ಭಾರತಕ್ಕೆ ಬರ್ತಿದೆ ರಿಯಲ್‌ಮಿ ಜಿಟಿ 8 ಪ್ರೊ: ಕೇವಲ 15 ನಿಮಿಷಗಳ ಚಾರ್ಜ್ಗೆ ದಿನವಿಡೀ ಬಳಕೆ!
Realme GT8 Pro: ರಿಯಲ್‌ಮಿ ತನ್ನ ಹೊಸ ಫ್ಲ್ಯಾಗ್‌ಶಿಪ್ ಫೋನ್ ರಿಯಲ್‌ಮಿ ಜಿಟಿ8 ಪ್ರೊ ಅನ್ನು ಇದೆ ತಿಂಗಳು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದರ ಬೆಲೆ ಮತ್ತು ಫೀಚರ್ ಸೇರಿದಂತೆ ಇತರ ಮಾಹಿತಿಗಳು ಇಲ್ಲಿವೆ.

Published : November 8, 2025 at 10:17 AM IST
Realme Gt8 Pro India Launch Date: ಚೀನಾದ ಸ್ಮಾರ್ಟ್‌ಫೋನ್ ತಯಾರಕ ರಿಯಲ್‌ಮಿ ತನ್ನ ಮುಂಬರುವ ಪ್ರಮುಖ ಸ್ಮಾರ್ಟ್‌ಫೋನ್ "ರಿಯಲ್‌ಮಿ ಜಿಟಿ 8 ಪ್ರೊ" ಬಿಡುಗಡೆ ದಿನಾಂಕವನ್ನು ಭಾರತದಲ್ಲಿ ಪ್ರಕಟಿಸಿದೆ. ಕಂಪನಿಯ ಅಧಿಕೃತ ಮೈಕ್ರೋಸೈಟ್ ಪ್ರಕಾರ, ಈ ಫೋನ್ ನವೆಂಬರ್ 20 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಅಂದರೆ ಅಕ್ಟೋಬರ್ 21 ರಂದು ಚೀನಾದಲ್ಲಿ ಅನಾವರಣಗೊಂಡ ಈ ಫೋನ್ ಸುಮಾರು ಒಂದು ತಿಂಗಳ ನಂತರ ಭಾರತಕ್ಕೆ ಪ್ರವೇಶಿಸುತ್ತಿದೆ. ಇದು "ರಿಯಲ್‌ಮಿ ಜಿಟಿ 8" ಸೀರಿಸ್ನ ಭಾಗವಾಗಲಿದೆ.
ಕಂಪನಿಯು ಈ ಮುಂಬರುವ ಫೋನ್‌ಗಾಗಿ ಮೀಸಲಾದ ಪೇಜ್ ಅನ್ನು ಸಹ ಪ್ರಾರಂಭಿಸಿದೆ. ಇದು ಡಿಸ್ಪ್ಲೇ, ಪ್ರೊಸೆಸರ್, ಬ್ಯಾಟರಿ ಮತ್ತು ಚಾರ್ಜಿಂಗ್ ಸೇರಿದಂತೆ ಫೋನ್‌ನ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಇದು 7,000mAh ಬ್ಯಾಟರಿ, 120W ಚಾರ್ಜಿಂಗ್, ಫ್ಲ್ಯಾಗ್‌ಶಿಪ್ 3nm ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 SoC ಚಿಪ್‌ಸೆಟ್, 2K ರೆಸಲ್ಯೂಶನ್ ಡಿಸ್ಪ್ಲೇ ಸೇರಿದಂತೆ ಮುಂತಾದ ಹಲವು ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಈ ಶಕ್ತಿಶಾಲಿ ವೈಶಿಷ್ಟ್ಯಗಳು ಭಾರತೀಯ ಬಳಕೆದಾರರಲ್ಲಿ ಅದರ ಬಗ್ಗೆ ಕುತೂಹಲವನ್ನು ಹೆಚ್ಚಿಸಿವೆ. ಹೀಗಾಗಿ ಈ ಫೋನ್‌ನಲ್ಲಿ ಇಲ್ಲಿಯವರೆಗೆ ಲಭ್ಯವಿರುವ ಮಾಹಿತಿಯನ್ನು ತಿಳಿಯೋಣ..
