ಬುಕ್-ಸ್ಟೈಲ್ ಫೋಲ್ಡಬಲ್ ವಿಭಾಗಕ್ಕೆ ಮೊಟೊರೊಲಾ ಎಂಟ್ರಿ! ಸಿಇಎಸ್ 2026ರಲ್ಲಿ ಹೊಸ ಉತ್ಪನ್ನಗಳ ಪರಿಚಯ
CES 2026: ಮೊಟೊರೊಲಾ ತನ್ನ ಮೊದಲ ನೋಟ್-ಬುಕ್ ಸ್ಟೈಲ್ ಫೋಲ್ಡಬಲ್, ಸಿಗ್ನೇಚರ್ ಫ್ಲ್ಯಾಗ್‌ಶಿಪ್, AI ಟೂಲ್ಸ್ ಕಾನ್ಸೆಪ್ಟ್ ಸೇರಿದಂತೆ ಹೆಚ್ಚಿನ ಉತ್ಪನ್ನಗಳನ್ನು ಅನಾವರಣಗೊಳಿಸಿದೆ.

Published : January 8, 2026 at 11:11 AM IST
CES 2026: ಮೊಟೊರೊಲಾ CES 2026ರಲ್ಲಿ ಹಲವಾರು ಹೊಸ ಇಕೋ ಸಿಸ್ಟಮ್ ಸಾಧನಗಳನ್ನು ಅನಾವರಣಗೊಳಿಸಿದೆ. ಅದರಲ್ಲಿ ಅದರ ಮೊದಲ ಬುಕ್-ಸ್ಟೈಲ್ ಫೋಲ್ಡಬಲ್ ಫೋನ್, ಹೊಸ ಅಲ್ಟ್ರಾ-ಪ್ರೀಮಿಯಂ ಸೀರಿಸ್ ಮತ್ತು AI ಪ್ಲಾಟ್‌ಫಾರ್ಮ್ ಸೇರಿವೆ. ಈ ಎಲ್ಲಾ ಪ್ರಕಟಣೆಗಳು ಪ್ರೀಮಿಯಂ ಡಿಸೈನ್, AI ಮತ್ತು ಬಳಕೆದಾರರ ಅನುಭವದ ಮೇಲೆ ಕೇಂದ್ರೀಕರಿಸುತ್ತವೆ. ಹಾಗಾದರೆ ಮೊಟೊರೊಲಾ ಅನಾವರಣಗೊಳಿಸಿದ ಉತ್ಪನ್ನಗಳು ಯಾವುವು ಎಂಬುದು ನೋಡೋಣ ಬನ್ನಿ..
ಮೊಟೊರೊಲಾ ರೇಜರ್ ಫೋಲ್ಡ್: ಈ ಲಿಸ್ಟ್ನಲ್ಲಿರುವ ದೊಡ್ಡ ಘೋಷಣೆ ಅಂದ್ರೆ ಅದು ಮೊಟೊರೊಲಾ ರೇಜರ್ ಫೋಲ್ಡ್. ಇಲ್ಲಿಯವರೆಗೆ ಮೊಟೊರೊಲಾ ಫ್ಲಿಪ್-ಸ್ಟೈಲ್ನ ಫೋಲ್ಡಬಲ್ ಫೋನ್‌ಗಳನ್ನು ಮಾತ್ರ ಮಾಡಿದೆ. ಆದರೆ ರೇಜರ್ ಫೋಲ್ಡ್‌ನೊಂದಿಗೆ ಕಂಪನಿಯು ಬುಕ್-ಸ್ಟೈಲ್ನ ಫೋಲ್ಡಬಲ್ ವಿಭಾಗವನ್ನು ಪ್ರವೇಶಿಸಿದೆ. ಇದು 5.5-ಇಂಚಿನ ಬೃಹತ್ ಔಟರ್ ಡಿಸ್ಪ್ಲೇ ಹೊಂದಿದೆ. ನೀವು ಈ ಫೋನ್ ಅನ್ನು ಓಪನ್ ಮಾಡಿದಾಗ 8.1-ಇಂಚಿನ 2K LTPO ಇನ್ನರ್ ಡಿಸ್ಪ್ಲೇ ಅನ್ನು ಕಾಣುತ್ತೀರಿ. ಇದು ಮೋಟೋ ಪೆನ್ ಅಲ್ಟ್ರಾ ಸ್ಟೈಲಸ್ ಸಹ ಬೆಂಬಲಿಸುತ್ತದೆ.
