ETV Bharat / technology

ನಾಸಾದ ಚಂದ್ರಯಾನ ಮಿಷನ್ ಸ್ಪೀಡ್​​ಗೆ ಬಿತ್ತು ಬ್ರೇಕ್: ಯಶಸ್ವಿಯಾಗಿ ಹಿಂದಿರುಗಿದ ಆರ್ಟೆಮಿಸ್ II ರಾಕೆಟ್​!

NASA Artemis II Moon Mission Update: ಹೀಲಿಯಂ ಲೀಕ್​ ಸಮಸ್ಯೆಯ ನಂತರ ನಾಸಾ ಆರ್ಟೆಮಿಸ್ II ಮಿಷನ್‌ನ SLS ರಾಕೆಟ್ ಅನ್ನು ವಾಹನ ಜೋಡಣೆ ಕಟ್ಟಡಕ್ಕೆ ಯಶಸ್ವಿಯಾಗಿ ಹಿಂದಿರುಗಿಸಲಾಯಿತು.

NASA ARTEMIS II MOON MISSION UPDATE  ROCKET RETURNS FOR REPAIRS  NASA ARTEMIS II DETAILS  NASA ARTEMIS II ASTRONAUTS
ನಾಸಾದ ಚಂದ್ರಯಾನ ಮಿಷನ್ ಸ್ಪೀಡ್​​ಗೆ ಬಿತ್ತು ಬ್ರೇಕ್ (Photo Credit: NASA)
author img

By ETV Bharat Tech Team

Published : February 26, 2026 at 12:36 PM IST

|

Updated : February 26, 2026 at 2:05 PM IST

3 Min Read
Choose ETV Bharat

NASA Artemis II Moon Mission Update: ಆರ್ಟೆಮಿಸ್ II ಕಾರ್ಯಾಚರಣೆಗೆ ಸಂಬಂಧಿಸಿದಂತೆ ನಾಸಾ ಮತ್ತೊಂದು ಪ್ರಮುಖ ಅಪ್​ಡೇಟ್​ ಅನ್ನು ಹಂಚಿಕೊಂಡಿದೆ. ಬಾಹ್ಯಾಕಾಶ ಉಡಾವಣಾ ವ್ಯವಸ್ಥೆಯ ರಾಕೆಟ್ ಮತ್ತು ಓರಿಯನ್ ಬಾಹ್ಯಾಕಾಶ ನೌಕೆಯನ್ನು ಉಡಾವಣಾ ಪ್ಯಾಡ್‌ನಿಂದ ವಾಹನ ಅಸೆಂಬ್ಲಿ ಕಟ್ಟಡಕ್ಕೆ (VAB) ಯಶಸ್ವಿಯಾಗಿ ಸ್ಥಳಾಂತರಿಸಿದೆ. ಫೆಬ್ರವರಿ 21ರ ರಾತ್ರಿ SLSನ ಮಧ್ಯಂತರ ಕ್ರಯೋಜೆನಿಕ್ ಪ್ರೊಪಲ್ಷನ್ ಹಂತದಲ್ಲಿ ಹೀಲಿಯಂ ಹರಿವಿನಲ್ಲಿ ಅಡಚಣೆ ಪತ್ತೆಯಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39Bನಲ್ಲಿ ರಾಕೆಟ್ ಸುರಕ್ಷಿತ ಸ್ಥಾನದಲ್ಲಿತ್ತು.

ಹಿಂದಿರುಗುವ ಕಾರ್ಯ ಯಶಸ್ವಿ: ಭಾರತೀಯ ಕಾಲಮಾನ ಪ್ರಕಾರ ಫೆಬ್ರವರಿ 25ರ ಸಂಜೆ 7:58 (ಬೆಳಗ್ಗೆ 9:28 EST) ಕ್ಕೆ ಪ್ರಾರಂಭವಾಯಿತು ಮತ್ತು ಪೂರ್ಣಗೊಳ್ಳಲು ಸುಮಾರು 12 ಗಂಟೆಗಳು ತೆಗೆದುಕೊಂಡಿತು ಎಂದು ನಾಸಾ ಹೇಳಿದೆ. ಬೃಹತ್ ರಾಕೆಟ್ ಮತ್ತು ಬಾಹ್ಯಾಕಾಶ ನೌಕೆಯನ್ನು ಲಾಂಚ್‌ಪ್ಯಾಡ್‌ನಿಂದ ಹ್ಯಾಂಗರ್‌ಗೆ ಸುಮಾರು 6.4 ಕಿಮೀ (4 ಮೈಲಿ) ಹಿಂದಕ್ಕೆ ತಿರುಗಿಸಲಾಯಿತು. ಇನ್ನು ನಾಸಾ ಫೆಬ್ರವರಿ 23, 2026 ರಂದು SLS ರಾಕೆಟ್ ಮತ್ತು ಓರಿಯನ್ ಬಾಹ್ಯಾಕಾಶ ನೌಕೆಯ ಹಿಂದಕ್ಕೆ ತಿರುಗಿಸುವುದಾಗಿ ಘೋಷಿಸಿತು.

