ಗ್ಯಾಜೆಟ್ನಂತಿದೆ ಮಹೀಂದ್ರಾದ ಹೊಸ ಎಸ್‌ಯುವಿ ಕಾರು, ಇದರಲ್ಲಿದೆ 540 ಡಿಗ್ರಿ ಕ್ಯಾಮೆರಾ!
Mahindra XUV 7XO Launched: ಭಾರತದ ಪ್ರಮುಖ ವಾಹನ ತಯಾರಕರ ಮಹೀಂದ್ರಾ ತನ್ನ XUV 7XO ಅನ್ನು ದೇಶೀಯ ಮಾರುಕಟ್ಟೆಗೆ ಪರಿಚಯಿಸಿದೆ.

Published : January 6, 2026 at 8:47 AM IST
Mahindra XUV 7XO Launched: ಆಧುನಿಕ ಕಾರುಗಳು ಈಗ ಗ್ಯಾಜೆಟ್‌ಗಳಂತೆ ಮಾರ್ಪಡುತ್ತಿವೆ. ಬಟನ್ ಒತ್ತಿದರೆ ಎಂಜಿನ್ ಆನ್ ಆಗುವುದು, ಮಳೆ ಬಂದ್ರೆ ಸಾಕು ಆಟೋಮೆಟಿಕ್ ಆಗಿ ವೈಫರ್ ಸ್ಟಾರ್ಟ್ ಆಗುವುದು, ಧ್ವನಿ ಮೂಲಕ ಸನ್‌ರೂಫ್ ಓಪನ್ ಆಗುವುದು.. ಹೀಗೆ ಅನೇಕ ಫೀಚರ್ಗಳು ಈಗ ಗ್ಯಾಜೆಟ್‌ಗಳಂತೆ ಕೆಲಸಮಾಡುತ್ತಿವೆ. ಇದಕ್ಕೆ ಕಾರಣ, ಕಾರು ಕಂಪನಿಗಳು ಈಗ ಹೆಚ್ಚು ಉಪಯುಕ್ತ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ಪರಿಚಯಿಸಲು ಸ್ಪರ್ಧಿಸುತ್ತಿವೆ. ದೇಶದ ಪ್ರಮುಖ ಆಟೋಮೊಬೈಲ್ ತಯಾರಕರಾದ ಮಹೀಂದ್ರಾ ಮತ್ತು ಮಹೀಂದ್ರಾ ತನ್ನ ಹೊಸ ಎಸ್‌ಯುವಿ ಮಹೀಂದ್ರಾ XUV 7XO ಗಾಗಿ ಗ್ಲೋಬಲ್ ಪ್ರೀಮಿಯಂ ಈವೆಂಟ್‌ನಲ್ಲಿ ಇದೇ ರೀತಿಯ ಕೊಡುಗೆಯನ್ನು ಅನಾವರಣಗೊಳಿಸಿದೆ.
ಬೆಲೆ ಮತ್ತು ಬುಕಿಂಗ್: ಮಹೀಂದ್ರಾ ಹೆಚ್ಚು ಸುಧಾರಿತ ಎಂಜಿನ್ ಅನಾವರಣಗೊಳಿಸಿದೆ. ಕಂಪನಿಯು ತನ್ನ ಹೊಸ SUV ಆದ XUV 7XO ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ SUVಯ ಆರಂಭಿಕ ಬೆಲೆ ₹13.66 ಲಕ್ಷ (ಎಕ್ಸ್-ಶೋರೂಂ) ಎಂದು ನಿಗದಿಪಡಿಸಲಾಗಿದೆ. ಈ SUV ಗಾಗಿ ಅಧಿಕೃತ ಬುಕಿಂಗ್‌ಗಳು ಜನವರಿ 14 ರಂದು ಅಂದ್ರೆ ಮಕರ ಸಂಕ್ರಾಂತಿಯಂದು ಪ್ರಾರಂಭವಾಗಲಿವೆ. ಜನವರಿ 8 ರಂದು ಟೆಸ್ಟ್ ಡ್ರೈವ್‌ಗಳು ಶುರುವಾಗಲಿವೆ.

