ETV Bharat / technology

ಲಾಂಚ್​ ಆಯ್ತು ಬೆಂಗಳೂರು ಮೂಲದ ಸಿಂಪಲ್​ ಎನರ್ಜಿ ವೇವ್​: ಇದು ಕೈಗೆಟುಕುವ ಬೆಲೆಗೆ 243km ಮೈಲೇಜ್​ ನೀಡುವ ಫ್ಯಾಮಿಲಿ ಸ್ಕೂಟರ್!

Simple Energy Wave Launched: ಬೆಂಗಳೂರು ಮೂಲದ ಸಿಂಪಲ್​ ಎನರ್ಜಿ ವೇವ್​ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಕೈಗೆಟುಕುವ ಬೆಲೆಗೆ 243km ಮೈಲೇಜ್​ ನೀಡುತ್ತದೆ. ಈ ಫ್ಯಾಮಿಲಿ ಸ್ಕೂಟರ್​ನ ಬೆಲೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ..

SIMPLE WAVE PRICE  SIMPLE WAVE RANGE  SIMPLE WAVE 4 VARIANTS BATTERY  SIMPLE ENERGY BANGALORE EV
ಲಾಂಚ್​ ಆಯ್ತು ಬೆಂಗಳೂರು ಮೂಲದ ಸಿಂಪಲ್​ ಎನರ್ಜಿ ವೇವ್ (Photo Credit: Simple Energy)
author img

By ETV Bharat Tech Team

Published : September 3, 2026 at 1:26 PM IST

3 Min Read
Choose ETV Bharat

Simple Energy Wave Launched: ಬೆಂಗಳೂರು ಮೂಲದ ಟೂ - ವೀಲರ್ EV ತಯಾರಕ ಸಿಂಪಲ್​ ಎನರ್ಜಿ (Simple Energy) ತನ್ನ ಹೊಸ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ವೇವ್​ (Wave) ಅನ್ನು Rs 1,09,999 (ಎಕ್ಸ್-ಶೋರೂಂ, ಬೆಂಗಳೂರು) ಆರಂಭಿಕ ಬೆಲೆಯಲ್ಲಿ ಲಾಂಚ್ ಮಾಡಿದೆ. ಸಿಂಪಲ್​ ವೇವ್​ (Simple Wave) ನಾಲ್ಕು ವೇರಿಯಂಟ್‌ಗಳಲ್ಲಿ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ನೀಡಲಾಗಿದೆ. IDC-ಪ್ರಮಾಣೀಕೃತ ರೇಂಜ್ ಟಾಪ್-ಸ್ಪೆಕ್ ಮಾದರಿಯಲ್ಲಿ 243km ವರೆಗೆ ಹೋಗುತ್ತದೆ. ಇದರ ವಿತರಣೆ ಸೆಪ್ಟೆಂಬರ್ 25, 2026 ರಿಂದ ಶುರುವಾಗುತ್ತದೆ.

ವಿತರಣೆ ಸೆಪ್ಟೆಂಬರ್ 25: Simple Wave ವಿತರಣೆಗಳು 25 ಸೆಪ್ಟೆಂಬರ್ 2026 ರಿಂದ ಪ್ರಾರಂಭವಾಗುತ್ತವೆ. ಸಿಂಪಲ್​ ಹೆಚ್ಚಿನ ವೇರಿಯಂಟ್‌ಗಳ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ವಿತರಣಾ ದಿನಾಂಕವು ಎಲ್ಲ ಶ್ರೇಣಿಗೆ ಅನ್ವಯಿಸುತ್ತದೆ ಎಂದು ಹೇಳಿದೆ.

ನಾಲ್ಕು ವೇರಿಯಂಟ್, ನಾಲ್ಕು ಬ್ಯಾಟರಿ ಆಯ್ಕೆ: ಬೇಸ್ ಮಾಡೆಲ್​ ಆದ Wave S ನಲ್ಲಿ ಎರಡು ಬ್ಯಾಟರಿ ಆಯ್ಕೆ ಇದೆ. 2.2kWh ಬ್ಯಾಟರಿ 110 ಕಿಲೋಮೀಟರ್ ರೇಂಜ್​ ಮತ್ತು 2.7kWh ಬ್ಯಾಟರಿ 132 ಕಿಲೋಮೀಟರ್ ರೇಂಜ್​ ಹೊಂದಿದೆ. ಮಿಡ್ - ಸ್ಪೆಕ್ ಆದ Wave ನಲ್ಲಿ 3.7kWh ಬ್ಯಾಟರಿ ಇದೆ. ಇದು 171 ಕಿಲೋಮೀಟರ್​ವರೆಗೆ ಮೈಲೇಜ್​ ನೀಡುತ್ತದೆ. ಟಾಪ್-ಸ್ಪೆಕ್ ಆದ Wave+ ನಲ್ಲಿ 5kWh ಬ್ಯಾಟರಿ ಇದ್ದು, 243 ಕಿಲೋಮೀಟರ್​ವರೆಗೆ ರೇಂಜ್​ ಹೊಂದಿದೆ.

