ ಮಾರುಕಟ್ಟೆಗೆ