ಕಂಪನಿಯು ಮೊದಲು XUV700 ಅನ್ನು ಸುಮಾರು ಐದು ವರ್ಷಗಳ ಹಿಂದೆ ಪರಿಚಯಿಸಿತು. ಈ ಹೊಸ SUV ಅದರ ಇತ್ತೀಚಿನ ಪೀಳಿಗೆಯ ಮಾದರಿಯಾಗಿದ್ದು, ಇದನ್ನು 'XUV 7XO' ಎಂದು ಹೆಸರಿಸಲಾಗಿದೆ. ಈ ಬದಲಾವಣೆಗಳು ಹೆಸರಿನಲ್ಲಿ ಮಾತ್ರವಲ್ಲ, ವಾಹನದಾದ್ಯಂತ ಇವೆ. ಮಾರುಕಟ್ಟೆಯಲ್ಲಿರುವ ಯಾವುದೇ ICE (ಪೆಟ್ರೋಲ್-ಡೀಸೆಲ್) ಕಾರಿನಲ್ಲಿ ಕಂಡುಬರದ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ತಂತ್ರಜ್ಞಾನವನ್ನು ತಾನು ಬಳಸುತ್ತಿದ್ದೇನೆ ಎಂದು ಕಂಪನಿ ಹೇಳಿಕೊಂಡಿದೆ.
ಎಕ್ಸೀಟಿಯರ್ ಡಿಸೈನ್ ಅದ್ಭುತ: ಹೊಸ XUV 7XO ಮಹೀಂದ್ರಾದ ಇತ್ತೀಚಿನ ಎಲೆಕ್ಟ್ರಿಕ್ ವಾಹನಗಳಿಂದ ಪ್ರೇರಿತವಾದ ವಿನ್ಯಾಸ ಭಾಷೆಯನ್ನು ಬಳಸುತ್ತದೆ. ಅನೇಕ ವಿನ್ಯಾಸ ಅಂಶಗಳನ್ನು XEV 9S ಮತ್ತು XEV 9E ನಿಂದ ಎರವಲು ಪಡೆಯಲಾಗಿದೆ. ಈ SUV ಬೂಮರಾಂಗ್-ಆಕಾರದ ಡೇಟೈಮ್ ರನ್ನಿಂಗ್ ಲೈಟ್‌ಗಳು (DRLs), ಟ್ರೆಪೆಜಾಯಿಡಲ್ ಫ್ರಂಟ್ LED ಹೆಡ್‌ಲ್ಯಾಂಪ್‌ಗಳು, ಷಡ್ಭುಜೀಯ ವಿವರಗಳೊಂದಿಗೆ ಹೊಸ ಟೈಲ್ ಲ್ಯಾಂಪ್‌ಗಳು ಮತ್ತು ಪರಿಷ್ಕೃತ ಫ್ರಂಟ್ ಗ್ರಿಲ್ ಅನ್ನು ಒಳಗೊಂಡಿದೆ.

ಸೈಡ್ ಪ್ರೊಫೈಲ್ ಹೆಚ್ಚಾಗಿ ಹೊರಹೋಗುವ XUV700 ಅನ್ನು ಹೋಲುತ್ತದೆ. ಆದರೆ ಹೊಸ ಅಲಾಯ್ ವೀಲ್ ವಿನ್ಯಾಸಗಳು ಇದಕ್ಕೆ ವಿಶಿಷ್ಟ ಲುಕ್ ಅನ್ನು ನೀಡುತ್ತವೆ. ಹಿಂಭಾಗದಲ್ಲಿ ಕನೆಕ್ಟೆಡ್ LED ಟೈಲ್‌ಲೈಟ್‌ಗಳು ಮತ್ತು ಹೊಸ ಬಂಪರ್ SUV ಗೆ ಹೆಚ್ಚು ಆಕರ್ಷಕ ಲುಕ್ ಅನ್ನು ನೀಡುತ್ತದೆ.