ಸಾಮಗ್ರಿಗಳನ್ನ ಇಡಲು 70 ಲೀಟರ್ ಜಾಗ: ಈ ಸ್ಕೂಟರ್‌ನಲ್ಲಿ ಒಟ್ಟು 70 ಲೀಟರ್ ಜಾಗ ಇದೆ. ಸೀಟಿನ ಕೆಳಗೆ 63 ಲೀಟರ್ ದೊಡ್ಡ ಜಾಗ ಇದ್ದು, ಎರಡು ಹೆಲ್ಮೆಟ್ ಇಡಬಹುದು. ಮುಂದೆ 3 ಲೀಟರ್ ಚಿಕ್ಕ ಜಾಗ ಇದೆ. ಸೀಟಿನ ಪಕ್ಕದಲ್ಲಿ Pill Storage ಎಂದು 4 ಲೀಟರ್ ಪಾಕೆಟ್ ಇದೆ. ಬಲಭಾಗದ ಪಾಕೆಟ್ ಬೇಕಿದ್ದರೆ ಹೆಚ್ಚುವರಿ ಹಣ ಕೊಟ್ಟು ತೆಗೆದುಕೊಳ್ಳಬಹುದಾಗಿದೆ.

ಹೊಸ ಮೋಟಾರ್ ಮತ್ತು ಹೊಸ ಡಿಸೈನ್​: ಹಳೇ ಒನ್​ ಸ್ಕೂಟರ್‌ಗಿಂತ ಈ Wave ನಲ್ಲಿ ಮೋಟಾರ್ ಚಿಕ್ಕದಾಗಿದೆ. ಮೂರನೇ ತಲೆಮಾರಿನ 6.4kW ಮೋಟಾರ್ ಹಾಕಿದ್ದಾರೆ ಗಾತ್ರ ಶೇ 15ರಷ್ಟು ಕಡಿಮೆಯಾಗುತ್ತದೆ. One ನಲ್ಲಿ ಚೂಪಾದ ಡಿಸೈನ್ ಇತ್ತು, Wave ನಲ್ಲಿ Dolphin ಮೀನಿನಂತೆ ನಯವಾದ ಡಿಸೈನ್ ಮಾಡಿದ್ದಾರೆ.

Wave S 75 ಕಿಲೋಮೀಟರ್ ವೇಗದಲ್ಲಿ ಹೋಗುತ್ತದೆ. Wave ಮತ್ತು Wave+ 90 ಕಿಲೋಮೀಟರ್ ವೇಗದಲ್ಲಿ ಹೋಗುತ್ತದೆ. Wave S ನಲ್ಲಿ EcoX, Eco, Ride ಅಂತ ಮೂರು ಮೋಡ್ ಇದೆ. Wave ಮತ್ತು Wave+ ನಲ್ಲಿ Sports ಮೋಡ್ ಕೂಡ ಇದೆ. ಚಿಕ್ಕ ಬ್ಯಾಟರಿಗೆ 2 ಬಣ್ಣ, ದೊಡ್ಡ ಬ್ಯಾಟರಿಗೆ 6 ಬಣ್ಣ ಸಿಗುತ್ತದೆ.