ರಾಕೆಟ್​ ಹಿಂದಿರುಗಿಸಲು ಕಾರಣವೇನು?: ನಾಸಾ ಪ್ರಕಾರ, ಮೇಲಿನ ಹಂತದಲ್ಲಿರುವ ಹೀಲಿಯಂ ಅನ್ನು ಎಂಜಿನ್‌ಗಳಿಗೆ ಸರಿಯಾದ ವಾತಾವರಣವನ್ನು ಕಾಪಾಡಿಕೊಳ್ಳಲು ಮತ್ತು ಲಿಕ್ವಿಡ್​ ಹೈಡ್ರೋಜನ್ ಮತ್ತು ಲಿಕ್ವಿಡ್​ ಆಮ್ಲಜನಕ ಟ್ಯಾಂಕ್‌ಗಳ ಮೇಲೆ ಒತ್ತಡ ಹೇರಲು ಬಳಸಲಾಗುತ್ತದೆ. ಆರ್ಟೆಮಿಸ್ II ರ ವೆಟ್ ಡ್ರೆಸ್ ರಿಹರ್ಸಲ್‌ ಸಮಯದಲ್ಲಿ ಈ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಿತು. ಆದರೆ ಫೆಬ್ರವರಿ 19 ರಂದು ಪೂರ್ವಾಭ್ಯಾಸ ಮುಗಿದ ನಂತರ ಸಾಮಾನ್ಯ ಕಾರ್ಯಾಚರಣೆಯ ಸಮಯದಲ್ಲಿ ಹೀಲಿಯಂ ಹರಿವು ವಿಫಲವಾಯಿತು. ಎಂಜಿನಿಯರ್‌ಗಳು ಪ್ರಸ್ತುತ ಬ್ಯಾಕಪ್ ವ್ಯವಸ್ಥೆಗಳನ್ನು ಬಳಸಿಕೊಂಡು ಹಂತವನ್ನು ಸುರಕ್ಷಿತ ಸ್ಥಾನದಲ್ಲಿ ಇರಿಸುತ್ತಿದ್ದಾರೆ.

ತಂಡಗಳು ಸಂಭವನೀಯ ಕಾರಣಗಳನ್ನು ತನಿಖೆ ಮಾಡುತ್ತಿವೆ ಎಂದು ನಾಸಾ ಹೇಳುತ್ತದೆ. ಇದರಲ್ಲಿ ಗ್ರೌಂಡ್​ ಮತ್ತು ರಾಕೆಟ್ ನಡುವಿನ ಹೀಲಿಯಂ ಲೈನ್ ಇಂಟರ್​​ಫೇಸ್, ಮೇಲಿನ ಹಂತದಲ್ಲಿ ಕವಾಟ ಮತ್ತು ಗ್ರೌಂಡ್​ನಿಂದ ರಾಕೆಟ್ ನಡುವಿನ ಫಿಲ್ಟರ್ ಅನ್ನು ಪರಿಶೀಲಿಸುವುದು ಸೇರಿದೆ. ಆರ್ಟೆಮಿಸ್ 1 ಕಾರ್ಯಾಚರಣೆಯ ಸಮಯದಲ್ಲಿ ಎದುರಾದ ಹೀಲಿಯಂ ಒತ್ತಡೀಕರಣದ ಸವಾಲುಗಳಿಂದ ಬಂದ ಡೇಟಾವನ್ನು ನಾಸಾ ಪರಿಶೀಲಿಸುತ್ತಿದ್ದು, ಅದೇ ಸಮಸ್ಯೆ ಮರುಕಳಿಸುವುದನ್ನು ತಡೆಯುತ್ತಿದೆ.

ರಾಕೆಟ್ ಅನ್ನು VABಗೆ ಹಿಂತಿರುಗಿಸಿದರೆ, ಮಾರ್ಚ್ ಲಾಂಚ್​ ವಿಂಡೋದೊಳಗೆ ಹಾರಾಟ ಅಸಾಧ್ಯ ಎಂದು NASA ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಡೇಟಾ ವಿಶ್ಲೇಷಣೆ ಮತ್ತು ದುರಸ್ತಿಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಂಡರೆ ಏಪ್ರಿಲ್ ಲಾಂಚಿಂಗ್​ ವಿಂಡೋ ಅನುಕೂಲವಾಗುವುದು ಮತ್ತು ಆರಂಭಿಕ ಸಿದ್ಧತೆಗಳನ್ನು ಕೈಗೊಳ್ಳಬಹುದು ಎಂದು NASA ಹೇಳುತ್ತದೆ. ಹವಾಮಾನವನ್ನು ಗಮನದಲ್ಲಿಟ್ಟುಕೊಂಡು, ಬಲವಾದ ಗಾಳಿ ಬೀಸುವ ನಿರೀಕ್ಷೆಯಿರುವುದರಿಂದ, ಉಡಾವಣಾ ಪ್ಯಾಡ್‌ನಿಂದ ವೇದಿಕೆಯನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಲಾಗಿದೆ.