ಇಂಟೀರಿಯರ್ ತುಂಬಾ ವಿಶೇಷ: ಕ್ಯಾಬಿನ್ ಒಳಗೆ XUV 7XO ಹೊಸ ಅಪ್ಹೋಲ್ಸ್ಟರಿ ಕಲರ್ ಥೀಮ್ ಅನ್ನು ಹೊಂದಿದೆ. ಅತಿದೊಡ್ಡ ಬದಲಾವಣೆಯೆಂದರೆ ಟ್ರಿಪಲ್-ಸ್ಕ್ರೀನ್ ಸೆಟಪ್, ಇದರಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೆಂಟ್ರಲ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಮುಂಭಾಗದ ಪ್ರಯಾಣಿಕರಿಗೆ ಪ್ರತ್ಯೇಕ ಸ್ಕ್ರೀನ್ ಸೇರಿವೆ. ಇದು ಹೊಸ ಎರಡು-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಟಚ್-ಆಧಾರಿತ HVAC ಕಂಟ್ರೋಲ್ ಪ್ಯಾನೆಲ್ ಅನ್ನು ಸಹ ಒಳಗೊಂಡಿದೆ. ಕಂಫರ್ಟ್ ವೈಶಿಷ್ಟ್ಯಗಳಲ್ಲಿ ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಮುಂಭಾಗದ ಪ್ರಯಾಣಿಕರಿಗೆ ಪವರ್ಡ್ ಬಾಸ್ ಮೋಡ್, ಡಾಲ್ಬಿ ಅಟ್ಮಾಸ್‌ನೊಂದಿಗೆ 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಸೇರಿವೆ.
XUV 7XO ದೇಶದ ಮೊದಲ ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್ ಸಿಸ್ಟಮ್‌ಗಳೊಂದಿಗೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ತನ್ನ ಡ್ಯಾಶ್‌ಬೋರ್ಡ್‌ನಲ್ಲಿರುವ ಪನೋರಮಿಕ್ ಡಿಸ್ಪ್ಲೇ ಕಾರಿನೊಳಗಿನ ಎಲ್ಲರಿಗೂ ತಲ್ಲೀನಗೊಳಿಸುವ ಅನುಭವವನ್ನು ನೀಡುತ್ತದೆ ಎಂದು ಮಹೀಂದ್ರಾ ಹೇಳುತ್ತದೆ. ಹೆಚ್ಚುವರಿಯಾಗಿ ಇದು ವೆನ್ಯೂಸ್ಕೇಪ್ ಎಂಬ ವಿಶೇಷ ವೈಶಿಷ್ಟ್ಯವನ್ನು ಹೊಂದಿದ್ದು, ಅತ್ಯುತ್ತಮ ಆಡಿಯೊ ಗುಣಮಟ್ಟವನ್ನು ಒದಗಿಸುತ್ತದೆ. ಇದು ಅಲೆಕ್ಸಾ ಮತ್ತು ಚಾಟ್‌ಜಿಪಿಟಿ-ಆ್ಯಕ್ಟಿವ್ಗೊಳಿಸಿದ ಕ್ಯಾಬಿನ್ ಅನ್ನು ಹೊಂದಿದೆ. ಇದು ಭಾರತದ ಕಾರಿಗೆ ಮೊದಲನೆಯದು.

ಎಂಜಿನ್ ಮತ್ತು ಗೇರ್‌ಬಾಕ್ಸ್: ಎಂಜಿನ್‌ಗಳ ವಿಷಯದಲ್ಲಿ ಹೊಸ XUV 7XO ಅದೇ ವಿಶ್ವಾಸಾರ್ಹ ಸೆಟಪ್ ಅನ್ನು ಉಳಿಸಿಕೊಂಡಿದೆ. ಇದು 200 bhp ಉತ್ಪಾದಿಸುವ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 185 bhp ವರೆಗೆ ಉತ್ಪಾದಿಸುವ 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಒಳಗೊಂಡಿದೆ. ಎರಡೂ ಎಂಜಿನ್‌ಗಳು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟೆಡ್ ಆಟೋಮಟಿಕ್ ಗೇರ್‌ಬಾಕ್ಸ್‌ನ ಆಯ್ಕೆಯೊಂದಿಗೆ ಲಭ್ಯವಿದೆ. ಡೀಸೆಲ್ ಎಂಜಿನ್‌ನ ಉನ್ನತ ರೂಪಾಂತರಗಳು ಆಲ್-ವೀಲ್ ಡ್ರೈವ್ ಸಿಸ್ಟಮ್‌ನ ಆಯ್ಕೆಯನ್ನು ಸಹ ನೀಡುತ್ತವೆ.