ಕೂರಲು ಆರಾಮ, ಓಡಿಸಲು ಸಿಂಪಲ್​: ಸೀಟ್ ಉದ್ದ 920mm ಇದೆ. ಭಾರತದಲ್ಲಿ ಸಿಗುವ ಯಾವುದೇ ಸ್ಕೂಟರ್‌ನಲ್ಲಿ ಇಷ್ಟು ಉದ್ದದ ಸೀಟ್ ಇಲ್ಲ. ಸೀಟಿನ ಎತ್ತರ 775mm, 5mm ಕಡಿಮೆ ಮಾಡಿದ್ದಾರೆ. ಗ್ರೌಂಡ್ ಕ್ಲಿಯರೆನ್ಸ್ 175mm, 3mm ಜಾಸ್ತಿ ಮಾಡಿದ್ದಾರೆ. ಹಿಂದೆ ಈಗ ಎರಡು ಶಾಕ್ ಅಬ್ಸಾರ್ಬರ್ ಹಾಕಿದ್ದಾರೆ. ಆದ್ರೆ ಹಳೇದರಲ್ಲಿ ಒಂದು ಇತ್ತು. ಇದರಿಂದ ಗುಂಡಿಯಲ್ಲಿ ಹೋದರೂ ಸ್ಕೂಟರ್​ ಕಂಟ್ರೋಲ್​ ಮತ್ತು ಆರಾಮ ಫೀಲ್​ ಸಿಗುತ್ತದೆ.

ಬ್ರೇಕ್ ಮತ್ತು ಫೀಚರ್ಸ್​: ಹಳೇ ಒನ್​ನಲ್ಲಿ ಹಿಂದೆ ಡಿಸ್ಕ್ ಬ್ರೇಕ್ ಇತ್ತು, ಈಗ ಡ್ರಮ್ ಬ್ರೇಕ್ ಮಾಡಿದ್ದಾರೆ. ಆದರೂ ಎಲ್ಲ ವೇರಿಯಂಟ್‌ನಲ್ಲಿ CBS ಇದೆ. 7 ಇಂಚಿನ TFT ಡಿಸ್ಪ್ಲೇ Wave+ ನಲ್ಲಿ ಬರುತ್ತದೆ. ಸಣ್ಣ ವೇರಿಯಂಟ್‌ನಲ್ಲಿ TFT ಅಥವಾ LCD ಎರಡರಲ್ಲಿ ಒಂದು ಆಯ್ಕೆ ಮಾಡಬಹುದು. GripSense Traction Control ದೊಡ್ಡ ವೇರಿಯಂಟ್‌ನಲ್ಲಿ ಮಾತ್ರ ಇದೆ.

ಯಾರಿಗೆ ಪೈಪೋಟಿ?: ಈ ಸ್ಕೂಟರ್ Ather Konarc, Bajaj Chetak, Hero Vida, TVS iQube ಗೆ ಪೈಪೋಟಿ ನೀಡುತ್ತದೆ. ಇದರ ದೊಡ್ಡ ಪ್ಲಸ್ ಪಾಯಿಂಟ್ ರೇಂಜ್ ಜಾಸ್ತಿ ಮತ್ತು ಸ್ಟೋರೇಜ್ ಜಾಸ್ತಿ ಇರುವುದು.

Simple Wave ವೇರಿಯಂಟ್ ವೈಸ್ ವಿವರ

ವೇರಿಯಂಟ್ಬ್ಯಾಟರಿIDC ರೇಂಜ್ಟಾಪ್ ಸ್ಪೀಡ್ಫೀಚರ್ಸ್
Wave S2.2kWh110km75kph3 Ride Mode EcoX, Eco, Ride, 2 ಬಣ್ಣ, InfinityBlack LCD / 7-inch TFT ಆಯ್ಕೆ, 70L ಸ್ಟೋರೇಜ್
Wave S2.7kWh132km75kph3 Ride Mode EcoX, Eco, Ride, 4 ಬಣ್ಣ, LCD / TFT ಆಯ್ಕೆ, Twin-shock, 775mm ಸೀಟ್ ಎತ್ತರ
Wave3.7kWh171km90kph4 Ride Mode EcoX, Eco, Ride, Sports, 6 ಬಣ್ಣ, GripSense Traction Control, 920mm ಉದ್ದದ ಸೀಟ್, 175mm GC
Wave+5kWh243km90kph4 Ride Mode, 6 ಬಣ್ಣ, 7-inch TFT Standard, 243km ವಿಭಾಗದಲ್ಲಿ ಅತಿ ಹೆಚ್ಚು ರೇಂಜ್, Pill Storage 4L + Front Cubby 3L + 63L Underseat

ಓದಿ: ರಾಯಲ್ ಎನ್‌ಫೀಲ್ಡ್ ಮೋಟೋವರ್ಸ್ 2026 ದಿನಾಂಕ ಪ್ರಕಟ! ಗೋವಾದಲ್ಲಿ ಸಂಜಿತ್ ಹೆಗ್ಡೆ ಜೊತೆ ಮನರಂಜಿಸಲಿದ್ದಾರೆ ಅನೇಕ ಕಲಾವಿದರು!!