Realme GT 8 Pro ವೈಶಿಷ್ಟ್ಯ ಮತ್ತು ವಿಶೇಷತೆ:
ಪ್ರೊಸೆಸರ್: ಈ ಫೋನ್ ಕ್ವಾಲ್ಕಾಮ್‌ನ ಇತ್ತೀಚಿನ ಪ್ರಮುಖ ಚಿಪ್‌ಸೆಟ್ ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 (ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್) (3nm ಆಕ್ಟಾ-ಕೋರ್) ನಿಂದ ಚಾಲಿತವಾಗಿದೆ. ಇದರೊಂದಿಗೆ ಹೈಪರ್ ವಿಷನ್+ AI ಚಿಪ್ ಅನ್ನು ಸಹ ಒದಗಿಸಲಾಗುತ್ತದೆ. ಇದು ಗೇಮಿಂಗ್, ಫೋಟೋಗ್ರಫಿ ಮತ್ತು ದೈನಂದಿನ ಕಾರ್ಯಗಳಲ್ಲಿ ಸಾಟಿಯಿಲ್ಲದ ವೇಗವನ್ನು ಒದಗಿಸುತ್ತದೆ. ಈ ಫೋನ್ LPDDR5X RAM, UFS 4.1 ಸ್ಟೋರೇಜ್ನೊಂದಿಗೆ ಬರುತ್ತದೆ. ಇದು ತಾಪಮಾನ ನಿರ್ವಹಣೆಗಾಗಿ 7,000 ಸ್ಕ್ವೇರ್ ಮಿ.ಮೀ. ವೇಪರ್ ಚೇಂಬರ್ (VC) ಕೂಲಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಇದು ಹೇವಿ ಗೇಮಿಂಗ್ ಅಥವಾ ಬಹುಕಾರ್ಯ ಸಮಯದಲ್ಲಿ ಫೋನ್ ಹೆಚ್ಚು ಬಿಸಿಯಾಗುವುದನ್ನು ತಡೆಯುತ್ತದೆ.
Power dressed in deep hues.
— realme (@realmeIndia) November 6, 2025
The #realmeGT8Pro in Urban Blue features a refined paper-leather finish that feels soft, sleek, and built to impress, complete with the world’s first Modular Camera Island.
Know More:https://t.co/8V5VLzD9qfhttps://t.co/uvEpSlAcY5#realmexRICOHGR… pic.twitter.com/n8pi5S0PB5
ಬ್ಯಾಟರಿ: ಈ ಫೋನ್ 7,000mAh ಟೈಟಾನ್ ಬ್ಯಾಟರಿಯೊಂದಿಗೆ ಬರುತ್ತದೆ. 120V ಅಲ್ಟ್ರಾ ಚಾರ್ಜ್ ಸಪೋರ್ಟ್ ಜೊತೆ ನೀವು ಕೇವಲ 15 ನಿಮಿಷಗಳಲ್ಲಿ "all-day power" ಪಡೆಯಬಹುದು. ಅಂದ್ರೆ ದಿನವಿಡೀ ಬಳಸಬಹುದೆಂದು ಕಂಪನಿ ಹೇಳಿಕೊಂಡಿದೆ. ಬ್ಯಾಟರಿಯು 7.66 ಗಂಟೆಗಳ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI), ಯೂಟ್ಯೂಬ್‌ನಲ್ಲಿ 21.3 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ಮತ್ತು 523.2 ಗಂಟೆಗಳ ಸ್ಟ್ಯಾಂಡ್‌ಬೈ ಬ್ಯಾಕಪ್ ಅನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ. ಚಾರ್ಜಿಂಗ್ ವೇಗ ಮತ್ತು ಬ್ಯಾಟರಿ ಲೈಫ್ ವಿಷಯದಲ್ಲಿ ಈ ಫೋನ್ ಮಾರುಕಟ್ಟೆಯಲ್ಲಿನ ಇತರ ಫ್ಲ್ಯಾಗ್‌ಶಿಪ್‌ಗಳೊಂದಿಗೆ ಸ್ಪರ್ಧಿಸುತ್ತದೆ.
ಡಿಸ್‌ಪ್ಲೇ: ಈ "ರಿಯಲ್‌ಮಿ ಜಿಟಿ 8 ಪ್ರೊ" ಸ್ಮಾರ್ಟ್‌ಫೋನ್ 7,000 ನಿಟ್ಸ್ ಪೀಕ್ ಬ್ರೈಟ್‌ನೆಸ್, 144Hz ರಿಫ್ರೆಶ್ ರೇಟ್ನೊಂದಿಗೆ 2K ರೆಸಲ್ಯೂಶನ್ ನೀಡುವ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು ಹೊರಾಂಗಣ ಬಳಕೆಯಲ್ಲಿ ಉತ್ತಮ ಗೋಚರತೆಯನ್ನು ಸಹ ಒದಗಿಸುತ್ತದೆ.