ಸುರಕ್ಷತೆ ವಿಷಯದಲ್ಲಿ ರಾಜಿಯೇ ಇಲ್ಲ: ಮಹೀಂದ್ರಾ XUV 7XO ಸಹ ದೃಢವಾದ ಸುರಕ್ಷತಾ ಪ್ಯಾಕೇಜ್‌ನೊಂದಿಗೆ ಬರುತ್ತದೆ. ಇದು 540-ಡಿಗ್ರಿ ಕ್ಯಾಮೆರಾ, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ISOFIX ಸೀಟ್ ಆಂಕರ್‌ಗಳನ್ನು ಒಳಗೊಂಡಿದೆ. ಲೆವೆಲ್-2 ADAS ತಂತ್ರಜ್ಞಾನವನ್ನು ಸಹ ಒದಗಿಸಲಾಗಿದೆ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಮತ್ತು ಆಟೋಮೆಟಿಕ್ ಎಮೆರ್ಜೆನ್ಸಿ ಬ್ರೇಕಿಂಗ್ ಸೇರಿದಂತೆ ಒಟ್ಟು 17 ADAS ವೈಶಿಷ್ಟ್ಯಗಳನ್ನು ನೀಡುತ್ತದೆ.
ಈ SUV 75 ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು ಉತ್ತಮ ಸುರಕ್ಷತಾ ರೇಟಿಂಗ್ ಅನ್ನು ಸಾಧಿಸಲು ಸಹಾಯ ಮಾಡುತ್ತದೆ. XUV700 2021 ರಲ್ಲಿ ಗ್ಲೋಬಲ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ (NCAP) ಕ್ರ್ಯಾಶ್ ಟೆಸ್ಟ್‌ನಲ್ಲಿ ಫುಲ್ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ ಎಂಬುದು ಗಮನಿಸಬೇಕಾದ ಸಂಗತಿ ಮತ್ತು ಹೊಸ XUV 7XO ಅನ್ನು ಭಾರತದ NCAP ನಲ್ಲಿ ಅದೇ ಮಟ್ಟದ ಸುರಕ್ಷತಾ ಕಾರ್ಯಕ್ಷಮತೆಯನ್ನು ಸಾಧಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಏನಿದು 540 ಡಿಗ್ರಿ ಕ್ಯಾಮೆರಾ?: ನೀವು ಈಗಾಗಲೇ 360-ಡಿಗ್ರಿ ಕ್ಯಾಮೆರಾ ವ್ಯವಸ್ಥೆಗಳ ಬಗ್ಗೆ ಕೇಳಿರಬಹುದು, ಅದು ನಿಮ್ಮ ಕಾರಿನ ಸುತ್ತಲ ನೋಟವನ್ನು ನೀಡುತ್ತದೆ. ಇದು ಪಾರ್ಕಿಂಗ್ ಮತ್ತು ಕುಶಲತೆಗೆ ಸಹಾಯ ಮಾಡುತ್ತದೆ. 540-ಡಿಗ್ರಿ ವ್ಯವಸ್ಥೆಯು ಅಂಡರ್‌ಬಾಡಿ ವ್ಯೂ ಅನ್ನು ಸೇರಿಸುವ ಮೂಲಕ ಆ ಕಲ್ಪನೆಯನ್ನು ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗುತ್ತದೆ. ವ್ಹೀಲ್ನ ಹಿಂದೆ ನಿಮಗೆ ಇನ್ನಷ್ಟು ನಿಯಂತ್ರಣ ಮತ್ತು ವಿಶ್ವಾಸವನ್ನು ನೀಡುತ್ತದೆ. ಇದನ್ನು ಸಂಪೂರ್ಣ ಸುತ್ತುವರಿದ ದೃಷ್ಟಿಕೋನವೆಂದು ಭಾವಿಸಿ.. ಅಂದ್ರೆ ಮೇಲೆ, ಸುತ್ತಲೂ ಮತ್ತು ಈಗ ನಿಮ್ಮ ವಾಹನದ ಕೆಳಗೂ ಕ್ಯಾಮೆರಾ ಕಾರ್ಯ ನಿರ್ವಹಿಸುತ್ತದೆ.