ಆರ್ಟೆಮಿಸ್ II ಮಿಷನ್ ಯಾವಾಗ ನಡೆಯುತ್ತದೆ?: ಇದಕ್ಕೂ ಮೊದಲು ಫೆಬ್ರವರಿ 20ರಂದು ಮತ್ತು ಮಾರ್ಚ್ 6, 2026 ರಂದು ಆರ್ಟೆಮಿಸ್ II ಮಿಷನ್ ಅನ್ನು ಪ್ರಾರಂಭಿಸುವ ಗುರಿಯನ್ನು ನಾಸಾ ಉಲ್ಲೇಖಿಸಿತ್ತು. ಆದರೆ ರಾಕೆಟ್‌ನ ಮೇಲಿನ ಹಂತಕ್ಕೆ ಹೀಲಿಯಂ ಹರಿವಿನ ಅಡಚಣೆಯಿಂದಾಗಿ ಕಾರ್ಯಾಚರಣೆಯನ್ನು ವಿಳಂಬಗೊಳಿಸಲಾಗಿದೆ. ಈಗ ಏಪ್ರಿಲ್‌ನ ಉಡಾವಣಾ ವಿಂಡೋಗೆ ಸ್ಥಳಾಂತರಿಸಲಾಗಿದೆ. ನಾಸಾದ ಆರ್ಟೆಮಿಸ್ II ಮಿಷನ್​ನಲ್ಲಿ ಮೂವರು ನಾಸಾ ಗಗನಯಾತ್ರಿಗಳಾದ ರೀಡ್ ವೈಸ್‌ಮನ್, ವಿಕ್ಟರ್ ಗ್ಲೋವರ್ ಮತ್ತು ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಬಾಹ್ಯಾಕಾಶ ಸಂಸ್ಥೆ (CSA) ಗಗನಯಾತ್ರಿ ಜೆರೆಮಿ ಹ್ಯಾನ್ಸೆನ್ ಸೇರಿದ್ದಾರೆ. ಅವರನ್ನು ಫೆಬ್ರವರಿ 21ರಂದು ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಲಾಯಿತು.

ಆರ್ಟೆಮಿಸ್ II ಮಿಷನ್ ನಾಸಾದ ಆರ್ಟೆಮಿಸ್ ಕಾರ್ಯಕ್ರಮದ ಮೊದಲ ಮಾನವಸಹಿತ ಆಳವಾದ ಬಾಹ್ಯಾಕಾಶ ಕಾರ್ಯಾಚರಣೆಯಾಗಿದ್ದು, ಇದರಲ್ಲಿ ನಾಲ್ಕು ಗಗನಯಾತ್ರಿಗಳು ಚಂದ್ರನ ಸುತ್ತಲೂ ಹಾರುತ್ತಾರೆ ಮತ್ತು ಭೂಮಿಗೆ ಹಿಂತಿರುಗುತ್ತಾರೆ. ಭವಿಷ್ಯದ ಮಾನವ ಚಂದ್ರನ ಇಳಿಯುವಿಕೆಗೆ ತಯಾರಿ ಮಾಡುವಲ್ಲಿ ಈ ಮಿಷನ್ ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಸಂಸ್ಥೆ ಪ್ರಸ್ತುತ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸುವತ್ತ ಗಮನಹರಿಸಿದೆ ಮತ್ತು ಮುಂಬರುವ ದಿನಗಳಲ್ಲಿ ಹೆಚ್ಚಿನ ನವೀಕರಣಗಳನ್ನು ಹಂಚಿಕೊಳ್ಳಬಹುದು.

ಓದಿ: ಹೋಳಿ ಹಬ್ಬದಂದೇ ರಕ್ತದಾಕಾರದಲ್ಲಿ ಕಂಗೋಳಿಸಲಿದ್ದಾನೆ ಚಂದ್ರ; ಭಾರತದಲ್ಲಿ ಕಾಣಲಿದೇಯಾ ಈ ‘ಬ್ಲಡ್​ ಮೂನ್​’?

Last Updated : February 26, 2026 at 2:05 PM IST