realme GT 8 Pro launching on November 20th in India. pic.twitter.com/RqcHNiO88f
— Mukul Sharma (@stufflistings) November 6, 2025
ಕ್ಯಾಮರಾ ಸೆಟಪ್: ಫೋಟೋಗ್ರಫಿ ಉತ್ಸಾಹಿಗಳಿಗೆ ಈ ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ನೀಡುತ್ತದೆ. ಇದು ಬದಲಾಯಿಸಬಹುದಾದ ಕ್ಯಾಮರಾ ಮಾಡ್ಯೂಲ್‌ಗಳು ಮತ್ತು ರಿಕೋಹ್ ಜಿಆರ್ ಇಮೇಜಿಂಗ್ ತಂತ್ರಜ್ಞಾನವನ್ನು ಹೊಂದಿರುತ್ತದೆ. ಸೆಲ್ಫಿಗಳು ಮತ್ತು ವಿಡಿಯೋ ಕಾಲ್ಸ್ಗಾಗಿ ಫೋನ್‌ನ ಮುಂಭಾಗದಲ್ಲಿ ಹೋಲ್-ಪಂಚ್ ಕಟೌಟ್‌ನಲ್ಲಿ ಮುಂಭಾಗದ ಕ್ಯಾಮೆರಾ ಇರುತ್ತದೆ.
ಆಪರೇಟಿಂಗ್ ಸಿಸ್ಟಮ್: ಸಾಫ್ಟ್‌ವೇರ್ ವಿಷಯದಲ್ಲಿ, ಈ ಫೋನ್ ಆಂಡ್ರಾಯ್ಡ್ 16 ಆಧಾರಿತ ರಿಯಲ್‌ಮಿ ಯುಐ 7.0 ನೊಂದಿಗೆ ಬರುತ್ತದೆ. ಇದು ಇತ್ತೀಚಿನ ವೈಶಿಷ್ಟ್ಯ ಮತ್ತು ಸುಗಮ ಅನುಭವವನ್ನು ನೀಡುತ್ತದೆ.
ರೆಸಿಸ್ಟೆನ್ಸಿ: ಈ ಫೋನ್‌ನ ಭಾರತೀಯ ರೂಪಾಂತರವು ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸಿಗಾಗಿ IP69 ರೇಟಿಂಗ್‌ನೊಂದಿಗೆ ಬರುತ್ತದೆ.
ಬಿಲ್ಡ್ ಕ್ವಾಲಿಟಿ: ಈ ಫೋನ್‌ನ ಮೆಟಲ್ ಫ್ರೇಮ್ ಮತ್ತು ಪ್ರೀಮಿಯಂ ಬಿಲ್ಡ್ ಕ್ವಾಲಿಟಿಯಲ್ಲಿ ಕೈಯಲ್ಲಿ ಪ್ರೀಮಿಯಂ ಅನುಭವವನ್ನು ನೀಡುತ್ತದೆ.
ತೂಕ: ಇದರ ತೂಕ ಕೇವಲ 214 ಗ್ರಾಂ.
ಭಾರತದಲ್ಲಿ ಬೆಲೆ: ಕಂಪನಿಯು "ರಿಯಲ್ಮಿ ಜಿಟಿ 8 ಪ್ರೊ"ನ ಬೆಲೆ ಮತ್ತು ರೂಪಾಂತರಗಳನ್ನು ಭಾರತದಲ್ಲಿ ಇನ್ನೂ ಬಹಿರಂಗಪಡಿಸಿಲ್ಲ. ಈ ವಿವರಗಳನ್ನು ಅದರ ಬಿಡುಗಡೆ ಸಮಾರಂಭದಲ್ಲಿ ಘೋಷಿಸಲಾಗುವುದು. ಆದರೆ ವಿಶೇಷತೆಯನ್ನು ನೋಡಿದರೆ ಈ ಫೋನ್ ಗೇಮರುಗಳಿಗಾಗಿ, ಪವರ್ ಬಳಕೆದಾರರಿಗೆ ಮತ್ತು ಫೋಟೋಗ್ರಫಿ ಉತ್ಸಾಹಿಗಳಿಗೆ ಸೂಕ್ತವಾಗಿರುತ್ತದೆ. ರಿಯಲ್ಮಿ ತನ್ನ ಮೈಕ್ರೋಸೈಟ್‌ನಲ್ಲಿ ಶೀಘ್ರದಲ್ಲೇ ತನ್ನ ಪ್ರೀ-ಬುಕಿಂಗ್ ಮತ್ತು ಆಫರ್ಗಳ ವಿವರಗಳನ್ನು ಒದಗಿಸುವುದಾಗಿ ಹೇಳಿದೆ.
ಓದಿ: ದೇಶಿಯ ಮಾರ್ಕೆಟ್ನಲ್ಲಿ ಡುಕಾಟಿ ತುಂಬಾ ದುಬಾರಿ ಬೈಕ್: ಇದರ ಫೀಚರ್ಸ್ ಹೀಗಿವೆ