ಸರಳವಾಗಿ ಹೇಳುವುದಾದರೆ, 540-ಡಿಗ್ರಿ ಕ್ಯಾಮೆರಾ ವ್ಯವಸ್ಥೆಯು ಕಾರಿನ ಸುತ್ತಲೂ ಇರಿಸಲಾದ ಬಹು ಕ್ಯಾಮೆರಾಗಳನ್ನು ಬಳಸುತ್ತದೆ: ಮುಂಭಾಗ, ಹಿಂಭಾಗ, ಎರಡೂ ಬದಿಗಳು ಮತ್ತು ಕೆಳಗೆ. ಸಿಸ್ಟಮ್ ಆ ಎಲ್ಲಾ ಫೀಡ್‌ಗಳನ್ನು ನಿಮ್ಮ ಡ್ಯಾಶ್‌ಬೋರ್ಡ್ ಸ್ಕ್ರೀನ್ನಲ್ಲಿ ನೀವು ನೋಡಬಹುದಾದ ಲೈವ್, ಹೆಚ್ಚಿನ ರೆಸಲ್ಯೂಶನ್ ಚಿತ್ರಕ್ಕೆ ಒಟ್ಟಿಗೆ ಸೆರಿಸುತ್ತದೆ. ಇದು ನಿಮ್ಮ ಕನ್ನಡಿಗಳು ಅಥವಾ ಸಾಂಪ್ರದಾಯಿಕ ಕ್ಯಾಮೆರಾ ವ್ಯವಸ್ಥೆಗಳು ತಪ್ಪಿಸಿಕೊಳ್ಳಬಹುದಾದ ಯಾವುದನ್ನಾದರೂ ಸೆರೆಹಿಡಿಯಲು ನಿಮಗೆ ಅನುಮತಿಸುತ್ತದೆ. ಅಂದ್ರೆ ಬಂಡೆಗಳು, ಗುಂಡಿಗಳು, ಪಾರ್ಕಿಂಗ್ ಬ್ಲಾಕ್‌ಗಳು ಅಥವಾ ನಿಮ್ಮ ಬಂಪರ್ ಕೆಳಗೆ ಅಡಗಿರುವ ಯಾವುದನ್ನಾದರೂ ಸರಿ ಸೆರೆಹಿಡಿಯಬಹುದು.

ಹಳೆಯ 360-ಡಿಗ್ರಿ ಸೆಟಪ್‌ಗಳಿಗೆ ಹೋಲಿಸಿದರೆ, 540-ಡಿಗ್ರಿ ವ್ಯವಸ್ಥೆಯು ಅರಿವಿನ ಹೆಚ್ಚುವರಿ ಪದರವನ್ನು ಸೇರಿಸುತ್ತದೆ. ಆಫ್-ರೋಡ್ ಸವಾರರು, ನಗರ ಚಾಲಕರು ಅಥವಾ ತಮ್ಮ ಸುತ್ತಮುತ್ತಲಿನ ಸ್ಪಷ್ಟ ಚಿತ್ರಣವನ್ನು ಬಯಸುವ ಯಾರಿಗಾದರೂ ಇದು ವಿಶೇಷವಾಗಿ ಸಹಾಯಕವಾಗಿದೆ.
ಇದನ್ನೂ ಓದಿ: ಹೊಸ ಟರ್ಬೊ - ಪೆಟ್ರೋಲ್ ಎಂಜಿನ್‌ನೊಂದಿಗೆ ಟಾಟಾ ‘ಪಂಚ್’ ಫೇಸ್‌ಲಿಫ್ಟ್!: ಟೀಸರ್ ಔಟ್