ಇದರ ಕ್ಯಾಮೆರಾ ಸೆಟಪ್ ಸೋನಿ LYTIA ಮೇನ್ ಸೆನ್ಸಾರ್, ಅಲ್ಟ್ರಾವೈಡ್-ಮ್ಯಾಕ್ರೋ ಲೆನ್ಸ್ ಮತ್ತು 3x ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ನೊಂದಿಗೆ 50MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು ಔಟರ್ ಸ್ಕ್ರೀನ್ನಲ್ಲಿ 32MP ಸೆಲ್ಫಿ ಕ್ಯಾಮೆರಾ ಮತ್ತು ಇನ್ನರ್ ಡಿಸ್ಪ್ಲೇಯಲ್ಲಿ ಮತ್ತೊಂದು 20MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಮೊಟೊರೊಲಾ ಸಿಗ್ನೇಚರ್: ಮೊಟೊರೊಲಾ ತನ್ನ ಹೊಸ ಅಲ್ಟ್ರಾ-ಪ್ರೀಮಿಯಂ ಸರಣಿಯಲ್ಲಿ "ಮೊಟೊರೊಲಾ ಸಿಗ್ನೇಚರ್" ಅನ್ನು ಸಹ ಪರಿಚಯಿಸಿದೆ. ಇದು ತನ್ನ ಅತ್ಯಂತ ಶಕ್ತಿಶಾಲಿ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್ ಎಂದು ಕಂಪನಿ ಹೇಳಿಕೊಂಡಿದೆ. ಫೋನ್ ಏರ್ಕ್ರಾಪ್ಟ್-ಗ್ರೇಡ್ ಅಲ್ಯೂಮಿನಿಯಂ ಫ್ರೇಮ್ ಮತ್ತು ವಿಶಿಷ್ಟ ಕಲರ್ ಆಪ್ಶನ್ಸ್ ಹೊಂದಿದೆ. ಕಂಪನಿಯು ಏಳು ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್ಸ್ ಒದಗಿಸುವುದಾಗಿ ಭರವಸೆ ನೀಡುತ್ತದೆ.
ಇದರ ಮತ್ತೊಂದು ವಿಶೇಷ ವೈಶಿಷ್ಟ್ಯವೆಂದರೆ ಅದರ ನಾಲ್ಕು 50MP ಕ್ಯಾಮೆರಾಗಳು. ಇದು ಸೋನಿ LYTIA 828 ಮೇನ್ ಸೆನ್ಸಾರ್, 50MP ಅಲ್ಟ್ರಾವೈಡ್-ಮ್ಯಾಕ್ರೋ ಕ್ಯಾಮೆರಾ, 3x ಆಪ್ಟಿಕಲ್ ಜೂಮ್ ಅನ್ನು ಬೆಂಬಲಿಸುವ 50MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಮತ್ತು 100x ಡಿಜಿಟಲ್ ಜೂಮ್ ಅನ್ನು ಹೊಂದಿದೆ. ಇದು 50MP ಫ್ರಂಟ್ ಕ್ಯಾಮೆರಾವನ್ನು ಸಹ ಹೊಂದಿದೆ. ಫೋನ್ ಸ್ನಾಪ್‌ಡ್ರಾಗನ್ 8 Gen 5 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು 5,200 mAh ಬ್ಯಾಟರಿ ಹೊಂದಿದ್ದು, ಇದು 90W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೋನ್ ಕೇವಲ 6.99 mmನ ಸ್ಲಿಮ್ ವಿನ್ಯಾಸವನ್ನು ಹೊಂದಿದೆ. ಯುರೋಪ್‌ನಲ್ಲಿ ಇದರ ಆರಂಭಿಕ ಬೆಲೆ 999 (ಸುಮಾರು ರೂ.1 ಲಕ್ಷ 5 ಸಾವಿರ)
FIFA ವರ್ಲ್ಡ್ಕಪ್ 26 ಎಡಿಷನ್: Motorola Razr FIFA ವರ್ಲ್ಡ್ಕಪ್ 26 ಎಡಿಷನ್ ಅನ್ನು ಸಹ ಪರಿಚಯಿಸಿದೆ. ಈ ಫೋನ್ ಅನ್ನು ವಿಶೇಷವಾಗಿ ಫುಟ್‌ಬಾಲ್ ಮತ್ತು FIFA ಅಭಿಮಾನಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಹಿಂಭಾಗದ ಪ್ಯಾನೆಲ್ನಲ್ಲಿ ವಿಶೇಷ ಗ್ರಾಫಿಕ್ಸ್ ಮತ್ತು ವಿಗನ್ ಲೆದರ್ ಫಿನಿಷಿಂಗ್ ಹೊಂದಿದೆ. ಫೋನ್ 4,500 mAh ಬ್ಯಾಟರಿ ಮತ್ತು IP48 ರೇಟಿಂಗ್‌ನೊಂದಿಗೆ ಬರುತ್ತದೆ. ಫೆಬ್ರವರಿ 12 ರಿಂದ ಆಯ್ದ ಮಾರುಕಟ್ಟೆಗಳಲ್ಲಿ $699.99ಗೆ (ಸುಮಾರು 63 ಸಾವಿರ) ಈ ಫೋನ್ ಲಭ್ಯವಿರುತ್ತದೆ.
Lenovo ಮತ್ತು Motorola ಜಂಟಿಯಾಗಿ "Quira" ಎಂಬ ಹೊಸ AI ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿವೆ. ಇದು ಎಲ್ಲಾ Motorola ಮತ್ತು Lenovo ಸಾಧನಗಳನ್ನು ಸಂಪರ್ಕಿಸುವ ಏಕೀಕೃತ AI ವ್ಯವಸ್ಥೆಯಾಗಿದೆ. ಇದು Moto AI, Lenovo AI Now ಮತ್ತು ಇತರ AI ಪರಿಕರಗಳನ್ನು ಒಂದೇ ಇಂಟರ್ಫೇಸ್‌ಗೆ ಸಂಯೋಜಿಸುತ್ತದೆ. ಈ "Quira" ಪ್ಲಾಟ್‌ಫಾರ್ಮ್ ಬಳಕೆದಾರರ ಅಭ್ಯಾಸಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಕಾರ್ಯಗಳನ್ನು ಸರಳಗೊಳಿಸುತ್ತದೆ. ಇದರಿಂದಾಗಿ ಎಲ್ಲಾ ಸಾಧನಗಳಲ್ಲಿ ತಡೆರಹಿತ ಅನುಭವವನ್ನು ಒದಗಿಸುತ್ತದೆ.
ಇದರೊಂದಿಗೆ ಮೊಟೊರೊಲಾ ತನ್ನ ಸುತ್ತಮುತ್ತಲಿನ ಪ್ರದೇಶಗಳನ್ನು ನೋಡುವ, ಕೇಳುವ ಮತ್ತು ಅರ್ಥಮಾಡಿಕೊಳ್ಳುವ ಮತ್ತು ನೈಜ-ಸಮಯದ ಸಲಹೆಗಳನ್ನು ನೀಡುವ AI-ಪವರ್ಡ್ ಧರಿಸಬಹುದಾದ ಸಾಧನ ಪರಿಕಲ್ಪನೆಯನ್ನು ಸಹ ಪ್ರದರ್ಶಿಸಿತು. ಇದರ ಜೊತೆಗೆ ಮೋಟೋ ಸೌಂಡ್ ಫ್ಲೋ ಸ್ಪೀಕರ್, ಮೋಟೋ ಪೆನ್ ಅಲ್ಟ್ರಾ, ಹೊಸ ಮೋಟೋ ವಾಚ್ ಮತ್ತು ಮೋಟೋ ಟ್ಯಾಗ್ 2 ನಂತಹ ಇಕೋ ಸಿಸ್ಟಮ್ ಸಾಧನಗಳನ್ನು ಸಹ CES 2026 ರಲ್ಲಿ ಅನಾವರಣಗೊಳಿಸಲಾಯಿತು.
ಓದಿ: ಅನ್ವೇಷ ಸ್ಯಾಟಲೈಟ್: ವರ್ಷದ ಮೊದಲ ಉಡಾವಣೆಗೆ ಇಸ್ರೋ ಸಜ್ಜು! ಭೂಮಿಗೆ ಬರುತ್ತಾ ಬೆಂಕಿಯ ಉಂಡೆ?

